ಟ್ರಾಫಿಕ್ ಪೊಲೀಸು ಕೆಲಸ ಯಾರಿಗೆ ಬೇಕು ಹೇಳಿ?
ಬೆಂಗಳೂರು, ಮೇ.14: ಟ್ರಾಫಿಕ್ ಪೊಲೀಸರು ನಮ್ಮವರೇ ಎಂದು ನಾವೆಷ್ಟು ಅವರ ಬಗ್ಗೆ ಹೊಗಳಿದರೂ ಜನರಿಗೆ ಅವರೆಂದರೆ ಅದ್ಯಾಕೋ ತಿರಸ್ಕಾರ, ವಕ್ರ ದೃಷ್ಟಿಯಿಂದ ನೋಡುತ್ತಿರುತ್ತಾರೆ. ಐದು ನಿಮಿಷ ಸಿಗ್ನಲ್‌ನಲ್ಲಿ ವಾಹನ ನಿಂತರೇ ಸಾಕು ಟ್ರಾಫಿಕ್ ಪೊಲೀಸರಿಗೆ ಜನ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿರುತ್ತಾರೆ.
ನಿಜವಾಗಿಯೂ ಟ್ರಾಫಿಕ್ ಪೊಲೀಸರ ಸಮಸ್ಯೆ ಏನು ಎಂಬುದು ವಾಹನಗಳಲ್ಲಿ ಪ್ರಯಾಣಿಸುವ ನಮಗೆ ಗೊತ್ತೆ ಇರುವುದಿಲ್ಲ. ಪ್ರತಿದಿನ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ವಾಹನಗಳ ಹೊಗೆ ಮತ್ತು ದೂಳು ಸೇವಿಸಿ ಸಂಚಾರ ಪೊಲೀಸರ ಆರೋಗ್ಯ ಹದಗೆಡುತ್ತಿದೆ.[ಈ ಟ್ರಾಫಿಕ್ ಪೊಲೀಸ್ ಅಂದ್ರೆ ಜನರಿಗೆ ಅಚ್ಚುಮೆಚ್ಚು]
ಟ್ರಾಫಿಕ್ ಪೊಲೀಸರ ಆರೋಗ್ಯ ಹದಗೆಡುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಮನವಿಯ ಮೇರೆಗೆ ನ್ಯಾಷನಲ್ ರೆಫರಲ್ ಸೆಂಟರ್ ಫಾರ್ ಲೆಡ್ ಪ್ರೊಜೆಕ್ಟ್ ಇನ್ ಇಂಡಿಯಾ ಸಂಸ್ಥೆ ಟ್ರಾಫಿಕ್ ಪೊಲೀಸರ ಬಗ್ಗೆ ಜೂನ್ ತಿಂಗಳಿನಿಂದ ಅಧ್ಯಯನ ನಡೆಸಲಿದೆ.[ಮಾನವೀಯತೆ ಮೆರೆದ ದೊಡೇಜಾಗೆ ಅಭಿನಂದನೆ]
ಈ ಮಧ್ಯೆ ಒನ್‌ಇಂಡಿಯಾ ಕನ್ನಡ ಕೆಲವು ಟ್ರಾಫಿಕ್ ಪೊಲೀಸರನ್ನು ಮಾತನಾಡಿಸಿದೆ. ಅವರ ಸಮಸ್ಯೆಗಳು, ಕೆಲಸದ ಒತ್ತಡ, ವಾಹನ ದಟ್ಟನೆ ಸಮಸ್ಯೆಗೆ ನಿವಾರಣೆಗೆ ಅವರ ಪರಿಹಾರ, ಇತ್ಯಾದಿ ವಿಚಾರಗಳನ್ನು ಟ್ರಾಫಿಕ್ ಪೊಲೀಸರು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅವರ ಅಭಿಪ್ರಾಯಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಮಂಡಿ ನೋವು:
ಬಹಳಷ್ಟು ಟ್ರಾಫಿಕ್ ಪೊಲೀಸರಿಗೆ ಮಂಡಿ ನೋವು ಬರುವುದು ಸಾಮಾನ್ಯವಾಗಿ ಬಿಟ್ಟಿದೆ. ನಿರಂತರವಾಗಿ ಎರಡು ಮೂರು ಗಂಟೆ ನಿಂತರೇ ಸಾಕು ಕಾಲುಗಳು ಉದಿಕೊಳ್ಳುತ್ತಿದೆ. ಕೆಲಸದ ಮಧ್ಯೆ ಕುಳಿತುಕೊಳ್ಳಬಹುದಾದರೂ ಸಿಸಿಟಿವಿಯಲ್ಲಿ ಸೆರೆಯಾಗುತ್ತಿರುತ್ತದೆ. ಹಾಗಾಗಿ ನೋವು ಆದರೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ.

ಮಾಸ್ಕ್ ಹಾಕಿದ್ರೂ ಆರೋಗ್ಯ ಕೆಡುತ್ತಿದೆ:
ಇಲಾಖೆ ದೂಳು ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮಾಸ್ಕ್ ನೀಡುತ್ತಿದೆ. ಆದರೆ ಮಾಸ್ಕ್ ಹಾಕಿದ್ದರೂ ಶ್ವಾಸಕೋಶದ ತೊಂದರೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒನ್ ಇಂಡಿಯಾದ ಜೊತೆ ಮಾತನಾಡಿದ ಪೊಲೀಸರಲ್ಲಿ ಹಲವು ಮಂದಿ ಶ್ವಾಸಕೋಶ ಸಮಸ್ಯೆ ಇರುವುದನ್ನು ಒಪ್ಪಿಕೊಂಡಿದ್ದಾರೆ.

ವಾಹನಗಳ ಶಬ್ಧ ಕೇಳಿ ಕಿವಿಗೆ ಅಪಾಯ:
ಪ್ರತಿ ದಿನ ವಾಹನಗಳ ಶಬ್ಧಗಳನ್ನು ಕೇಳಿ ಕೇಳಿ ಮನೆಗೆ ಹೋಗಿ, ಮನೆಯವರು ಮೆಲ್ಲನೆ ಮಾತನಾಡಿದರೆ ಏನು ಹೇಳಿದ್ದಾರೆ ಎಂಬುದೇ ಗೊತ್ತಾಗುದಿಲ್ಲವಂತೆ. ಈ ಸಮಸ್ಯೆಯೂ ಹಲವರಲ್ಲಿದೆ.

ದೂಳಿನಿಂದ ಕಣ್ಣಿಗೆ ಹಾನಿ :
ನಗರದ ಕೆಲವೇ ಕೆಲ ಏರಿಯಾಗಳಲ್ಲಿ ರಸ್ತೆ ಚೆನ್ನಾಗಿದೆ. ಉಳಿದಂತೆ ರಸ್ತೆಯಲ್ಲೇ ದೊಡ್ಡ ದೊಡ್ಡ ಗುಂಡಿಗಳು ಕಾಣಿಸುತ್ತಿದೆ. ಗುಂಡಿ ಮುಚ್ಚಬಹುದಾದರೂ ರಸ್ತೆ ಬದಿಯಲ್ಲಿ ಸರಿಯಾಗಿ ಡಾಂಬರ್ ಹಾಕುವುದಿಲ್ಲ. ಆ ಬದಿಯ ದೂಳುಗಳನ್ನು ನಾವು ಸೇವಿಸುವುದರ ಜೊತೆಗೆ ಕಣ್ಣಿಗೆ ಹೋಗುತ್ತದೆ. ಇದರಿಂದಾಗಿ ನಮ್ಮ ಕೆಲ ಸಿಬ್ಬಂದಿಗಳಿಗೆ ಕಣ್ಣಿನ ದೋಷ ಬಂದಿದೆ ಅಂತಾರೆ ಕೆಲ ಪೊಲೀಸರು.

ದಿನದಲ್ಲಿ ಎಂಟು ಗಂಟೆ ಕೆಲಸ
ದಿನದಲ್ಲಿ ಎಂಟು ಗಂಟೆ ದುಡಿಯುತ್ತೇವೆ. ಕೆಲವೊಮ್ಮೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗುತ್ತದೆ.

ಟ್ರಾಫಿಕ್ ಸಿಗ್ನಲ್ ಕೈ ಕೊಟ್ಟರೆ ಕೆಲಸ ಕಷ್ಟ:
ಟ್ರಾಫಿಕ್ ಸಿಗ್ನಲ್ ದೀಪ ಇದ್ದರೂ ಸವಾರರು ನಿಯಮ ಪಾಲಿಸುವುದಿಲ್ಲ. ಇನ್ನು ಸಿಗ್ನಲ್ ದೀಪ ಕೈ ಕೊಟ್ಟರೆ ರಸ್ತೆಯ ಮಧ್ಯದಲ್ಲೇ ನಿಂತು ನಿಯಂತ್ರಣ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಬೈಕಿನಲ್ಲಿ ವೇಗವಾಗಿ ಬರುವುದನ್ನು ನೋಡಿ ನಮಗೆ ಹೆದರಿಕೆಯಾಗುತ್ತದೆ.

ಹೆಚ್ಚಿನ ದಂಡ ಹಾಕಬೇಕು:
ಟ್ರಾಫಿಕ್ ನಿಯಮ ಉಲ್ಲಂಘಿಸುವುದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು. ಅವರಿಗೆ ಹಣದ ಬೆಲೆ ಗೊತ್ತಿಲ್ಲ.ಹೀಗಾಗಿ ದಂಡದ ಪ್ರಮಾಣ ಹೆಚ್ಚಿಸಬೇಕೆಂದು ಕೆಲವರು ಸಲಹೆ ನೀಡಿದ್ದಾರೆ.

ನಿಯಮ ಪಾಲಿಸುವುದಿಲ್ಲ:
ಹೆಲ್ಮೆಟ್ ಹಾಕಿ, ಸೀಟ್ ಬೆಲ್ಟ್ ಹಾಕಿ ಎಂದು ಇಲಾಖೆ ಹೇಳುತ್ತಿದ್ದರೂ ಜನಗಳಿಗೆ ಕ್ಯಾರೇ ಇಲ್ಲ. ಈಗ ಸ್ಮಾರ್ಟ್‌ಫೋನ್‌ಲ್ಲಿ ಮಾತನಾಡಿಕೊಂಡು ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಐವತ್ತು ಲಕ್ಷ ದಾಟಿದೆ ವಾಹನಗಳ ಸಂಖ್ಯೆ
ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನ ವಾಹನಗಳ ಸಂಖ್ಯೆ ಐವತ್ತು ಲಕ್ಷ ದಾಟಿದೆ.
ದ್ವಿಚಕ್ರ ವಾಹನಗಳು- 35 ಲಕ್ಷ
ಕಾರು - 12 ಲಕ್ಷ
ಆಟೊ - 1.4 ಲಕ್ಷ
ಬಸ್ಸು/ ಮಿನಿ ಬಸ್ಸು- 1.6 ಲಕ್ಷ
ಲಾರಿ/ ಇತರೆ ವಾಹನ- 1 ಲಕ್ಷ

ಒಂದು ಕುಟುಂಬಕ್ಕೆ ಒಂದು ವಾಹನ:
ಪ್ರತಿದಿನ 30 ಲಕ್ಷಕ್ಕೂ ಅಧಿಕ ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಓಡುತ್ತವೆ. ಒಂದು ಕುಟುಂಬದವರಿಗೆ ಒಂದೇ ವಾಹನ ಎಂದು ಕಡ್ಡಾಯ ಮಾಡಿದರೆ ಬೆಂಗಳೂರಿನ ಮಾಲಿನ್ಯನದ ಜೊತೆಗೆ ಸಂಚಾರ ದಟ್ಟನೆಯೂ ಕಡಿಮೆಯಾಗಬಹುದು. ಇಲ್ಲದಿದ್ದಲ್ಲಿ ಮುಂದಿನ ಐದು ವರ್ಷದಲ್ಲಿ ಒಂದು ಕಿ.ಮೀ ಹೋಗಬೇಕಿದ್ದಲ್ಲಿ ಅರ್ಧಗಂಟೆ ತಗಲಿದರೂ ಸಂದೇಹವಿಲ್ಲ ಎಂದು ಹೇಳುತ್ತಾರೆ ಟ್ರಾಫಿಕ್ ಪೊಲೀಸರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications