ದೇಶದ ಬೃಹತ್ ಅಡುಗೆ ಸ್ಪರ್ಧೆಗೆ ಸಾಕ್ಷಿಯಾದ ಬೆಂಗಳೂರು
ಬೆಂಗಳೂರು, ಏಪ್ರಿಲ್ 11: ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ 'ಯಂಗ್ ಶೆಫ್ ಇಂಡಿಯಾ ಸ್ಕೂಲ್' ಏರ್ಪಡಿಸಿರುವ ಭಾರತದ ಬೃಹತ್ ಅಡುಗೆ ಸ್ಪರ್ಧೆ ದಕ್ಷಿಣ ವಲಯದ ಸೆಮಿ ಫೈನಲ್ಸ್ ಬೆಂಗಳೂರಿನಲ್ಲಿ ನಡೆಯಿತು.
8 ನೇ ಆವೃತ್ತಿಯ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸ್ಪರ್ಧೆಯಲ್ಲಿ ಎರಡೂವರೆ ಸಾವಿರ ಶಾಲೆಗಳ 30ಸಾವಿರಕ್ಕೂ ಹೆಚ್ಚು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶಾದ್ಯಂತ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಹೋಟೆಲ್ ಇಂಡಸ್ಟ್ರಿ ಮ್ಯಾನೇಜ್‌ಮೆಂಟ್‌ನಲ್ಲಿ ದಿ. ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸ್ಕಾಲರ್‌ಶಿಪ್ ಮೇರೆಗೆ ಅಧ್ಯಯನ ನಡೆಸುವ ಅವಕಾಶ ದೊರೆಯಲಿದೆ.
ಬೆಂಗಳೂರಿನಲ್ಲಿ ಮಂಗಳವಾರ ನಡೆದ ದಕ್ಷಿಣ ವಲಯ ಸೆಮಿ ಫೈನಲ್ಸ್ ಸ್ಪರ್ಧೆಯ ಅಂತಿಮ ಹಣಾಹಣಿ ಏ.13ರಂದು ದೆಹಲಿಯಲ್ಲಿ ನಡೆಯಲಿದೆ. ದಿ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸತತ ಎಂಟನೇ ವರ್ಷ ಈ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದು, ಅಡುಗೆ ಸಿದ್ಧಪಡಿಸುವಲ್ಲಿ ವಿದ್ಯಾರ್ಥಿಗಳಿಗೆ ಇರುವ ಕೌಶಲ್ಯವನ್ನು ಹೊರಹಾಕುವುದು ಹಾಗೂ ಪ್ರೋತ್ಸಾಹಿಸುವುದು ಹಾಗೂ ಆತಿಥ್ಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಕೌಶಲ್ಯ ವೃದ್ಧಿ ಪಡಿಸುವುದು ಸ್ಪರ್ಧೆಯ ಉದ್ದೇಶವಾಗಿದೆ.

ವಿದ್ಯಾರ್ಥಿಗಳಿಗಾಗಿ ಅಡುಗೆ ಸ್ಪರ್ಧೆ
8 ನೇ ಆವೃತ್ತಿಯ ಯಂಗ್ ಶೆಫ್ ಇಂಡಿಯಾ ಸ್ಕೂಲ್ ಸ್ಪರ್ಧೆಯಲ್ಲಿ ಎರಡೂವರೆ ಸಾವಿರ ಶಾಲೆಗಳ 30ಸಾವಿರಕ್ಕೂ ಹೆಚ್ಚು ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶಾದ್ಯಂತ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5 ಲಕ್ಷ ರೂ.ಗಳ ನಗದು ಬಹುಮಾನ ಹಾಗೂ ಹೋಟೆಲ್ ಇಂಡಸ್ಟ್ರಿ ಮ್ಯಾನೇಜ್‌ಮೆಂಟ್‌ನಲ್ಲಿ ದಿ. ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸ್ಕಾಲರ್‌ಶಿಪ್ ಮೇರೆಗೆ ಅಧ್ಯಯನ ನಡೆಸುವ ಅವಕಾಶ ದೊರೆಯಲಿದೆ.

ಅಡುಗೆ ಸ್ಪರ್ಧೆಯಲ್ಲಿ 30 ಸಾವಿರ ವಿದ್ಯಾರ್ಥಿಗಳು ಭಾಗಿ
ಪ್ರಸಕ್ತ ವರ್ಷ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆದ ವಲಯ ಮಟ್ಟದ ಸ್ಪರ್ಧೆಗಳಲ್ಲಿ ಡೆಊವರೆ ಸಾವಿರಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಈಗಾಗಲೇ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪ್ರತಿ ವಲಯದಿಂದ 10ವಿದ್ಯಾರ್ಥಿಗಳಂತೆ ನಾಲ್ಕು ವಲಯಗಳಿಂದ ಮೆಗಾ ಫೈನಲ್‌ನಲ್ಲಿ ವಿದ್ಯಾರ್ಥಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಪ್ರತಿ ವರ್ಷದ ಈ ಸ್ಪರ್ಧೆಗಳನ್ನು ಎನ್.ಡಿ ಟಿವಿ ಫುಡ್ , ಚಾಲನೆಲ್ ದೇಶದ ಪ್ರಖ್ಯಾತ ಚಾನೆಲ್‌ಗಳು ಸ್ಪರ್ಧೆಯನ್ನು ನೇರ ಪ್ರಸಾರ ಮಾಡುತ್ತಿವೆ.

ಅಡುಗೆ ಸ್ಪರ್ಧೆಯ ನಿರ್ಣಾಯಕರು
ಏ.13ರಂದು ದೆಹಲಿಯಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯ ನಿರ್ಣಾಯಕರಾಗಿ ದೇಶದ ಪ್ರಖ್ಯಾತ ಶೆಫ್ ಗಳು ಭಾಗವಹಿಸಲಿದ್ದಾರೆ.ಎಂ.ಎಸ್. ಆರ್ ಹೋಟೆಲ್‌ನ ಶೆಫ್ ರೈಮಂಡ್, ಬೆಂಗಳೂರು ತಾಜ್ ಹೋಟೆಲ್‌ನ ಶೆಫ್ ಆಶಿಶ್ ಉಗಲ್, ಹಾಲಿಡೇ ಇನ್ ಹೋಟೆಲ್‌ನ ಶೆಫ್ ಡ್ಯಾನಿಯಲ್ ಕುಮಾರ್, ಬೆಂಗಳೂರಿನ ಲಲಿತ್ ಹೋಟೆಲ್‌ನ ಮುಖ್ಯ ಶೆಫ್ ಆಶಿಶ್ ಡೇನಿಯಲ್ ನಂತಹ ಪ್ರಸಿದ್ಧ ಶೆಫ್ ಗಳು ಈ ಸ್ಪರ್ಧೆಯ ನಿರ್ಣಾಯಕರಾಗಿ ಪಾಲ್ಗೊಳ್ಳಲಿದ್ದಾರೆ.
ಹೋಟೆಲ್ ಮ್ಯಾನೇಜ್‌ಮೆಂಟ್ ಒಂದು ಉದ್ಯಮವಾಗಿ ಬೆಳಳೆದುನಿಂತಿದ್ದು, ಉದ್ಯಮದಲ್ಲಿ ಆಸಕ್ತಿ ಇರುವ ಹೊಸ ಮುಖಗಳನ್ನು ಕೌಶಲ್ಯಯುತವಾಗಿ ಶಾಲೆಗಳಿಂದ ಹೊರಕ್ಕೆ ಕಳುಹಿಸುವುದು ಶಾಲೆಯ ಉದ್ದೇಶವಾಗಿದೆ. ಅಡುಗೆ ತಯಾರಿಕೆ ಸ್ಪರ್ಧೆ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಾಲಿ ಡೇ ಇನ್ ಸ್ಯೂಟ್ಸ್ ಹೋಟೆಲ್‌ನ ಶೆಫ್ ಡ್ಯಾನಿಯಲ್ ಕುಮಾರ್, ಇಂತಹ ಸ್ಪರ್ಧೆಯಿಂದ ಹೋಟೆಲ್ ಉದ್ಯಮದ ಬಗೆಗೆ ಜನರಲ್ಲಿ ಆಸಕ್ತಿ ಉಂಟಾಗುತ್ತದೆ. ಹಾಗೂ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಈ ಉದ್ಯಮದಲ್ಲಿ ಭಾಗಿಯಾಗಲು.ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದ್ದಾರೆ.

ಚಾಕಚಕ್ಯತೆ ಇರುವ ವಿದ್ಯಾರ್ಥಿಗಳ ಆಯ್ಕೆ
ಹೋಟೆಲ್ ಮ್ಯಾನೇಜ್ ಮೆಂಟ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಅಡುಗೆ ತಯಾರಿಸುವ ಕಲೆ, ಕೌಶಲ್ಯ ಅವರಲ್ಲಿರುವ ತಾಂತ್ರಿಕತೆ ಕಡಿಮೆ ತ್ಯಾಜ್ಯಗಳು ಉತ್ಪಾದನೆಯಾಗುವಂತೆ ವಸ್ತಿಉಗಳನ್ನು ಬಳಸುವುದು ಹಾಗೂ ಅತಿ ಕಡಿಮೆ ವಸ್ತುಗಳನ್ನು ಬಳಸಿ ರುಚಿಕರವಾದ ಅಡುಗೆ ತಯಾರಿಸುವ ಚಾಕಚಕ್ಯತೆಯುಳ್ಳ ವಿದ್ಯಾರ್ಥಿಗಳನ್ನು ವಿಜೇತರನ್ನಾಗಿ ಘೋಷಿಸಲಾಗುತ್ತದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ನ ನಿರ್ದೇಶಕಿ ಶಾಲಿನಿ ಖನ್ನಾ ಯಂಗ್ ಇಂಡಿಯಾ ಸ್ಕೂಲ್ ಪ್ರತಿವರ್ಷ ಏರ್ಪಡಿಸುತ್ತಿರುವ ಅಡುಗೆ ತಯಾರಿಕೆ ಸ್ಪರ್ಧೆ ಕುರಿತಂತೆ ಮಾತನಾಡಿ, ಅಡುಗೆ ತಯಾರಿಸುವುದು ಮನುಷ್ಯನ ಜೀವನ ಕೌಶಲ್ಯಗಳನಲ್ಲಿ ಒಂದು ಭಾಗ ಈಕೌಶಲ್ಯವನ್ನು ಗುರುತಿಸಬೇಕು.ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಇನ್ನಷ್ಟು ನಿಖರ ಸೇವೆ ಒದಗಿಸುವುದು ಅದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ಒದಗಿಸುವುದು ಸ್ಪರ್ಧೆಯ ಉದ್ದೇಶವಾಗಿದೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gas Bill: ಹೋಟೆಲ್ ಬಿಲ್ನಲ್ಲಿ ಗ್ರಾಹಕರಿಗೆ 'ಗ್ಯಾಸ್ ಶುಲ್ಕ' ವಿಧಿಸುವಂತಿಲ್ಲ: ಕೇಂದ್ರದಿಂದ ಖಡಕ್ ಎಚ್ಚರಿಕೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
ನಾವು ಸೇವಿಸುವ ಈ ಆಹಾರಗಳಲ್ಲಿ ಆಲ್ಕೋಹಾಲ್ ಇರುತ್ತದೆ.. ಇದು ನಿಮಗೆ ಗೊತ್ತಿರಲಿ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?











Click it and Unblock the Notifications