ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಕಿ, ಗಾಳಿ, ಜಲ ರಕ್ಷಿತ ಅಂಕ ಪಟ್ಟಿ ಬೇಕೇ?

By Mahesh
|
Google Oneindia Kannada News

ಬೆಂಗಳೂರು, ಫೆ.28: ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯ ಹೋಳಾಗಲಿದೆ ಎಂಬ ಕೊರಗಿನ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯ ಹೊಚ್ಚ ಹೊಸ ಪ್ರಯೋಗಕ್ಕೆ ಮುಂದಾಗಿದೆ. ತನ್ನ ವಿದ್ಯಾರ್ಥಿಗಳಿಗೆ ಹೊಸ ಬಗೆಯ ದೀರ್ಘಬಾಳಿಕಯ 'ಮಾರ್ಕ್ಸ್ ಕಾರ್ಡ್' ಗಳನ್ನು ವಿತರಿಸಲು ಮುಂದಾಗಿದೆ.

ಬೆಂಕಿಯಲ್ಲಿ ನಂದದ, ನೀರಿನಲ್ಲಿಟ್ಟರೂ ಕೊಳೆಯದ, ಕ್ರಿಮಿ ಕೀಟಗಳ ಬಾಧೆಯಿಂದ ಮುಕ್ತವಾದ ಸದೃಢವಾದ ಮಾರ್ಕ್ಸ್ ಕಾರ್ಡ್ ನೀಡಲು ಬೆಂಗಳೂರು ವಿಶ್ವವಿದ್ಯಾಲಯಗಳು ಯೋಜಿಸಿದೆ.

'ಮಲ್ಟಿ ಫ್ರೂಫ್ ಮಾರ್ಕ್ಸ್ ಕಾರ್ಡ್' ಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಈ ಬಹು ಭೀತಿ ಸಂರಕ್ಷಿತ ಅಂಕ ಪಟ್ಟಿ ಸ್ವರೂಪ ಹೇಗಿರುತ್ತೆ ಎಂಬುದರ ಬಗ್ಗೆ ವಿಶ್ವ ವಿದ್ಯಾಲಯದ ಅಧಿಕಾರಿಗಳು ಸುಳಿವು ನೀಡಿಲ್ಲ. ಆದರೆ, ಈ ರೀತಿ ಮಾರ್ಕ್ಸ್ ಕಾರ್ಡ್ ನೀಡುತ್ತೇವೆ ನಿರೀಕ್ಷಿಸಿ ಎಂದಿದ್ದಾರೆ.

Bangalore University issues “fire-proof”, “water-proof” marks cards

ಇಂಥದ್ದೊಂದು ಉತ್ತಮ ಅಂಕ ಪಟ್ಟಿ ತಯಾರಿಸಿಕೊಡಲು ಐಟಿ ಕಂಪನಿಗಳ ಜತೆ ವಿಶ್ವವಿದ್ಯಾಲಯ ಮಾತುಕತೆ ನಡೆಸುತ್ತಿದೆ. ಹೊಸ ಅಂಕ ಪಟ್ಟಿಯನ್ನು ಪ್ಲಾಸ್ಟಿಕ್, ಸಿಲ್ವರ್ ಫಾಯಿಲ್, ಬಿದಿರು ಹಾಗೂ ಅಗ್ನಿ ನಿರೋಧಕ ಕಚ್ಚಾವಸ್ತುಗಳಿಂದ ತಯಾರಿಸಲಾಗುತ್ತದೆ. ಈ ಅಂಕಪಟ್ಟಿಗೆ ನೀಡುವ ಶುಲ್ಕದ ಜತೆಗೆ ಹೊಸ ಅಂಕಪಟ್ಟಿಯ ಬೆಲೆ 15 ರು ಹೆಚ್ಚಳವಾಗಲಿದೆ. ಹೊಸ ಮಾದರಿ ಅಂಕಪಟ್ಟಿಯ ಕಾಗದ ಬೆಲೆ 3.50 ರು ನಷ್ಟಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.

ಈ ಹೊಸ ಪ್ರಯೋಗದಿಂದ ನಕಲಿ ಅಂಕಪಟ್ಟಿಯ ಹಾವಳಿಯನ್ನು ತಪ್ಪಿಸಬಹುದಾಗಿದೆ. ಪ್ರತಿ ಅಂಕಪಟ್ಟಿಯೂ ವಿಶಿಷ್ಟವಾಗಿದ್ದು, ಬಾರ್ ಕೋಡ್ ಹೊಂದಲಿದೆ. ವಿದ್ಯಾರ್ಥಿಗಳು ಒಮ್ಮೆ ಹೆಚ್ಚಿನ ಶುಲ್ಕ ನೀಡುವುದು ಅನಿವಾರ್ಯವಾದರೂ ಅದರ ಉಪಯೋಗ ಶಾಶ್ವತವಾಗಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆರ್ ಕೆ ಸೋಮಶೇಖರ್ ಹೇಳಿದ್ದಾರೆ.

ಬಾರ್ ಕೋಡ್ ಹೊಂದಿರುವುದರಿಂದ ಅಂಕಪಟ್ಟಿಯ ನೈಜತೆ, ದೃಢತೆ ಇನ್ನಷ್ಟು ಹೆಚ್ಚಲಿದ್ದು, ಉನ್ನತ ವ್ಯಾಸಂಗಕ್ಕೆ ವಿದೇಶಿ ವಿವಿಗೆ ತೆರಳುವವರಿಗೆ ಕಂಪನಿಗೆ ಸೇರುವವರಿಗೆ ಅಂಕಪಟ್ಟಿ ಪರಿಶೀಲನೆ ಸುಲಭವಾಗಲಿದೆ ಎಂದು ಸೋಮಶೇಖರ್ ತಿಳಿಸಿದರು.

English summary
The Bangalore University has decided to issue multi-proof marks cards to the students, which is 'fire-proof', 'water-proof', and 'termite-proof'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X