ಮತ್ತೆ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದ ಚಾಯ್ ವಾಲಾ
ಬೆಂಗಳೂರು, ಏಪ್ರಿಲ್ 02: ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರರಾಗಿ ಮತ್ತೊಮ್ಮೆ ಸೈಯದ್ ಚುನಾವಣೆ ಸ್ಪರ್ಧಿಸುತ್ತಿದ್ದಾರೆ.2014ರಲ್ಲಿ ಕಣಕ್ಕಿಳಿದಿದ್ದ ಈ ಚಾಯ್ ವಾಲ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸೈಯಸ್ ಆಸಿಫ್ ಬುಖಾರಿ ಅವರಿಗೆ ಈ ಬಾರಿ ಕ್ಯಾಲ್ಕುಲೇಟರ್ ಚಿಹ್ನೆ ಸಿಕ್ಕಿದೆ. 'ನಾನು ಚಾಯ್ ವಾಲಾ ನನಗೆ ಮತ ಹಾಕಿ' ಎಂದು ಸೈಯದ್ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ಕೆ 5 ಲಕ್ಷ ರು ಖರ್ಚು ಮಾಡುತ್ತಿರುವುದಾಗಿ ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡುತ್ತಾ ಹೇಳಿದರು.
ಬೆಂಗಳೂರು ಕೇಂದ್ರಭಾಗ ಲೋಕಸಭಾ ಕ್ಷೇತ್ರದ ಸಮಗ್ರ ಚಿತ್ರಣ
ಈ ಹಿಂದೆ ಬಿಬಿಎಂಪಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸೈಯದ್ ಆಸೀಫ್, ಈಗ ಮತ್ತೊಮ್ಮೆ ಲೋಕಸಭಾ ಅಖಾಡದಲ್ಲಿದ್ದಾರೆ. 25 ಸಾವಿರ ಠೇವಣಿ ಹಣ, ಚುನಾವಣಾ ಖರ್ಚು ವೆಚ್ಚ ಮೊತ್ತವನ್ನು ಸರಿಯಾಗಿ ನೀಡಿದ್ದೇನೆ. ಭ್ರಷ್ಟಮುಕ್ತ ಆಡಳಿತಕ್ಕಾಗಿ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. 2015ರಲ್ಲಿ ಸೈಯದ್ ಅವರಿಗೆ ಭಾರತದ ಶ್ರೇಷ್ಠ ನಾಗರಿಕ ಎಂಬ ಪ್ರಶಸ್ತಿ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಕೂಡಾ ಮಾಡಿದ್ದಾರೆ.

ಬೆಂಗಳೂರಿನ ಜಾನ್ಸನ್ ಮಾರುಕಟ್ಟೆಯಲ್ಲಿ ಚಾಯ್ ಫಸ್ಟ್ ಎಂಬ ಮಳಿಗೆ ಹೊಂದಿರುವ ಅಶೋಕ್ ನಗರ ನಿವಾಸಿ 45 ವರ್ಷ ವಯಸ್ಸಿನ ಸೈಯದ್ ಅವರ ವಯೋವೃದ್ಧ ತಂದೆ ಮೌಲನಾ ಅವರು ತಮ್ಮ ಮಗನ ಸಾಹಸಕ್ಕೆ ಸಾಥ್ ನೀಡಿದ್ದು, ಮಗ ಪ್ರಚಾರಕ್ಕೆ ತೆರಳಿದಾಗ ಚಹಾ ಅಂಗಡಿ ನೋಡಿಕೊಳ್ಳುತ್ತಿದ್ದಾರೆ.

ಸೈಯದ್ ಅವರ ಬಳಿ 2 ಲಕ್ಷ ರು ನಗದು ಇದೆ. ಯಾವುದೇ ನಿವೇಶನ, ಕಟ್ಟಡ, ಕೃಷಿ ಭೂಮಿ ಹೊಂದಿಲ್ಲ, ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ. ಬಿ.ಎ ಪದವೀಧರ ಸೈಯದ್ ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ.












Click it and Unblock the Notifications