'ಬನ್ನಂಜೆ 80ರ ಸಂಭ್ರಮ'ಕ್ಕೆ ಬೆಂಗಳೂರಿನಲ್ಲಿ ಭವ್ಯ ಚಾಲನೆ
ಬೆಂಗಳೂರು, ಡಿಸೆಂಬರ್, 22: 'ಬನ್ನಂಜೆ 80ರ ಸಂಭ್ರಮ'ಕ್ಕೆ ಬೆಂಗಳೂರಿನಲ್ಲಿ ಭವ್ಯ ಚಾಲನೆ ಸಿಕ್ಕಿದೆ. ಗೋವಿಂದಾಚಾರ್ಯ ಅವರಿಗೀಗ 80 ವಸಂತಗಳ ಸಂಭ್ರಮ.
ಅದನ್ನು ಮತ್ತಷ್ಟು ಸ್ಮರಣೀಯವಾಗಿಸಲು ಡಿಸೆಂಬರ್ 23 ರಿಂದ 27ರವರೆಗೆ ಬೆಂಗಳೂರಿನ ದಯಾನಂದ ಸಾಗರ ಕಾಲೇಜು ಆವರಣದಲ್ಲಿ ಬನ್ನಂಜೆ ಸಂಭ್ರಮ ನಡೆಯಲಿದ್ದು ಬುಧವಾರ (ಡಿ 22) ಚಾಲನೆ ದೊರೆತಿದೆ.
ಆರಂಭೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಗಳು, ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಸೇರಿದಂತೆ ವಿವಿಧ ಪೀಠಾಧಿಪತಿಗಳು ಮತ್ತು ಬನ್ನಂಜೆ ಗೋವಿಂದಾಚಾರ್ಯರು ಉಪಸ್ಥಿತರಿದ್ದರು.
ಡಿಸೆಂಬರ್ 27 ರವರೆಗೆ ಬೆಂಗಳೂರಿನ ದಯಾನಂದ ಸಾಗರ ಕಾಲೇಜು ಆವರಣದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.['ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯ 80ರ ಸಂಭ್ರಮ]

ಈ ವೇಳೆ ಮಾತನಾಡಿದ ಪುತ್ತಿಗೆ ಮಠದ ಸ್ವಾಮೀಜಿಗಳು ಹಿಂದೂ ಧರ್ಮ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉಲ್ಲೇಖ ಮಾಡಿದರು. ಮುಂದೆ ನಾವು ನಡೆದುಕೊಳ್ಳಬೇಕಾದ ರೀತಿ, ಬೆಳವಣಿಗೆ ಬಗ್ಗೆ ವಿವರವಾಗಿ ಸ್ವಾಮೀಜಿಗಳು ತಿಳಿಸಿಕೊಟ್ಟರು.[ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ: ಕಿರು ಪರಿಚಯ]
ಸಿನೆಮಾ ಮತ್ತು ಪತ್ರಿಕೋದ್ಯಮದಲ್ಲೂ ತಮ್ಮ ಪಾಂಡಿತ್ಯ ತೋರಿದ್ದ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಅನುಭವವನ್ನು ಈ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಿದ್ದಾರೆ.
ವೇದಾಂತ, ಸಿನಿಮಾ ಪ್ರಸ್ತುತತೆ, ಪತ್ರಿಕೋದ್ಯಮದ ಸಂವಾದ ಬನ್ನಂಜೆಯವರ ಸಮ್ಮುಖದಲ್ಲಿ ಜರುಗಲಿದೆ. ಬನ್ನಂಜೆ ಬದುಕು ಮತ್ತು ಸಂಸ್ಕೃತ ಸಾಹಿತ್ಯ ಕುರಿತು ಗೋಷ್ಠಿಗಳು ನಡೆಯಲಿವೆ. ಹಾಸ್ಯ ಗೋಷ್ಠಿಗಳು ನಡೆಯಲಿವೆ.












Click it and Unblock the Notifications