BBMP: ಗೋ ಬ್ಯಾಕ್ ಕಮಿಷನರ್ ಎಂದ ಗುತ್ತಿಗೆದಾರರು, ಯಾಕೆ ?
BBMP Commissioner: ಬೆಂಗಳೂರಿನ ಕಮಿಷನರ್ ಅನ್ನು ಬಿಬಿಎಂಪಿಯ ಕಾಂಟ್ರ್ಯಾಕ್ಟರ್ಸ್ ಗೋ ಬ್ಯಾಕ್ ಎನ್ನುತ್ತಿದ್ದಾರೆ. ಈ ಸಮಸ್ಯೆಗಳಿಗೆಲ್ಲ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ ಕಾರಣ ಎಂದು ದೂರಲಾಗುತ್ತಿದೆ. ಕೂಡಲೇ ಅವರು ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಹ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರ ಬಿಲ್ ಬಾಕಿ ವಿಷಯ ಇದೀಗ ಕಾಂಟ್ರ್ಯಾಕ್ಟರ್ಸ್ ವರ್ಸ್ ಕಮಿಷನರ್ ಎನ್ನುವಂತಾಗಿದೆ.
ಬಿಬಿಎಂಪಿ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘವು ಜಂಟಿಯಾಗಿ ಬಿಬಿಎಂಪಿ ಪಾಲಿಕೆ ಗುತ್ತಿಗೆದಾರರ ಶೇಕಡ 25 ಬಾಕಿ ಬಿಲ್ ಬಿಡುಗಡೆಗಡೆ ಮಾಡುವಂತೆ ಆಗ್ರಹಿಸಿತ್ತು. ಬಾಕಿಬಿಲ್ ಬಿಡುಗಡೆಗೆ ಆಗ್ರಹಿಸಿ, ಕಳೆದ ಮೂರುದಿನದಿಂದಲೂ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದೆ. ಬುಧವಾರ ಉಪವಾಸ ಸತ್ಯಾಗ್ರಹವನ್ನೂ ಮಾಡಿದ್ದರು. ಇದಕ್ಕೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಮತ್ತು ಪದಾಧಿಕಾರಿಗಳು ಸಹ ಬೆಂಬಲ ಸೂಚಿಸಿದ್ದರು.

ಬಿಬಿಎಂಪಿಯು ಕಾಮಗಾರಿ ಬಿಲ್ ಪಾವತಿ ತಡ ಮಾಡುತ್ತಿರುವುದರಿಂದ ಬ್ಯಾಂಕ್‌ನಿಂದ ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗುತ್ತಿದೆ. ಕಾಮಗಾರಿ ಬಿಲ್ ಸಂಪೂರ್ಣ ಪಾವತಿಯಾಗಿಲ್ಲವೆಂದರೆ ಗುತ್ತಿಗೆದಾರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಹೀಗಾಗಿ, ಗುತ್ತಿಗೆದಾರರ ಉಳಿಯಬೇಕೆಂದರೆ, ಸರ್ಕಾರ ಮಧ್ಯಸ್ಥಿಕೆವಹಿಸಿ ಕೊಡಲೇ ಶೇಕಡ 25ರಷ್ಟು ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದರು.
"ಪಾಲಿಕೆಯಿಂದ ಆಯುಕ್ತರು ತೊಲಗಲಿ"
ಬಿಬಿಎಂಪಿಯಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಇಲ್ಲಿಂದ ತೊಲಗಬೇಕು. ಅವರು ಇಲ್ಲಿಂದ ಹೋಗಬೇಕು ಎಂದು ಆಗ್ರಹಿಸಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನಮಗೆ ಸರಿಯಾಗಿ ರೆಸ್ಪಾನ್ಸ್‌ಮಾಡುತ್ತಿಲ್ಲ. ಯಾವ ವಿಷಯದ ಬಗ್ಗೆಯೂ ಸ್ಪಂದಿಸುವುದಿಲ್ಲ. ಅವರಿಂದಲೇ ಬಿಬಿಎಂಪಿ ಈ ಪರಿಸ್ಥಿಗೆ ತಲುಪಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಇದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ನೋ ಕಮೆಂಟ್ಸ್ ಎಂದು ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತರ ಮೇಲೆ ಆರೋಪವೇಕೆ
ಬಿಬಿಎಂಪಿ ಆಯುಕ್ತರ ಮೇಲೆ ಕಳೆದ ಕೆಲವು ದಿನಗಳಿಂದ ಬಿಬಿಎಂಪಿಯ ಗುತ್ತಿಗೆದಾರರು ಆರೋಪ ಮಾಡುತ್ತಿದ್ದಾರೆ. ಅದರಲ್ಲಿ ಮುಖ್ಯ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತರು ನಮ್ಮ ಸಮಸ್ಯೆಗಳಿಗೆ ಸೂಕ್ತ ಮಾದರಿಯಲ್ಲಿ ಸ್ಪಂದಿಸುತ್ತಿಲ್ಲ ಎನ್ನುವುದು. ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ ಕೋಟ್ಯಾಂತರ ರೂಪಾಯಿ ಬಿಲ್ ಬಾಕಿ ಉಳಿದಿದೆ. ಆದರೆ, ನಾವು ಮಾತನಾಡಲು ಹೋದಾಗ ಆಯುಕ್ತರು ಸಮಾಧಾನಕರವಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಗುತ್ತಿಗೆದಾರರ ಆರೋಪವಾಗಿದೆ.
ಇನ್ನೊಂದು ವಾರದಲ್ಲಿ ಬಿಲ್ ಬಾಕಿ ಬಿಡುಗಡೆ
ಬಿಬಿಎಂಪಿಯ ಗುತ್ತಿಗೆದಾರರಿಗೆ ಬಿಲ್ ಪಾವತಿ ವೇಳೆ ತಡೆಹಿಡಿಯಲಾಗಿರುವ ಶೇ.25 ರಷ್ಟು ಹಣವನ್ನು ಮುಂದಿನ ಒಂದು ವಾರದಲ್ಲಿ ಬಿಡುಗಡೆ ಮಾಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಭರವಸೆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಗುತ್ತಿಗೆದಾರರು ಅನಿರ್ಧಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ.
ಗುತ್ತಿಗೆದಾರರು ಕರೆ ನೀಡಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ತಿಳಿಸಿದ್ದಾರೆ. ಇಂದಿನಿಂದ ನಗರದಲ್ಲಿನ ರಸ್ತೆಗುಂಡಿ ಮುಚ್ಚುವುದು, ಅಭಿವೃದ್ಧಿ ಕಾಮಗಾರಿ, ಕೆರೆ ಹಾಗೂ ರಾಜಕಾಲುವೆ ನಿರ್ವಹಣೆ ಸೇರಿದಂತೆ ಎಲ್ಲಾ ಮಾದರಿ ಕಾಮಗಾರಿಗಳನ್ನು ಪುನರಾಂಭಿಸಲಾಗುವುದು ಎಂದಿದ್ದಾರೆ.












Click it and Unblock the Notifications