ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲೀಕರಿಂದ ಪ್ರತಿಭಟನೆ: ಜಿಮ್‌ಗೆ ಹೋಗುತ್ತಿದ್ದವರು ಏನು ಮಾಡಬೇಕು

|
Google Oneindia Kannada News

ಬೆಂಗಳೂರು, ಜೂನ್ 11: ಕೊರೊನಾ ಲಾಕ್‌ಡೌನ್ ಬಹುತೇಕ ಸಡಿಲಿಕೆಯಾಗಿದೆ. ಹಲವು ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದ್ದು, ಎಲ್ಲವೂ ಹಿಂದಿನಂತೆ ನಡೆಯಲು ಪ್ರಾರಂಭವಾಗಿದೆ. ಆದರೆ, ಜಿಮ್‌ಗಳಿಗೆ ಮಾತ್ರ ಹಾಕಿದ ಬೀಗ ಇನ್ನೂ ಹಾಗೆಯೇ ಇದೆ.

ಜಿಮ್‌ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ನಾಳೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಜಿಮ್ ಮಾಲೀಕರು ಇನ್ನು ಮುಂದೆಯೂ ಜಿಮ್‌ಗಳನ್ನು ಮುಚ್ಚಿರುವುದು ಸೂಕ್ತವಲ್ಲ ಎಂದು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ. ಜಿಮ್ ಮಾಲೀಕರು ಹಾಗೂ ಸಿಬ್ಬಂದಿ ಎಂಜಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಅನ್ ಲಾಕ್ 1.0: ಜಿಮ್ ತೆರೆಯಲು ಅನುಮತಿ ನೀಡಿದ ಸಿಕ್ಕಿಂ ಸರ್ಕಾರಅನ್ ಲಾಕ್ 1.0: ಜಿಮ್ ತೆರೆಯಲು ಅನುಮತಿ ನೀಡಿದ ಸಿಕ್ಕಿಂ ಸರ್ಕಾರ

ಆದರೆ, ಜಿಮ್‌ಗೆ ಅನುಮತಿ ಸಿಗದೆ ಇರುವುದರಿಂದ, ಬರೀ ಜಿಮ್ ಮಾಲೀಕರಿಗೆ ಅಲ್ಲ ಜಿಮ್‌ಗೆ ಹೋಗುವವರಿಗೂ ನಷ್ಟವಾಗಿದೆ. ಬೆಂಗಳೂರಿನಂತಹ ಮಹಾ ನಗರದಲ್ಲಿ ಫಿಟ್ನೆಸ್‌ಗೆ ಜನರು ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ, ಜಿಮ್‌ಗೆ ಸೇರುವವರ ಸಂಖ್ಯೆ ಅಧಿಕವಾಗಿದೆ.

Bangalore Gym Owners Will Protest Tomorrow To Give Permission To Open Gym

ಹಲವು ಜಿಮ್‌ಗಳಲ್ಲಿ ಶುಲ್ಕವನ್ನು ಒಟ್ಟಿಗೆ ಪಾವತಿ ಮಾಡಬೇಕಿದೆ. ಮೂರು ತಿಂಗಳು, ಆರು ತಿಂಗಳು, ವರ್ಷದ ಪ್ಯಾಕೇಜ್‌ಗಳು ಇದ್ದೂ, ಇದಕ್ಕೆ ಸಾವಿರಾರೂ ರೂಪಾಯಿ ಶುಲ್ಕ ಇರುತ್ತದೆ. ಹೀಗಾಗಿ, ಕೊರೊನಾ ಲಾಕ್‌ಡೌನ್‌ಗೆ ಮುಂಚೆ ಜಿಮ್‌ಗೆ ಸೇರಿದವರ ಕಥೆ ಈಗ ಏನು ಎನ್ನುವ ಪ್ರಶ್ನೆ ಎದುರಾಗದೆ.

ಒಂದು ಕಡೆ ನಷ್ಟದಲ್ಲಿರುವ ಜಿಮ್‌ ಮಾಲೀಕರು ಹಣವನ್ನು ವಾಪಸ್‌ ನೀಡಲು ನಿರಾಕರಿಸುತ್ತಿದ್ದಾರೆ. ಜಿಮ್‌ಗೂ ಹೋಗದೆ, ತಾವು ಪಾವತಿ ಮಾಡಿದ ಹಣವೂ ವಾಪಸ್ ಬಾರದೆ ಅನೇಕರು ಕಂಗಾಲಾಗಿದ್ದಾರೆ. ಜಿಮ್ ಮಾಲೀಕರೆನೋ ಪ್ರತಿಭಟನೆ ಮಾಡುತ್ತಾರೆ, ಆದರೆ, ನಮ್ಮ ಹಣ ಬರಲು ನಾವೇನು ಮಾಡಬೇಕು ಎಂದು ಮನಸಲ್ಲೆ ಅನೇಕರು ಲೆಕ್ಕ ಹಾಕುತ್ತಿದ್ದಾರೆ.

English summary
Bangalore gym owners will protest tomorrow in MG road to give permission to open gym.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X