Explainer: ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಅರಮನೆ ಮೈದಾನದ ಭೂಮಿ ಬಳಕೆ

ಬೆಂಗಳೂರು, ಮಾರ್ಚ್‌ 19: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತದ ಬಳಿಕ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಕಾಯ್ದೆಗೆ ಮಾರ್ಚ್ 12ರಂದು ರಾಜ್ಯಪಾಲರ ಒಪ್ಪಿಗೆಯನ್ನು ಪಡೆಯಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ರಾಜ್ಯಪತ್ರದಲ್ಲಿ ಇದನ್ನು ಪ್ರಕಟಿಸಲಾಗಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಕರ್ನಾಟಕ ರಾಜ್ಯ ಪತ್ರದ ಮೂಲಕ ಕಾಯ್ದೆಯ ನಿಯಮ, ಭೂ ಬಳಕೆ ಕುರಿತು ಇರುವ ಅವಕಾಶಗಳ ಕುರಿತು ಮಾಹಿತಿ ನೀಡಲಾಗಿದೆ.

ಈ ಕಾಯ್ದೆ ಜಾರಿಯ ಮೂಲಕ ಬೆಂಗಳೂರಿನ ಅರಮನೆ ಮೈದಾನದ ಭೂಮಿಯಲ್ಲಿ ಕಾಮಗಾರಿ ನಡೆಸುವುದು ಅಥವಾ ಕೈ ಬಿಡುವ ಹಕ್ಕನ್ನು ಕರ್ನಾಟಕ ಸರ್ಕಾರ ಹೊಂದಲಿದೆ. ಈ ಮೂಲಕ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ಬಳಕೆ ಮಾಡಲಾದ ಭೂಮಿಗೆ ಸೇರಿದಂತೆ ಒಟ್ಟು 3,414 ಕೋಟಿ ರೂ. ಮೊತ್ತದ ಟಿಡಿಆರ್ ಅನ್ನು ರಾಜಮನೆತನಕ್ಕೆ ನೀಡಬೇಕಿದೆ.

Bangalore Palace Land Utilisation Bill 2025 Empowers Karnataka Govt

ಆದರೆ ಟಿಡಿಆರ್ ಕುರಿತು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಟಿಡಿಆರ್‌ ಮೊತ್ತವನ್ನು ರಾಜಮನೆತನಕ್ಕೆ ನೀಡದೆ ಸುಪ್ರೀಂಕೋರ್ಟ್‌ಗೆ ಜಮಾ ಮಾಡಲಿದೆ. ಅರ್ಜಿ ವಿಚಾರಣೆ ಪೂರ್ಣಗೊಂಡು ಅಂತಿಮ ಆದೇಶ ಬಂದ ಬಳಿಕ ಮುಂದಿನ ಪ್ರಕ್ರಿಯೆ ಏನು? ಎಂಬುದು ತಿಳಿಯಲಿದೆ. ಈ ಕಾಯ್ದೆಯ ಮೂಲಕ ರಾಜಮನೆತನ ಮತ್ತು ಸರ್ಕಾರದ ನಡುವೆ ನೆಡೆಯುತ್ತಿದ್ದ ಜಟಾಪಟಿಗೆ ವಿರಾಮ ಸಿಕ್ಕಿದೆ.

ಹೊಸ ಕಾಯ್ದೆಯ ವಿವರಗಳು: ಮಾರ್ಚ್ 12ರಿಂದಲೇ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಅಧಿಕೃತವಾಗಿ ಜಾರಿಗೆ ಬಂದಿದೆ. ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರಡಿ ಆರ್ಜಿಸಿರುವ ಬೆಂಗಳೂರು ಅರಮನೆಯ ಭೂ ಬಳಕೆ ಮತ್ತು ನಿಯಂತ್ರಣ ಹಾಗೂ ಬೆಂಗಳೂರು ಅರಮನೆಗೆ ಸಂಬಂಧಿಸಿರುವ, ಈಗ ಕರ್ನಾಟಕ ರಾಜ್ಯದೊಂದಿಗೆ ನಿಹಿತವಾಗಿರುವ ಭೂಮಿಯ ನಷ್ಟಪರಿಹಾರವನ್ನು ನಿರ್ಧರಿಸಲು ಒಂದು ಅಧಿನಿಯಮವಾಗಿದೆ.

ಬೆಂಗಳೂರು ಅರಮನೆಯ ಒಟ್ಟಾರೆ ವ್ಯಾಪ್ತಿಯ 472 ಎಕರೆಗಳು ಮತ್ತು 16 ಗುಂಟೆಗಳ ಒಟ್ಟು ಮೌಲ್ಯವನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 8 ಮತ್ತು 9ನೇ ಪ್ರಕರಣಗಳ ಅನುಸಾರವಾಗಿ 11 ಕೋಟಿ ರೂಪಾಯಿಗಳೆಂದು ನಿರ್ಧರಿಸಲಾಗಿದೆ.

ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿರುವುದರಿಂದ ಹಾಗೂ ಸುಪ್ರೀಂಕೋರ್ಟ್‌ ಮೂಲಕ ಅಪೀಲಿನಲ್ಲಿ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಕಾರ್ಯಾಚರಣೆಯ ಮೇಲೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ಹೇಳಿದೆ.

ಸುಪ್ರೀಂಕೋರ್ಟ್ 2021ರ ನ್ಯಾಯಾಂಗ ನಿಂದನಾ ಪ್ರಕರಣದ ದಿನಾಂಕ 10.12.2024ರ ತೀರ್ಪಿನ ಮೂಲಕ ರಸ್ತೆ ಅಗಲೀಕರಣದ ಉದ್ದೇಶಕ್ಕಾಗಿ ಗುರುತಿಸಲಾದ ಬೆಂಗಳೂರು ಅರಮನೆಯ ಭಾಗದ ಮೌಲ್ಯವನ್ನು ನಿರ್ಣಯಿಸಿ, ಕರ್ನಾಟಕ ಸ್ಟಾಂಪು ಅಧಿನಿಯಮ, 1957 (1957ರ ಕರ್ನಾಟಕ ಅಧಿನಿಯಮ 34)ರ 45ಬಿ ಪ್ರಕರಣದ ಪ್ರಕಾರ ಅಕ್ಕಪಕ್ಕದ ಪ್ರದೇಶಗಳ ಚಾಲ್ತಿಯಲ್ಲಿರುವ ಮಾರ್ಗಸೂಚಿ ಮೌಲ್ಯಕ್ಕೆ ಅನುಸಾರವಾಗಿ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನು ಮಂಜೂರು ಮಾಡುವಂತೆ ನಿರ್ದೇಶಿಸಿದೆ.

ನ್ಯಾಯಾಲಯದ ತೀರ್ಪು ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಹಾಗೂ ಬೆಂಗಳೂರು ನಗರದ ನಗರ ಯೋಜನೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುವುದರಿಂದ, ಇದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ ಅನುಸಾರ ನಿರ್ಧರಿಸಲಾದ ಒಟ್ಟು ನಷ್ಟ ಪರಿಹಾರಕ್ಕೆ ಸುಸಂಗತವಾಗದಿರುವುದರಿಂದ, ಸಾಂವಿಧಾನಿಕ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸಿವಿಲ್ ಅಪೀಲುಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿರುವುದರಿಂದ, ಮತ್ತು ಅಭಿವೃದ್ಧಿ ಹಕ್ಕುಗಳ ವರ್ಗಾವಣೆಯು ವಿಪರ್ಯಯಗೊಳ್ಳದಿರುವ ಪ್ರಕ್ರಿಯೆಯಾಗಿದ್ದು, ಅದು ರಾಜ್ಯದ ಮೇಲೆ ತೀವ್ರ ಸಂಕೀರ್ಣ ಪರಿಣಾಮವನ್ನು ಬೀರಲಿದೆ ಎಂದು ಹೇಳಿದೆ.

ಆದ್ದರಿಂದ ಅಧಿನಿಯಮ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಅಧಿನಿಯಮ, 2025 ಜಾರಿಗೊಳಿಸಲಾಗಿದೆ. ಈ ಅಧಿನಿಯಮವು ಬೆಂಗಳೂರು ಅರಮನೆಗೆ ಅನ್ವಯವಾಗತಕ್ಕದ್ದು. 'ಬೆಂಗಳೂರು ಅರಮನೆ'ಯು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 2ನೇ ಪ್ರಕರಣದ ಖಂಡ (2)ರಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು. 'ಮೂಲಸೌಕರ್ಯ ಯೋಜನೆ'ಯು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಯನ್ನು ಒಳಗೊಳ್ಳತಕ್ಕದ್ದು ಎಂದು ತಿಳಿಸಿದೆ.

Take a Poll

ಕ್ಲೇಮುದಾರರು ಎಂಬುದು ಅಧಿನಿಯಮ 18ರ 2ನೇ ಪ್ರಕರಣದ (5)ನೇ ಖಂಡದಲ್ಲಿ ಪರಿಭಾಷಿಸಲಾದಂತೆ ಕಾನೂನುಸಮ್ಮತ ಪ್ರತಿನಿಧಿಗಳು ಮತ್ತು ವಾರಸುದಾರರು ಎಂಬ ಹಾಗೂ ಇತರರು ಇತರ ವ್ಯಕ್ತಿಗಳು ಮತ್ತು ಇತರ ಹಿತಾಸಕ್ತ ವ್ಯಕ್ತಿಗಳು ಎಂಬ ಅದೇ ಅರ್ಥವನ್ನು ಹೊಂದಿರತಕ್ಕದ್ದು. 'ನಷ್ಟಪರಿಹಾರ' ಸಂದಾಯ ಮಾಡಬಹುದಾದ ಯಾವುದೇ ಮೊತ್ತವನ್ನು ಒಳಗೊಳ್ಳತಕ್ಕದ್ದು ಮತ್ತು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ ಸಹ ಒಳಗೊಳ್ಳತಕ್ಕದ್ದು ಎಂದು ಹೇಳಿದೆ.

ಕಮೀಷನರ್ ಎಂಬುದು ಅಧಿನಿಯಮದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು. 'ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು' ಎಂಬುದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು, 2016ರೊಂದಿಗೆ ಓದಿಕೊಂಡಂತೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963ರ ಕರ್ನಾಟಕ ಅಧಿನಿಯಮ 11)ರ 14ಬಿ ಪ್ರಕರಣದ (28)ನೇ ಉಪ ಪ್ರಕರಣದ (ಕೆ) ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.

'ರಾಜ್ಯ ಸರ್ಕಾರ' ಎಂದರೆ ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂತಹ ಕರ್ನಾಟಕ ಸರ್ಕಾರದ ಅಂಗ ಮಾಧ್ಯಮಗಳನ್ನೂ ಒಳಗೊಳ್ಳತಕ್ಕದ್ದು. ಮೂಲಸೌಕರ್ಯ ಯೋಜನೆಗಾಗಿ ಭೂಮಿಯ ಬಳಕೆ ಎಂದರೆ ಯಾವುದೇ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996 (1996ರ ಕರ್ನಾಟಕ ಅಧಿನಿಯಮ 18)ರ 4ನೇ ಪ್ರಕರಣದಲ್ಲಿ ಬರುವ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸಲು ಅಧಿಕಾರವನ್ನು ಹೊಂದಿರತಕ್ಕದ್ದು ಎಂದು ಸ್ಪಷ್ಟಪಡಿಸಿದೆ.

ಯಾವುದೇ ನ್ಯಾಯಾಲಯದ ಯಾವುದೇ ತೀರ್ಪು ಅಥವಾ ಆದೇಶ ಅಥವಾ ರಾಜ್ಯ ಸರ್ಕಾರವು ಈ ಮೊದಲು ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು ಯಾವುದೇ ಮೂಲಸೌಕರ್ಯ ಯೋಜನೆಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಮುಂದುವರೆಯದಿರಲು ಅಧಿಕಾರವನ್ನು ಹೊಂದಿರತಕ್ಕದ್ದು. ರಾಜ್ಯ ಸರ್ಕಾರವು (2)ನೇ ಉಪಪ್ರಕರಣದಲ್ಲಿನ ಯಾವುದೇ ಮೂಲಸೌಕರ್ಯ ಯೋಜನೆಗೆ ಮುಂದುವರೆಯದಿರಲು ತೀರ್ಮಾನಿಸಿದಲ್ಲಿ, ಅದು ಬಳಸಲು ಉದ್ದೇಶಿಸಿರುವ ಆದರೆ ತರುವಾಯ ಮುಂದುವರೆಯದಿರುವ ಅಥವ ಬಳಕೆ ಮಾಡದಿರುವ ಬೆಂಗಳೂರು ಅರಮನೆಯ ಭಾಗಾಂಶದ ಭಾಗವನ್ನು ಪೂರ್ವ ಸ್ಥಿತಿಗೆ ತರತಕ್ಕದ್ದು ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+