ಪತ್ರಕರ್ತರ ಮುಂದಿರುವ ಸವಾಲು:ಬರಗೂರು ವ್ಯಾಖ್ಯಾನ ಏನು?
ಬೆಂಗಳೂರು, ಜು.7: ಇಂದಿನ ಮಾಧ್ಯಮಗಳು ಉದ್ದಿಮೆಗಳಾಗಿ ರೂಪಾಂತರಗೊಂಡಿವೆ. ಇಂತಹ ವೇಳೆ ಪತ್ರಿಕಾವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವುದು ಪತ್ರಕರ್ತ ರಿಗೆ ಸವಾಲಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಆಯೋಜಿಸಿದ್ದ 50ನೇ ವರ್ಷದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ. ಪತ್ರಕರ್ತ ಆಂತರಿಕ ಮತ್ತು ಬಾಹ್ಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಆದರೂ ಮೊದಲು ವೃತ್ತಿ ಧರ್ಮವನ್ನು ಗೌರವಿಸಬೇಕಿದೆ. ವಾಸ್ತವವನ್ನು ಹೇಳುವ ಪರಿಸ್ಥಿತಿಯಲ್ಲಿ ಪತ್ರಕರ್ತರು ಇಲ್ಲ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ. ಪ್ರಸ್ತುತ ರಾಜಕೀಯ ವಿದ್ಯಮಾನ ಗಳನ್ನು ಕುರಿತು ಈ ವೇದಿಕೆಯಲ್ಲಿ ಎನು ಮಾತನಾಡಲಾರೆ. ನಾನು ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದೇನೆ ಎಂದು ಅರ್ಥಮಾಡಿಕೊಳ್ಳುವ ಅಗತ್ಯ ಇಲ್ಲ. ಕೇಂದ್ರ ಮತ್ತು ರಾಜ್ಯ ರಾಜಕಾರಣಿಗಳಲ್ಲಿ ಸುದೀರ್ಘ 5 ದಶಕದ ಕಾಲ ಅನುಭವ ನನಗಿದೆ ಎಂದರು.












Click it and Unblock the Notifications