ಬೆಂಗಳೂರಿನ ಈ ಡೇಂಜರ್ ತಡೆಗೆ ಬಿಬಿಎಂಪಿ, ಬೆಸ್ಕಾಂ ಜಂಟಿ ಕಾರ್ಯಾಚರಣೆ

ಬೆಂಗಳೂರಲ್ಲಿ ಮಳೆಗಾಲದಲ್ಲಿ ಮರ, ಮರದ ರಂಬೆ - ಕೊಂಬೆಗಳು ಬಿದ್ದು ಅನಾಹುತ ಸಂಭವಿಸುವುದೇ ಹೆಚ್ಚು. ಈ ರೀತಿ ಮರ, ಮರದ ರಂಬೆ - ಕೊಂಬೆಗಳು ಬಿದ್ದು ಜನ ಸಾವನ್ನಪ್ಪಿರುವುದು ಸಹ ಇದೆ. ಇದೀಗ ಮರದಿಂದ ಉಂಟಾಗುವ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಬಿಬಿಎಂಪಿ ಕಮಿಷನರ್‌ ತುಷಾರ್‌ ಗಿರಿನಾಥ್‌ ಅವರು ಫೀಲ್ಡ್‌ಗೆ ಇಳಿದ್ದಾರೆ. ನಗರದಲ್ಲಿರುವ ಒಣ ಮರ, ಬೀಳುವ ಹಂತದಲ್ಲಿರುವ ಮರ ಹಾಗೂ ಮರದ ರಂಬೆ - ಕೊಂಬೆಗಳ ತೆರವಿಗೆ ಬಿಬಿಎಂಪಿ ಎನ್ಮಾಡ್ತಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳ ತೆರವು ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಬೆಂಗಳೂರಿನಾದ್ಯಂತ ಅಪಾಯದ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಬಾಗಿದ ಮರದ ರೆಂಬೆ, ಕೊಂಬೆಗಳ ತೆರವು ಮಾಡಲು ಕಮಿಷನರ್‌ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದಾರೆ. ಅಲ್ಲದೇ ಬಿಬಿಎಂಪಿ ಹಾಗೂ ಬೆಸ್ಕಾಂ ಜಂಟಿ ಕಾರ್ಯಾಚರಣೆ ನಡಸಲಿದೆ.

BBMP BESCOM joint operation to prevent tree danger in Bangalore

ಪ್ರಮುಖ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ಅಬ್ಬಿಕೊಂಡಿದೆ. ಇದರಿಂದ ಲೈಟ್‌ ಬೆಳಕು ಸರಿಯಾಗಿ ರಸ್ತೆಗೆ ಬೀಳುತ್ತಿಲ್ಲ. ಈ ರೀತಿಯ ಮರದ ರಂಬೆ - ಕೊಂಬೆಗಳನ್ನು ತೆರವು ಮಾಡುವಂತೆ ಕಮಿಷನರ್‌ ಹೇಳಿದ್ದಾರೆ.

ಬಿಬಿಎಂಪಿ, ಬೆಸ್ಕಾಂ ಸೇರಿ ಕಾರ್ಯಾಚರಣೆ

ಬೆಂಗಳೂರಿನಲ್ಲಿ ಮರ, ಮರದ ರೆಂಬೆ, ಕೊಂಬೆಗಳನ್ನು ತೆರವು ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ಪಾಲಿಕೆ ಹಾಗೂ ಬೆಸ್ಕಾಂ ಸೇರಿ ವಿದ್ಯುತ್ ತಂತಿಗಳಿಗೆ ತಗಲುವ ರೆಂಬೆಗಳು ಹಾಗೂ ಅಪಾಯ ಸ್ಥಿತಿಯಲ್ಲಿರುವ ಮರ, ಮರದ ರೆಂಬೆ, ಕೊಂಬೆಗಳನ್ನು ಇಂದಿನಿಂದ 10 ದಿನಗಳ ವರೆಗೆ ತೆರವು ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಬಿಎಂಪಿಯ ಅರಣ್ಯ ವಿಭಾಗದಿಂದ ನಿರಂತರವಾಗಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಕತ್ತರಿಸಲಾಗುತ್ತಿದೆ. ಮಳೆಗಾಲದಲ್ಲಿ ಜೋರು ಗಾಳಿ ಬಂದರೆ, ಮರಗಳು ಬೀಳುತ್ತವೆ. ಹೀಗಾಗಿ, ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ಮರ ತೆರವು ಕಾರ್ಯಾಚರಣೆಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಓಡಾಡುವ ಹಾಗೂ ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿ, ಕೂಡಲೆ ಡಂಪಿಂಗ್ ಯಾರ್ಡ್ ಗೆ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಕಮಿಷನರ್‌ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

BBMP BESCOM joint operation to prevent tree danger in Bangalore

ಸಮೀಕ್ಷೆ ಮಾಡಿ ಮರ, ಮರದ ರೆಂಬೆ-ಕೊಂಬೆ ಕಟ್‌

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ಡೇಂಜರ್‌ ಮರ ತೆರವು ಮಾಡಲಾಗುವುದು. ಒಣಗಿರುವ ಹಾಗೂ ಅಪಾಯ ಸ್ಥೀಯಲ್ಲಿರುವ ಮರ, ಮರದ ಟೊಂಗೆಗಳ ಕಟ್‌ ಮಾಡುವ ಕೆಲಸವಾಗುತ್ತಿದ್ದು, ನಗರದಲ್ಲಿ 2024 ಜುಲೈನಿಂದ ಇಲ್ಲಿಯವರೆಗೆ ಒಣಗಿದ,ಅಪಾಯ ಸ್ಥಿತಿಯಲ್ಲಿರುವ 477 ಮರ ಹಾಗೂ 592 ಕೊಂಬೆಗಳನ್ನು ಕಟ್‌ ಮಾಡಲಾಗಿದೆ. ಸಾರ್ವಜನಿಕರಿಂದ ಬಂದ ದೂರುಗಳು, ಮಳೆ ಗಾಳಿಗೆ ಬಿದ್ದ 1371 ಮರಗಳು ಹಾಗೂ 3700 ರೆಂಬೆ-ಕೊಂಬೆಗಳನ್ನು ತೆಗೆಯಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

ಮರ ಬೀಳುವಂತಿದ್ದರೆ ಈ ಸಂಖ್ಯೆಗೆ ಕರೆ ಮಾಡಿ

ಸಾರ್ವಜನಿಕರು ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದರೆ ಅಥವಾ ಗಾಳಿ,ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಬೇಕಾದರೆ, ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 / 08022660000 ಗೆ ಕರೆ ಮಾಡಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+