ಬಿಬಿಎಂಪಿ ಗುತ್ತಿಗೆದಾರ ಆತ್ಮಹತ್ಯೆ: 20 ಲಕ್ಷ ಪರಿಹಾರ

bangalore-contractor-girish-suicide-bbmp-mayor-sanctions-rs-20-lakh
ಬೆಂಗಳೂರು, ನ.29: ಬಿಬಿಎಂಪಿ ಸುಮಾರು 90 ಲಕ್ಷ ರೂಪಾಯಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದ್ದರಿಂದ ಸಾಲಬಾಧೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡ ಬಿಬಿಎಂಪಿಯ ಗುತ್ತಿಗೆದಾರ ಪೀಣ್ಯದ ಗಿರೀಶ್ (40) ಅವರ ಕುಟುಂಬಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 20 ಲಕ್ಷ ಪರಿಹಾರ ಘೋಷಿಸಿದೆ.

ಗಿರೀಶ್ ಕುಟುಂಬಕ್ಕೆ ಮೇಯರ್ ನಿಧಿಯಿಂದ 20 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಜತೆಗೆ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಭರವಸೆ ನೀಡಿದ್ದಾರೆ. ಇದೇ ವೇಳೆ ಎಲ್ಲ ಗುತ್ತಿಗೆದಾರರ ಎರಡು ತಿಂಗಳ ಬಾಕಿ ಹಣವನ್ನು ಒಂದೆರಡು ದಿನದಲ್ಲಿ ಬಿಡುಗಡೆ ಮಾಡುವುದಾಗಿ ಮೇಯರ್ ಪ್ರಕಟಿಸಿದ್ದಾರೆ.

ಕಾಂಟ್ರ್ಯಾಕ್ಟರ್ ಎಸ್ಸಾರ್ ಗಿರೀಶ್ ಸಾವಿನ ಸುತ್ತ ಮತ್ತಷ್ಟು ಮಾಹಿತಿ:

* ಬೆಂಗಳೂರು ಮಹಾನಗರ ಪಾಲಿಕೆಯು ಬಾಕಿ ಉಳಿಸಿಕೊಂಡಿರುವುದು ಕೇವನ ಒಬ್ಬ ಗಿರೀಶ್ ಅವರದ್ದಲ್ಲ. ಸುಮಾರು 3,000 ಗುತ್ತಿಗೆದಾರರದ್ದೂ ಇದೇ ಪಾಡಾಗಿದೆ. ಇವರಿಗೆಲ್ಲಾ ಬಿಬಿಎಂಪಿ 1,600 ಕೋಟಿ ರೂ. ಬಾಕಿ ನೀಡಬೇಕಿದೆ.

* ಗಿರೀಶ್ ವಿಷಯದಲ್ಲಿ... ಬಿಬಿಎಂಪಿ ಕಳೆದ 2 ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಗಿರೀಶ್ ಅವರಿಗೆ 30 ಲಕ್ಷ ರೂ ಸಾಲ ಪಾವತಿಸಬೇಕಿದೆ ಎಂದು ಸ್ವತಃ ಬಿಬಿಎಂಪಿಯೇ ಒಪ್ಪಿಕೊಂಡಿದೆ. ಈ ಎರಡು ವರ್ಷಗಳಲ್ಲಿ ಸಾಲದ ಚಕ್ರಸುಳಿಯಲ್ಲಿ ಸಿಲುಕಿದ್ದರು. ಅದು 80 ಲಕ್ಷ ರೂ. ಗೆ ತಲುಪಿತ್ತು. ಈಗ ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ ಬಿಬಿಎಂಪಿ ತನ್ನ ಬಾಕಿ ಪಾವತಿಸಿ ಕೈತೊಳೆದುಕೊಂಡರೂ ಗಿರೀಶ್ ಕುಟುಂಬಕ್ಕೆ 80 ಲಕ್ಷ ರೂ. ಸಾಲ ಪಾವತಿಸುವುದು ದುಸ್ಸಾಧ್ಯದ ಮಾತಾಗಿದೆ.

* ಈ ಪಾಟಿಯ ಸಾಲದ ಹೊರೆಯಿಂದ ಗಿರೀಶ್ ಕುಟುಂಬವೂ ಬಸವಳಿದಿತ್ತು. ಕಳೆದ ವರ್ಷ ಎಸ್ಸೆಲ್ಸಿಯಲ್ಲಿದ್ದ ಗಿರೀಶ್ ಅವರ ದೊಡ್ಡ ಮಗಳು ಟ್ಯೂಶನ್ ಗೆ ಹೋಗಲು ಆಗಿರಲಿಲ್ಲ. ಆದರೂ ಆಕೆ distinctionನಲ್ಲಿ ಪಾಸಾಗಿದ್ದಾಳೆ. ಆದರೆ ಈಗ ಅಪ್ಪ ಮರಳಿಬಾರದ ಲೋಕಕ್ಕೆ ಹೋಗಿದ್ದಾರೆ.

* ಇಂತಹ ಗಿರೀಶಗಳು ಬಿಬಿಎಂಪಿ ಪಟ್ಟಿಯಲ್ಲಿ ಇನ್ನೂ ಅನೇಕರಿದ್ದಾರೆ. ಮತ್ತಷ್ಟು ಅನಾಹುತಗಳು ನಡೆಯುವ ಮುನ್ನ ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತದಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+