ಬಿಬಿಎಂಪಿ ಸಹಾಯಕ ಆಯುಕ್ತೆಗೆ ದಂಡ: ಕಾರಣವೇನು?
ಬೆಂಗಳೂರು, ಡಿಸೆಂಬರ್ 11: ಬಿಬಿಎಂಪಿ ಸಹಾಯಕ ಆಯುಕ್ತೆಗೆ ಕರ್ನಾಟಕ ಮಾಹಿತಿ ಆಯೋಗ 20 ಸಾವಿರ ರೂ ದಂಡ ವಿಧಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ತಡೆಗೆ ಸಂಬಂಧಿಸಿದಂತೆ ಆಯುಕ್ತರು ಹೊರಡಿಸಿರುವ ಆದೇಶವನ್ನು ಆರ್‌ಟಿಐ ಕಾರ್ಯಕರ್ತರಿಗೆ ನೀಡದ ಕಾರಣ ದಂಡ ವಿಧಿಸಲಾಗಿದೆ.
ಜ್ಞಾನಜ್ಯೋತಿ ನಗರ ನಿವಾಸಿ ವಿಶ್ವನಾಥ್ ಎಂಬುವವರು ಅಕ್ರಮ ಕಟ್ಟಡಗಳ ನಿರ್ಮಾಣ ನಿಯಂತ್ರಿಸಲು 2012ರ ಅ.4ರಂದು ಆಯುಕ್ತರು ಹೊರಡಿಸಿರುವ ಆದೇಶ ಅಥವಾ ಸುತ್ತೋಲೆಯ ದೃಢೀಕೃತ ಪ್ರತಿಯನ್ನು ನೀಡುವಂತೆ ಕೋರಿದ್ದರು.

ಆದರೆ ಬಿಬಿಎಂಪಿ ಸಹಾಯ ಆಯುಕ್ತರಾಗಿದ್ದ ಹರಿಶಿಲ್ಪ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ, ವಿಶ್ವನಾಥ್ ಅವರು ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು ಈ ಹಿನ್ನೆಲೆಯಲ್ಲಿ ಹರಿಶಲ್ಪ ಅವರಿಗೆ 20 ಸಾವಿರ ರೂ ದಂಡವಿಧಿಸಲಾಗಿದೆ. ಆಯೋಗವು ಅರ್ಜಿದಾರರಿಗೆ ಮಾಹಿತಿ ನೀಡದಿರುವುದು ಮತ್ತು ಆರು ಬಾರಿ ವಿಚಾರಣೆಗೆ ಗೈರಾಗಿರುವುದರಿಂದ ದಂಡ ವಿಧಿಸಬೇಕು ಎಂದು ಕೋರಲಾಗಿತ್ತು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ 20 ಸಾವಿರ ರೂ ದಂಡ ವಿಧಿಸಲಾಗಿದೆ. ಹರಿಶಿಲ್ಪ ಅವರ ವೇತನದಲ್ಲಿ ಕಡಿತಗೊಳಿಸಿ ಆಯೋಗದ ಖಾತೆಗೆ ಜಮಾ ಮಾಡಬೇಕು ಎಂದು ತಿಳಿಸಲಾಗಿದೆ.












Click it and Unblock the Notifications