ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತೂ ಇಂತೂ ಪಾಡ್ ಟ್ಯಾಕ್ಸಿ ಯೋಜನೆಗೆ ಬಿಬಿಎಂಪಿ ಅಸ್ತು!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಬೆಂಗಳೂರಿಗರು ಕಾತುರದಿಂದ ಕಾಯುತ್ತಿರುವ ಪಾಡ್ ಟ್ಯಾಕ್ಸಿ ಯೋಜನೆಗೆ ಬಿಬಿಎಂಪಿ ಕೊನೆಗೂ ಒಪ್ಪಿಗೆ ಸೂಚಿಸಿದೆ. ಗುರುವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಸಮ್ಮತಿ ದೊರೆತಿದೆ.

ಸಚಿವ ಕೆಜೆ ಜಾರ್ಜ್ ಪಾಲುದಾರಿಕೆಯ ಕಂಪನಿಗೆ ಕಾಮಗಾರಿಯ ಕಾರ್ಯಾದೇಶ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪಾಡ್‌ ಟ್ಯಾಕ್ಸಿ ಯೋಜನೆಗೆ ಆರಂಭದಲ್ಲೇ ಗ್ರಹಣ

ಸ್ಮಾರ್ಟ್ ಪರ್ಸನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈ.ಲಿಮಿಟೆಡ್ ಅಲ್ಟ್ರಾ ಪಿಆರ್ ಟಿ ಲಿಮಿಟೆಡ್, ಎಂಬಸ್ಸಿ ಪ್ರಾಪರ್ಟಿ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಕಂಪನಿಗಳು ಪಾಡ್ ಟ್ಯಾಕ್ಸಿ ಯೋಜನೆಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಕಂಪನಿಗಳು ಪಾಲಿಕೆಗೆ ವರ್ಷ 6.55 ಕೋಟಿ ರೂ. ಹಣ ಪಾವತಿಸಲಿದೆ.

BBMP council approves POD taxi project

ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ?ಸಂಚಾರ ದಟ್ಟಣೆ ಕಡಿಮೆ ಮಾಡುವ ಪಾಡ್‌ ಟ್ಯಾಕ್ಸಿಗೆ ಒಪ್ಪಿಗೆ ಸಿಗುತ್ತಾ?

ಬಿಬಿಎಂಪಿಯು ಒಟ್ಟು 5 ಮಾರ್ಗಗಳಲ್ಲಿ 35 ಕಿ.ಮೀ ಉದ್ದದ ಪಾಡ್ ಟ್ಯಾಕ್ಸಿ ಮಾರ್ಗ ನಿರ್ಮಾಣಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ 43 ನಿಲ್ದಾಣಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ. ಎಂಜಿ ರಸ್ತೆಯ ಟ್ರಿನಿಟಿ ವೃತ್ತದಿಂದ ಲೀಲಾ ಪ್ಯಾಲೇಸ್, ಲೀಲಾಪ್ಯಾಲೇಸ್ ನಿಂದ ಮಾರತ್ ಹಳ್ಳಿ ಜಂಕ್ಷನ್, ಮಾರತ್ ಹಳ್ಳಿ ಜಂಕ್ಷನ್ ನಿಂದ ಇಪಿಐಪಿ ಗ್ರಾಫೈಟ್ ಇಂಡಿಯಾ ರಸ್ತೆ, ಟ್ರಿನಿಟಿ ಮೆಟ್ರೋದಿಂದ ಎಚ್‌ಎಸ್ ಆರ್‌ ಲೇಔಟ್ ಹೀಗೆ ಒಟ್ಟು 43ನಿಲ್ದಾಣಗಳನ್ನು ನಿರ್ಮಿಸಲಿದ್ದಾಎ.

English summary
Despite opposition by Bjp members, BBMP council has approved proposed most awaited 35 km long POD taxi project in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X