ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯಿರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 03: ಬಿಬಿಎಂಪಿಯು 2018-19ನೇ ಸಾಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ.5ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಪೂರ್ಣ ಪ್ರಮಾಣ ತೆರಿಗೆಯನ್ನು ಪಾವತಿಸಿದವರಿಗೆ ಮಾತ್ರ ಈ ರಿಯಾಯಿತಿ ಸಿಗಲಿದೆ. ಕೆಎಂಸಿ ಕಾಯ್ದೆಯಡಿ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಲು ಅವಕಾಶವಿದೆ ಏಪ್ರಿಲ್ ಅಂತ್ಯದವರೆಗೆ ಮಾತ್ರ ರಿಯಾಯಿತಿ ನೀಡಲಾಗುತ್ತದೆ. ಆನಂತರ ರಿಯಾಯಿತಿ ಸೌಲಭ್ಯ ವಿಸ್ತರಿಸುವುದಿಲ್ಲ ಎಂದು ಬಿಬಿಎಂಪಿಯ ಕಂದಾಯ ಇಲಾಖೆಯ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸಿದ್ದಾರೆ.

ಆನ್ ಲೈನ್ ನಲ್ಲಿ ಆಸ್ತಿ ಖಾತಾ ವರ್ಗಾವಣೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ ಆನ್ ಲೈನ್ ನಲ್ಲಿ ಆಸ್ತಿ ಖಾತಾ ವರ್ಗಾವಣೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

ಕಳೆದ ವರ್ಷ ಆನ್‌ಲೈನ್ ತಂತ್ರಾಂಶದಲ್ಲಿ ದೋಷಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ರಿಯಾಯಿತಿ ಅವಧಿ ವಿಸ್ತರಿಸಲಾಗಿತ್ತು. ಈ ಬಾರಿ ಅದಕ್ಕೆ ಅಕಾಶವಿಲ್ಲ. ಹೀಗಾಗಿ ತೆರಿಗೆದಾರರು ಏ.30ರೊಳಗೆ ಪೂರ್ಣ ತೆರಿಗೆ ಪಾವತಿಸಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ? ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

BBMP: 5prcent relaxation in property tax

ಈ ಹಣಕಾಸು ವರ್ಷದಲ್ಲಿ ಏ.1ರಿಂದ ಎರಡು ದಿನಗಳಲ್ಲಿ 3600 ಮಂದಿ ಆನ್‌ಲೈನ್ ಮೂಲಕ 2.80 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಒಟ್ಟು 1200 ಮಂದಿ ಚಲನ್ ಸೃಜಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ತೆರಿಗೆ ಕಟ್ಟುವವರಿಗೆ 5ಸಾವಿರ ರೂ.ವರೆಗೆ ಹೆಚ್ಚುವರಿ ಶುಲ್ಕ ವಿರುವುದಿಲ್ಲ. ಅದಕ್ಕಿಂತ ಮೇಲ್ಪಟ್ಟ ತೆರಿಗೆಗೆ ಶೇ.0.9ರಷ್ಟು ಶುಲ್ಕವನ್ನು ಬ್ಯಾಂಕ್‌ಗಳು ವಿಧಿಸುತ್ತದೆ ಎಂದರು.

English summary
BBMP decided to give 5percent relaxation for property tax. This facilities will continue till April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X