ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣದ ಬೇಡಿಕೆ, ಮಹಿಳೆ ಮುಖಕ್ಕೆ ಉಗಿದ ಆಟೋ ಚಾಲಕ

|
Google Oneindia Kannada News

ಬೆಂಗಳೂರು, ಸೆ. 22 : ಕೇಳಿದಷ್ಟು ಪ್ರಯಾಣ ದರ ನೀಡಲಿಲ್ಲ ಎಂದು ಕೋಪಗೊಂಡ ಆಟೋ ಚಾಲಕನೊಬ್ಬ ಸಾಫ್ಟ್‌ವೇರ್‌ ಇಂಜಿನಿಯರ್ ಮುಖಕ್ಕೆ ಉಗಿದು, ಅನುಚಿತವಾಗಿ ವರ್ತಿಸಿದ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಅನ್ವಯ ಆಟೋ ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ರಿನಿ ಬಿಸ್ವಾಸ್ ಅವರು ಆಟೋ ಚಾಲಕ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಸೆ.18ರ ರಾತ್ರಿ ಮಾರುತಿ ನಗರದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಆಟೋದಲ್ಲಿ ಹೋಗುವಾಗ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. [ಆಟೋ ದರದ ಬಗ್ಗೆ ಮಾಹಿತಿ ಬೇಕೆ ಎಸ್ಎಂಎಸ್ ಮಾಡಿ]

Auto rickshaw

ಮಹಮ್ಮದ್‌ ಅಲಿ ಎಂಬ ಆಟೋ ಚಾಲಕ ಮಾರುತಿ ನಗರದಿಂದ ಕ್ಯಾಷಿಯರ್‌ ಲೇಔಟ್‌ಗೆ ಕರೆದೊಯ್ಯಲು 80 ರೂ. ಕೇಳಿದ್ದಾನೆ. ಆದರೆ, ನಾನು ಮೀಟರ್‌ಗೆ ಅನುಗುಣವಾಗಿ ಹಣ ನೀಡುತ್ತೇನೆ ಎಂದು ಹೇಳಿದೆ. ಇದಕ್ಕೆ ಒಪ್ಪಿದ ಚಾಲಕ ಮನೆಯ ಬಳಿ ಬಂದಾಗ ಮೀಟರ್‌ಗಿಂತ ಹೆಚ್ಚಿನ ಹಣ ಕೇಳಿದ. ಕೊಡಲು ನಿರಾಕರಿಸಿದಾಗ ನನ್ನ ಮುಖಕ್ಕೆ ಉಗಿದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ, ಹಲ್ಲೆ ಮಾಡಿದ ಎಂದು ರಿನಿ ದೂರಿನಲ್ಲಿ ಆರೋಪಿಸಿದ್ದಾರೆ.

ರಿನಿ ಮತ್ತು ಆಟೋ ಚಾಲಕನ ಜಗಳ ನೋಡಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿದಾಗ ಆಟೋ ಚಾಲಕ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಕುರಿತು ರಿನಿ ಮಡಿವಾಳ ಪೊಲೀಸರಿಗೆ ಆಟೋ ನಂಬರ್‌ ಸಹಿತ ದೂರು ನೀಡಿದ್ದರು. [ಮಾರುವೇಷದಲ್ಲಿ ಆಟೋ ಚಾಲಕರ ವಿರುದ್ಧ ಕಾರ್ಯಾಚರಣೆ]

ದೂರಿನ ಅನ್ವಯ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ನೆರವು ಪಡೆದ ಪೊಲೀಸರು ಆರೋಪಿ ಮಹಮ್ಮದ್‌ ಅಲಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಡಿವಾಳ ಉಪ ವಿಭಾಗದ ಎಸಿಪಿ ಡಾ.ಬಿ.ಎಸ್‌.ಶಾಂತಕುಮಾರ್ ಹೇಳಿದ್ದಾರೆ. ಆರೋಪಿ ವಿರುದ್ಧ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ಕುರಿತು ಫೇಸ್‌ಬುಕ್‌ನಲ್ಲಿಯೂ ರಿನಿ ಬಿಸ್ವಾಸ್ ಮಾಹಿತಿ ನೀಡಿದ್ದಾರೆ.

English summary
Another case of an auto rickshaw driver misbehaving with a passenger has come to light in Bangalore. 25-year-old software engineer Rini Biswas field the complaint against auto driver in Madiwala police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X