ಬೆಂಗಳೂರು ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ, ಹೊಸ ಮುಖ್ಯ ಆಯುಕ್ತ & ಆಡಳಿತಾಧಿಕಾರಿ ಯಾರು ?

ಬಿಬಿಎಂಪಿ ಮುಖ್ಯ ಆಯುಕ್ತರ ಬದಲಾವಣೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್‌ ಬಂದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಇರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಬದಲಾವಣೆ ಮಾಡುವ ವಿಚಾರದಲ್ಲಿ ಮಹತ್ವದ ಬೆಳಗಣಿವಣಿಗೆ ನಡೆದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಬರೋಬ್ಬರಿ 5 ವರ್ಷಗಳೇ ಆಗಿವೆ. ಕಳೆದ ಐದು ವರ್ಷಗಳಿಂದಲೂ ಬಿಬಿಎಂಪಿಯಲ್ಲಿ ಅಧಿಕಾರಿಗಳ ದರ್ಬಾರ್‌ ಮುಂದುವರಿದಿದೆ. ಬಿಬಿಎಂಪಿಯ ಚುನಾವಣೆ ನಡೆಸುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮನಸ್ಸು ಮಾಡುತ್ತಿಲ್ಲ. ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿಯ ಬಗ್ಗೆ ಗಂಭೀರವಾದ ಚರ್ಚೆಗಳು ಶುರುವಾಗಿವೆ.

ಕರ್ನಾಟಕದ ಪ್ರಮುಖ ಮಹಾನಗರ ಪಾಲಿಕೆಗಳಲ್ಲಿ ಬಿಬಿಎಂಪಿಯು ಒಂದಾಗಿದೆ. ಆದರೆ, ಬೆಂಗಳೂರಿನಂತಹ ಪ್ರಮುಖ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವುದಕ್ಕೆ ಕರ್ನಾಟಕ ಸರ್ಕಾರವು ಮನಸ್ಸು ಮಾಡುತ್ತಿಲ್ಲ ಎಂದು ಹೇಳಲಾಗಿದೆ. ಈ ನಡುವೆ ಆಯುಕ್ತರು ಹಾಗೂ ಆಡಳಿತಾಧಿಕಾರಿ ಬದಲಾಗಲಿದ್ದಾರೆ ಎಂದು ಹೇಳಲಾಗಿದ್ದು ಹೊಸ ಹೆಸರು ಕೇಳಿ ಬರುತ್ತಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

BBMP Chief Commissioner Change Who is New Chief Commissioner amp amp Administrator

ಕರ್ನಾಟಕದ ಮಹಾನಗರ ಪಾಲಿಕೆಗಳಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಮುಖ ಪಾಲಿಕೆಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ಹರಿದು ಬರುವ ಮಹಾನಗರ ಪಾಲಿಕೆಗಳಲ್ಲಿ ಬಿಬಿಎಂಪಿ ಪ್ರಮುಖವಾಗಿದೆ. ಅಲ್ಲದೇ ಬೆಂಗಳೂರಿನ ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸೇವೆಯಂತಹ ಪ್ರಮುಖ ಜವಾಬ್ದಾರಿಯು ಬಿಬಿಎಂಪಿಯ ಮೇಲಿದೆ. ಇದೀಗ ಬಿಬಿಎಂಪಿಯ ಆಡಳಿತಾಧಿಕಾರಿಯಾಗಿ ಇದೀಗ ಮುಖ್ಯ ಆಯುಕ್ತರಾಗಿರುವ ತುಷಾರ್‌ ಗಿರಿನಾಥ್ ಅವರು ನೇಮಕಗೊಳ್ಳಲಿದ್ದಾರೆ. ಅಲ್ಲದೇ ಅವರು

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಈ ಹುದ್ದೆಗೆ ನೇಮಕವಾದರೆ, ಮುಖ್ಯ ಆಯುಕ್ತರ ಹುದ್ದೆಗೆ ಯಾರು ಬರಲಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು. ಹಲವು ಪ್ರಮುಖ ಅಧಿಕಾರಿಗಳ ಹೆಸರು ಕೇಳಿ ಬಂದಿದೆ.

ಬಿಬಿಎಂಪಿ ಆಯುಕ್ತರ ಬದಲಾವಣೆಗೆ ಕಾರಣವೇನು: ಬಿಬಿಎಂಪಿಯ ಮುಖ್ಯ ಆಯುಕ್ತರಾಗಿ ಅತೀ ಹೆಚ್ಚು ವರ್ಷಗಳ ಅವಧಿಗೆ ಆಡಳಿತ ನಡೆಸಿದವರಲ್ಲಿ ತುಷಾರ್‌ ಗಿರಿನಾಥ್‌ ಅವರು ಎರಡನೇ ಆಯುಕ್ತರಾಗಿದ್ದಾರೆ. ಅತೀ ಹೆಚ್ಚು ವರ್ಷ ಹಾಗೂ ಎರಡು ಅವಧಿಗೆ ಮಂಜುನಾಥ್ ಪ್ರಸಾದ್‌ ಅವರು ಬಿಬಿಎಂಪಿಯ ಆಯುಕ್ತರಾಗಿದ್ದರು. ಇನ್ನು ಏಪ್ರಿಲ್‌ 30ಕ್ಕೆ ನಗರಾಭಿವೃದ್ಧಿ ಅಭಿವೃದ್ಧಿ (ಯುಡಿಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆಗಿರುವ ಎಸ್.ಆರ್. ಉಮಾಶಂಕರ್ ಅವರು ನಿವೃತ್ತರಾಗಲಿದ್ದಾರೆ. ಹೀಗಾಗಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿ ಬದಲಾವಣೆ ವಿಚಾರವು ಚರ್ಚೆಯ ಮುನ್ನೆಲೆಗೆ ಬಂದಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ಲಿಸ್ಟ್‌ನಲ್ಲಿ ಇರುವ ಪ್ರಮುಖರು

ಬಿಬಿಎಂಪಿಯ ಮುಖ್ಯ ಆಯುಕ್ತರ ಹುದ್ದೆಗೆ ಲಿಸ್ಟ್‌ನಲ್ಲಿ ಇರುವ ಪ್ರಮುಖರ ಹೆಸರಿನಲ್ಲಿ ಹಿರಿಯ ಐಎಎಸ್ ಅಧಿಕಾರಿಗಳಾದ ಪಿ ಮಣಿವಣ್ಣನ್ ,ಮಹೇಶ್ವರ್ ರಾವ್ ಹಾಗೂ ಗೌರವ್ ಗುಪ್ತಾ ಅವರು ಮುಂಚೂಣಿಯಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಈ ಅಧಿಕಾರಿಗಳ ನೇಮಕಾತಿಯಲ್ಲಿ ವಿಳಂಬವಾದರೆ ಈಗ ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ)ರಾಗಿರುವ ಮುನೀಶ್ ಮೌದ್ಗಿಲ್ ಅವರನ್ನು ಉಸ್ತುವಾರಿ ಮುಖ್ಯ ಆಯುಕ್ತರನ್ನಾಗಿ ನೇಮಿಸುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ.

ಅಧಿಕಾರಿಗಳದ್ದೇ ದರ್ಬಾರ್‌: ಇನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ದರ್ಬಾರ್‌ ಮುಂದುವರಿಯಲಿದೆ ಎಂದೇ ಹೇಳಲಾಗುತ್ತಿದೆ. ಸದ್ಯಕ್ಕೆ ಬಿಬಿಎಂಪಿಯ ಚುನಾವಣೆ ನಡೆಸುವ ಮನಸ್ಸನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಡುತ್ತಿಲ್ಲ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿಗಳ ಆಡಳಿತದಲ್ಲೇ ಬಿಬಿಎಂಪಿಯ ನಿರ್ಧಾರಗಳು ಹಾಗೂ ಕೆಲಸ ಕಾರ್ಯಗಳು ಮುಂದುವರಿಯಲಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+