ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮ್‌ ಆದ್ಮಿಯ ಶ್ರೀಮಂತ ಅಭ್ಯರ್ಥಿ ಇನ್ಫಿ ಬಾಲಕೃಷ್ಣನ್

By Srinath
|
Google Oneindia Kannada News

ಬೆಂಗಳೂರು, ಮಾರ್ಚ್ 25- ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಮಾಹಿತಿ ತಂತ್ರಜ್ಞಾನದ ಅಗ್ರಗಣ್ಯರಲ್ಲಿ ಒಬ್ಬರಾದ ವಿ ಬಾಲಕೃಷ್ಣನ್‌ ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾ ಅಭ್ಯರ್ಥಿಯಾಗಿರುವ ಇನ್ಫೋಸಿಸ್‌ ಮಾಜಿ ಮುಖ್ಯ ಹಣಕಾಸು ಅಧಿಕಾರಿ, 49 ವರ್ಷದ ಬಾಲಕೃಷ್ಣನ್‌ ಅವರ ಸ್ಥಿರ ಮತ್ತು ಚರ ಆಸ್ತಿಯ ಒಟ್ಟು ಮೌಲ್ಯ 390 ಕೋಟಿ ರೂಪಾಯಿ. 180.52 ಕೋಟಿ ಚರಾಸ್ತಿ ಹಾಗೂ 9 ಕೋಟಿ ಸ್ಥಿರಾಸ್ತಿ ಇದರಲ್ಲಿದೆ. ನಗದು ಮಾತ್ರ 10 ಸಾವಿರ ರೂ. ಇದೆ. 50 ಲಕ್ಷದ‌ Audi ಹಾಗೂ 6.86 ಲಕ್ಷ ಮೌಲ್ಯದ Hyundai i10 ಕಾರು ಇದೆ.

ಬಸವೇಶ್ವರ ನಗರದಲ್ಲಿ 3.1 ಕೋಟಿ ರೂ. ಮನೆ, ಪತ್ನಿ ಚೈತ್ರಾ ಹೆಸರಿನಲ್ಲಿ ಮಲ್ಲೇಶ್ವರ ಬ್ರಿಗೇಡ್‌ ಗೇಟ್‌ ವೇ ದಲ್ಲಿ ಒಂದು ಫ್ಲ್ಯಾಟ್‌ ಇದೆ. ವಿವಿಧ ಬ್ಯಾಂಕ್ ಮತ್ತು ಹುಡ್ಕೊದಲ್ಲಿ 8.71 ಕೋಟಿ ರೂ ಮೌಲ್ಯದ ಷೇರು ಹೊಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

bangalore-central-aam-aadmi-party-ex-infosys-balakrishnan-nomination

ಪತ್ನಿ ಚೈತ್ರಾ ಹೆಸರಿನಲ್ಲಿ 19.34 ಕೋಟಿ ರೂ. ಮಕ್ಕಳಾದ ಸ್ನೇಹಾ ಬಾಲಕೃಷ್ಣನ್ ಮತ್ತು ಶ್ವೇತಾ ಬಾಲಕೃಷ್ಣನ್ ಹೆಸರಿನಲ್ಲಿ 6.53 ಕೋಟಿ ರೂ ಮೌಲ್ಯದ ವಿವಿಧ ಕಂಪನಿಗಳ ಬಾಂಡುಗಳು ಇವೆ. ಬಾಲಕೃಷ್ಣನ್,ಪತ್ನಿ ಮತ್ತು ಇಬ್ಬರು ಮಕ್ಕಳ ಹೆಸರಿನಲ್ಲಿ ಬೆಂಗಳೂರಿನ ವಿವಿಧ ಕಡೆಗಳಲ್ಲಿ 10 ಐಷಾರಾಮಿ ಬಂಗಲೆಗಳಿವೆ. ತಮಗೆ 2.45 ಕೋಟಿ ರೂ ವಾರ್ಷಿಕ ಆದಾಯ ಇದೆ ಎಂದು ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ. (ಬೆಂ ದಕ್ಷಿಣ ಕಾಂಗ್ರೆಸ್‌ ಅಭ್ಯರ್ಥಿ ನಿಲೇಕಣಿ ಆಸ್ತಿ ಎಷ್ಟು ಗೊತ್ತಾ?)

ಕಳೆದ ಡಿಸೆಂಬರಿನಲ್ಲಿ ಇನ್ಫೋಸಿಸ್ ಕಂಪನಿಯನ್ನು ತೊರೆಯುವ ಮುನ್ನ 21 ವರ್ಷ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದರು. ಬಿಜೆಪಿ ಹಾಲಿ ಸಂಸದ ಪಿಸಿ ಮೋಹನ್ ಮತ್ತು ಕಾಂಗ್ರೆಸ್ಸಿನ ಯುವ ನಾಯಕ ರಿಜ್ವಾನ್ ಅರ್ಷದ್ ಅವರು ಎದುರಾಳಿಗಳಾಗಿದ್ದಾರೆ. (ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಆಸ್ತಿ ವಿವರ ಘೋಷಣೆ)

English summary
Lok Sabha Election 2014 - Bangalore Central on an Aam Aadmi Party Former Infosys V Balakrishnan files nomination. and he declared total family assets worth Rs 390 crore. He is now up against the Bharatiya Janata Party’s sitting MP PC Mohan, and youth Congress leader Rizwan Arshad
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X