ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಕಡಿಮೆ?

|
Google Oneindia Kannada News

ಬೆಂಗಳೂರು, ನ.28 : ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಇಳಿಕೆ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಆಟೋ ಗ್ಯಾಸ್ ದರ ಕಡಿಮೆಯಾದರೆ ಪ್ರಯಾಣ ದರವನ್ನು ಇಳಿಕೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಆಟೋ ಚಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಸದ್ಯ ಗ್ಯಾಸ್‌ ದರ ಲೀಟರ್‌ಗೆ 46 ರೂ.ಇದೆ. ನವೆಂಬರ್ ಅಂತ್ಯದಲ್ಲಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಗ್ಯಾಸ್ ದರ ಕಡಿಮೆಯಾದರೆ, ಆಟೋ ಪ್ರಯಾಣ ದರವನ್ನು ಇಳಿಕೆ ಮಾಡಲಾಗುತ್ತದೆ ಎಂದು ಸೋಮಶೇಖರ್ ತಿಳಿದ್ದಾರೆ.

Auto

ಹಿಂದೆ ಗ್ಯಾಸ್‌ ದರ ಹೆಚ್ಚಳ­ವಾ­ಗಿದ್ದರಿಂದ ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿತ್ತು. ಸದ್ಯ ಗ್ಯಾಸ್‌ ದರ­ದಲ್ಲಿ 3 ರಿಂದ 4 ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದ್ದು, ದರ ಇಳಿದರೆ ಆಟೋ ಪ್ರಯಾಣ ದರವನ್ನು ಕಿ.ಮೀಗೆ 2 ಇಳಿಸುವ ಚಿಂತನೆ ಇದೆ ಎಂದರು. [ಆಟೋ ದರದಲ್ಲಿ ಮತ್ತೆ ಏರಿಕೆ]

ಟ್ಯಾಕ್ಸಿ ಕಡಿಮೆ : ಬೆಂಗಳೂರು ನಗರದಲ್ಲಿ ಆಟೋ ಪ್ರಯಾಣ ದರ ಕಿ.ಮೀ.ಗೆ 13 ರೂ. ಇದ್ದು ಕನಿಷ್ಟ 25 ರೂ. ದರವಿದೆ. ಆಟೋಗಳಿಗಿಂತ ಟ್ಯಾಕ್ಸಿ ಪ್ರಯಾಣ ದರ ಕಡಿಮೆ ಇದ್ದು, ಅದರಲ್ಲಿ ಸಂಚರಿಸುವ ಜನರು ಹೆಚ್ಚಾಗಿದ್ದಾರೆ. ಆದ್ದರಿಂದ ನ.29ರಂದು ಆಟೋ ಚಾಲಕರ ಒಕ್ಕೂಟಗಳ ಸಭೆ ಕರೆಯಲಾಗಿದ್ದು, ದರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. [ಆಟೋ ದರದ ಬಗ್ಗೆ ಮಾಹಿತಿ ಬೇಕೆ?]

ದರ ಇಳಿಕೆಗೆ ವಿರೋಧ : ಆಟೋ ಪ್ರಯಾಣ ದರ ಇಳಿಕೆ ಮಾಡಲು ಕೆಲವು ಆಟೋ ರಿಕ್ಷಾ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆಟೋ ಚಾಲಕರ ಸೌಹಾರ್ದ ಸಹಕಾರ ಸಂಘ ದರ ಇಳಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ಬೆಂಬಲ ನೀಡುವುದಿಲ್ಲ ಎಂದು ಆಟೋರಿಕ್ಷಾ ಚಾಲಕರ ಒಕ್ಕೂಟ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದ್ದಾರೆ.

English summary
Bengaluru Auto drivers association divided in their stand on seeking reduction in fares. Association will meet on Saturday, November 29 to discuss about fare reduction. Now auto fare in city is Rs. 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X