ಮಾರ್ಚ್ 26ರಂದು ಬಿಬಿಎಂಪಿ ಬಜೆಟ್ ಮಂಡನೆ

ಬೆಂಗಳೂರು, ಮಾರ್ಚ್ 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗ ಅಧಿಕಾರಿಗಳ ಆಡಳಿತ. 2021-22ನೇ ಸಾಲಿನ ಬಜೆಟ್‌ ಅನ್ನು ಮಾ. 26ರ ಶುಕ್ರವಾರ ಮಂಡಿಸಲಾಗುತ್ತದೆ.

ಪಾಲಿಕೆ ಕೌನ್ಸಿಲ್ ಅವಧಿ ಮುಕ್ತಾಯಗೊಂಡಿದೆ. ಬಿಬಿಎಂಪಿಯ ಆಡಳಿತವನ್ನು ಆಡಳಿತಾಧಿಕಾರಿ ಗೌರವ್ ಗುಪ್ತ ನೋಡಿಕೊಳ್ಳುತ್ತಿದ್ದಾರೆ. ಅವರೇ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಬಜೆಟ್ ತಯಾರಾಗಿದ್ದು, ಮಂಡಿಸಲು ಸಿದ್ಧವಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಲಿಕೆ ಅಧಿಕಾರಿಗಳ ಮಾಹಿತಿ ಪ್ರಕಾರ ಬಿಬಿಎಂಪಿಯ ಬಜೆಟ್ ಗಾತ್ರ ಸುಮಾರು 8 ಸಾವಿರ ಕೋಟಿ ಆಗಲಿದೆ. 2020-21ರಲ್ಲಿ ಪಾಲಿಕೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಮಂಡಿಸಿದ ಬಜೆಟ್‌ಗಿಂತ 3,500 ಕೋಟಿ ರೂ. ಕಡಿಮೆ ವೆಚ್ಚದ ಬಜೆಟ್ ಇದಾಗಿದೆ.

BBMP

ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿ ಕೊನೆಯದಾಗಿ ಬಜೆಟ್ ಮಂಡಿಸಿದ್ದು 2015-16ರಲ್ಲಿ. ಆಗ ಟಿ. ಎಂ. ವಿಜಯ ಭಾಸ್ಕರ್ ಆಡಳಿತಾಧಿಕಾರಿಯಾಗಿದ್ದರು. 5,411 ಕೋಟಿ ರೂ. ವೆಚ್ಚದ ಬಜೆಟ್ ಮಂಡಿಸಿದ್ದರು.

ಮಾರ್ಷಲ್‌ಗಳ ಮೂಲಕ ಬಿಬಿಎಂಪಿ ಸಮೀಕ್ಷೆಯೊಂದನ್ನು ಮಾಡಿಸಿದೆ. ಇದರ ಪ್ರಕಾರ ನಗರಕ್ಕೆ 236 ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ. 5000 ಪ್ರದೇಶದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕಿದೆ.

ಬಿಬಿಎಂಪಿ ಕೈಗೊಂಡಿರುವ ಅನೇಕ ಕಾಮಗಾರಿಗಳಿಗೆ ಅನುದಾನವನ್ನು ನೀಡಬೇಕಿದೆ. ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಹೊಸ ಯೋಜನೆ ಘೋಷಣೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+