ಬಿಬಿಎಂಪಿ ಬಿಜೆಪಿ ಸದಸ್ಯರ ವಿಚಿತ್ರ ನಡೆ, ಎದುರಾಳಿಗಳು ಗಲಿಬಿಲಿ
ಬೆಂಗಳೂರು, ಮೇ 30: ಇಂದು ಬಿಬಿಎಂಪಿ ಕೌನ್ಸಿಲ್ ಸಭೆಗೆ ಬಂದ ಬಿಬಿಎಂಪಿ ಬಿಜೆಪಿ ಸದಸ್ಯರ ನಡೆ ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಆಶ್ಚಯರ್ಯ ಹುಟ್ಟಿಸಿತು.
ಸಭೆಗೆ ಬಂದ ಬಿಬಿಎಂಪಿ ಬಿಜೆಪಿ ಸದಸ್ಯರು, ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ, ಮೋದಿ ಮುಖವಾಡಗಳನ್ನು ಧರಿಸಿದ ಸಭೆಯಲ್ಲಿ ಕೂತರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಿಬಿಎಂಪಿ ಸದಸ್ಯರು ಮೋದಿ ಮುಖವಾಡ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೆಲವು ಸದಸ್ಯರು, ಮುಖವಾಡ ಧರಿಸಿದ್ದನ್ನು ಪ್ರಶ್ನೆ ಮಾಡಿದರು.
ಬಿಜೆಪಿ ಪಕ್ಷದ ಹೆಸರನ್ನು ಬದಲಾಯಿಸಿಕೊಂಡು 'ಮೋದಿ ಪಕ್ಷ' ಎಂದು ಹೆಸರಿಟ್ಟುಕೊಳ್ಳಿ. ಅಥವಾ 'ಇವಿಎಂ ಪಕ್ಷ' ಎಂದು ಹೆಸರು ಬದಲಾಯಿಸಿಕೊಂಡು ಬಿಡಿ ಎಂದು ಗೇಲಿ ಮಾಡಿದರು.

ಎರಡೂ ಕಡೆಯ ಸದಸ್ಯರು ಇದೇ ವಿಷಯದ ಮೇಲೆ ಕೆಲ ಕಾಲ ವಾಗ್ವಾದ ನಡೆಸಿದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, 'ಮೋದಿ ಎಂದರೆ ವಿರೋಧ ಪಕ್ಷದವರು ನಡುಗುತ್ತೀರಿ' ಎಂದು ಹೇಳಿದರು.
ವಾಗ್ವಾದದ ನಂತರ ಬಿಜೆಪಿಯ ಸದಸ್ಯರು ತಮ್ಮ ಮುಖವಾಡಗಳನ್ನು ತೆಗೆದರು, ಆ ನಂತರ ಸಭೆ ಸಾಂಗವಾಗಿ ಸಾಗಿತು.












Click it and Unblock the Notifications