ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತೆ ಮಗಳಿಗಾಗಿ ಎಟಿಎಂ ಹಣ ಎಗರಿಸಿದ್ದ ರೋಮಿಯೋ ಚಾಲಕ ಸೆರೆ !

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ತನ್ನ ಅತ್ತೆಯ ಮಗಳ ಪ್ರೀತಿಗಾಗಿ ಸ್ವಂತ ಹೆಂಡತಿ ಮಕ್ಕಳನ್ನು ಬಿಟ್ಟು ಎಟಿಎಂ ಯಂತ್ರಕ್ಕೆ ತುಂಬುವ 64 ಲಕ್ಷ ಹಣದ ಸಮೇತ ಎಸ್ಕೇಪ್ ಆಗಿದ್ದ ಚಾಲಕ ಕೊನೆಗೂ ಸಿಕ್ಕಿಬಿದ್ದಿದ್ದಾನೆ ! ಗಂಡನನ್ನು ಬಿಟ್ಟಿದ್ದ ಅತ್ತೆ ಮಗಳಿಗೆ ಬಾಳು ಕೊಡಲು ಜೀವ ತೊರೆದು ಎಟಿಎಂ ಹಣವನ್ನು ಎಗರಿಸಿದ್ದ ಯೋಗೀಶ್ ಅದೆಷ್ಟು ಕನಸು ಕಟ್ಟಿಕೊಂಡಿದ್ದನೋ ! ಅಂದುಕೊಂಡಂತೆ ಹಣ ಎಗರಿಸಿ ಲವರ್ ಜತೆ ಎಸ್ಕೇಪ್ ಆಗಿದ್ದ ಸೆಕ್ಯೂರ್ ವ್ಯಾಲ್ಯೂ ಕಂಪನಿ ಚಾಲಕ ಯೋಗೀಶ್ ಮೈಸೂರಿನಲ್ಲಿ ಲವರ್ ಜತೆ ಸಿಕ್ಕಿ ಬಿದ್ದಿದ್ದಾನೆ. ಆದರೆ ಏಳು ದಿನದಲ್ಲಿ ಬರೋಬ್ಬರಿ 30 ಲಕ್ಷ ರೂಪಾಯಿ ಮಜಾ ಉಡಾಯಿಸಿದ್ದಾನೆ.

Recommended Video

ಎಟಿಎಂ ಹಣ ಕದ್ದು ಎಸ್ಕೇಪ್ ಆಗಿದ್ದ ಡ್ರೈವರ್ ಅರೆಸ್ಟ್ | Oneindia Kannada

ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರಾದ ಬೂಕನಕೆರೆಯ ಯೋಗೀಶ್ ಪ್ರೇಮ ಕಥೆಯ ದುರಂತ ಅಂತ್ಯವಿದು. ಲವರ್ ಜತೆ ಮೈಸೂರಿನಲ್ಲಿ ಸ್ನೇಹಿತರ ಆಶ್ರಯ ಪಡೆಯಲು ಹೋಗಿದ್ದಾನೆ. ಆದರೆ, ಪೊಲೀಸರು ಮೊಬೈಲ್ ಟವರ್ ಲೊಕೇಷನ್ ಆಧಾರದ ಮೇಲೆ ಯೋಗೀಶ್ ನನ್ನು ಸುಬ್ರಮಣ್ಯನಗರ ಠಾಣೆ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಮ್ಮದಿ ಸಂಸಾರ

ನೆಮ್ಮದಿ ಸಂಸಾರ

ಸೆಕ್ಯೂರ್ ವಾಲ್ಯೂ ಕಂಪನಿಯಲ್ಲಿ ಚಾಲಕನಾಗಿದ್ದ ಯೋಗೀಶ್ ಹಲವು ವರ್ಷದಿಂಧ ಕೆಲಸ ನಿರ್ವಹಿಸುತ್ತಿದ್ದ. ಈತನ ಕಾರ್ಯ ನೋಡಿ ಎಟಿಎಂಗೆ ಹಣ ತುಂಬುವ, ಹಣ ತುಂಬಿದ ಎಟಿಎಂನಲ್ಲಿ ಹಣ ತೆಗೆದು ಬೇರೆ ಎಟಿಎಂಗೆ ಹಾಕುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ಕೈಗೆ ಬಂದ ಸಂಬಳದಲ್ಲಿ ಇಬ್ಬರ ಮಕ್ಕಳ ಜತೆ ನೆಮ್ಮದಿಯಾಗಿ ಸಂಸಾರ ಮಾಡುತ್ತಿದ್ದ. ಇಬ್ಬರು ಮಕ್ಕಳೊಂದಿಗೆ ಯೋಗೀಶ್ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದ.

ಬಿಎಸ್ ವೈ ಊರಿನ ಚಾಲಕ 60 ಲಕ್ಷ ಎಟಿಎಂ ಹಣದೊಂದಿಗೆ ಜೂಟ್ !ಬಿಎಸ್ ವೈ ಊರಿನ ಚಾಲಕ 60 ಲಕ್ಷ ಎಟಿಎಂ ಹಣದೊಂದಿಗೆ ಜೂಟ್ !

ಎರಡನೇ ಆವೃತ್ತಿ ಪ್ರೇಮ

ಎರಡನೇ ಆವೃತ್ತಿ ಪ್ರೇಮ

ಯೋಗೀಶ್ ನ ಅತ್ತೆ ಮಗಳು ಮದುವೆಯಾಗಿ ಒಂದು ಮಗ ಕೂಡ ಇದ್ದಾನೆ. ಮುಂಬಯಿನಲ್ಲಿರುವ ಗಂಡನ ಜತೆ ಅನೋನ್ಯವಾಗಿರಲಿಲ್ಲ. ಇಬ್ಬರ ನಡುವಿನ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಚಾಲಕ ವೃತ್ತಿಯಿಂದ ಬರುವ ದುಡ್ಡಿನಲ್ಲಿ ಇರುವ ಹೆಂಡತಿಯನ್ನು ಸಾಕುವುದೇ ಕಷ್ಟವಾಗಿತ್ತು. ಇನ್ನು ಇಬ್ಬರ ಮಕ್ಕಳ ಪೋಷಣೆ ಸಂಸಾರ ಕಷ್ಟವಾಗಿತ್ತು. ಹೀಗಿರುವಾಗಲೇ ತನ್ನ ಅತ್ತೆ ಮಗಳ ಜತೆ ಸಂಸಾರ ಮಾಡಲು ಯೋಜಿಸಿದ. ಇಬ್ಬರೂ ಪರಸ್ಪರ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಅದಕ್ಕೆ ದುಡ್ಡು ಬೇಕಿತ್ತು. ಆಗ ಯೋಗೀಶ್ ತಲೆಯಲ್ಲಿ ಹುಟ್ಟಿಕೊಂಡಿದ್ದು ಎಟಿಎಂ ಕ್ಯಾಷ್ !

 ಹೈಜಾಕ್ ಪ್ಲಾನ್

ಹೈಜಾಕ್ ಪ್ಲಾನ್

ಸೆಕ್ಯೂರ್ ವ್ಯಾಲ್ಯೂ ಎಟಿಎಂ ಹಣ ಎಗಿರುಸುವ ಹೈಜಾಕ್ ಪ್ಲಾನ್ ರೂಪಿಸಿದ್ದ. ಅದಕ್ಕೆ ಕಾಲವೂ ಕೂಡಿ ಬಂದಿತ್ತು. ಫೆ. 3 ರಂದು ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ಎಟಿಎಂ ತುಂಬ ಬೇಕಿದ್ದ 64 ಲಕ್ಷ ರೂ. ಹಣವನ್ನು ಎಸ್ಕೇಪ್ ಮಾಡಿಕೊಂಡು ಪರಾರಿಯಾಗಿದ್ದ. ಯೋಗಿಶ್ ಮೊಬೈಲ್ ಸ್ವಿಚ್ ಆಫ್‌ ಅಗಿತ್ತು. ಸೆಕ್ಯೂರ್ ವಾಲ್ಯೂ ಕಂಪನಿ ವ್ಯಾನ್ ಜಿಪಿಎಸ್ ಹುಡುಕಿದಾಗ ಸುಬ್ರಮಣ್ಯನಗರದಲ್ಲಿ ಒಂದೇ ಕಡೆ ಇತ್ತು. ನೋಡಿದಾಗ ಯೋಗೀಶ್ ಹಣದ ಸಮೇತ ಪರಾರಿಯಾಗಿದ್ದ. ಏನಾದರೂ ಅನಾಹುತ ಸಂಭವಿಸಿರಬಹುದೇ ಎಂದು ಎಲ್ಲಡೆ ವಿಚಾರಿಸಿದರೂ ಸುಳಿವು ಇರಲಿಲ್ಲ. ಬಳಿಕ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

 ಭಯಾನಕ ಕಥೆ ರಿವಿಲ್

ಭಯಾನಕ ಕಥೆ ರಿವಿಲ್

ಯೋಗೀಶ್ ಶ್ರೀಮಂತನಾಗುವ ಆಸೆಯಿಂದ ಹಣ ಸಮೇತ ಪರಾರಿಯಾಗಿರಬಹುದು ಎಂದು ಪೊಲೀಸರು ನಂಬಿಸಿದ್ದರು. ಯೋಗೀಶ್ ನ ಮನೆಗೆ ಹೋಗಿದ್ದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಪತ್ನಿ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ, ರೂಪವತಿ ತನ್ನ ಅತ್ತೆ ಮಗಳ ಜತೆ ಎಸ್ಕೇಪ್ ಆಗಿರುವ ಸಂಗತಿ ಬಯಲಾಗಿತ್ತು. ಯೋಗೀಶ್ ಪತ್ತೆಗಾಗಿ ಸಬ್‌ ಇನ್ಸ್ಪೆಕ್ಟರ್ ಲತಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಯೋಗೀಶ್ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಮೈಸೂರಿನ ಎಚ್‌.ಡಿ. ಕೋಟೆಯಲ್ಲಿ ಆಶ್ರಯ ಪಡೆದಿದ್ದ ಯೋಗೀಶ್ ಮತ್ತು ಆತನ ಅತ್ತೆ ಮಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ಸಹಕರಿಸಿ ಹಣ ಪಡೆದ ಆರೋಪದ ಮೇಲೆ ವಕೀಲ ಶ್ರೀಧರ್ ನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಕುಕ್ಕೇ ಸುಬ್ರಮಣ್ಯ ಕಥೆ

ಕುಕ್ಕೇ ಸುಬ್ರಮಣ್ಯ ಕಥೆ

ನಂದಿನಿ ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದ ಯೋಗೀಶ್ ಎಟಿಎಂನಲ್ಲಿ ಕ್ಯಾಷ್ ಎಗರಿಸಿದ ಬಳಿಕ ನೇರ ಮನೆಗೆ ಬಂದಿದ್ದ. ನಾನು ಕೆಲಸದ ಮೇಲೆ ಕುಕ್ಕೇ ಸುಬ್ರಮಣ್ಯಕ್ಕೆ ಹೋಗುತ್ತಿದ್ದೇನೆ. ಎರಡು ಮೂರು ದಿನ ಬರಲಿಕ್ಕೆ ಆಗುವುದಿಲ್ಲ ಎಂದು ಯೋಗೀಶ್ ಹೇಳಿದ್ದ. ಹೆಂಡತಿಗೆ ಕೇವಲ 50 ಸಾವಿರ ರೂಪಾಯಿ ಕೊಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದ. ಅತ್ತೆ ಮಗಳನ್ನು ಕರೆದುಕೊಂಡು ಅಷ್ಟು ಹಣದೊಂದಿಗೆ ಕುಕ್ಕೇ ಮಾರ್ಗವಾಗಿ ಪರಾರಿಯಾಗಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕೆಲ ದಿನ ಸುತ್ತಾಡಿದ ಯೋಗೀಶ್ ಕೊನೆಗೂ ಸ್ನೇಹಿತನನ್ನು ಸಂಪರ್ಕಿಸಿದ್ದ. ಮಾಡಿರುವ ಪ್ರಮಾದದ ಬಗ್ಗೆ ವಿವರ ನೀಡಿದಾಗ ಆತ ವಕೀಲರನ್ನು ಸಂಪರ್ಕಿಸಲು ಸೂಚಿಸಿದ್ದಾರೆ. ಅದರಂತೆ ವಕೀಲರನ್ನು ಸಂಪರ್ಕಿಸಿ ಅವರಿಗೆ 46 ಲಕ್ಷ ರೂ. ಕೊಟ್ಟಿದ್ದಾರೆ. ಉಳಿದ ಹಣದಲ್ಲಿ ಬಾಡಿಗೆ ಮನೆ ಪಡೆದು ಎಚ್‌.ಡಿ. ಕೋಟೆಯಲ್ಲಿ ಯೋಗೀಶ್ ವಾಸವಾಗಿದ್ದ. ಆದರೆ ಸ್ನೇಹಿತರನ್ನು ಸಂಪರ್ಕಿಸಿ ಪೊಲೀಸರ ಕೈಗೆ ಅತ್ತೆ ಮಗಳ ಸಮೇತ ಸಿಕ್ಕಿ ಬಿದ್ದಿದ್ದಾನೆ. ಕದ್ದ ಹಣದಲ್ಲಿ ಕೇವಲ 34 ಲಕ್ಷ ರೂ. ರೀಕವರಿಯಾಗಿದ್ದು, ಉಳಿದ 30 ಲಕ್ಷ ರೂ. ಯೋಗೀಶ್ ಏಳೇ ದಿನದಲ್ಲಿ ಖರ್ಚು ಮಾಡಿ ಮುಗಿಸಿದ್ದಾನೆ !

ಪ್ರೇಮ ಕಥೆ ಗತಿಯೇನು ?

ಪ್ರೇಮ ಕಥೆ ಗತಿಯೇನು ?

ಅತ್ತೆ ಮಗಳ ಜತೆ ಸಂಸಾರ ಹೂಡಲು ಹೊರಟಿದ್ದ ಯೋಗೀಶ್ ಜೈಲಿಗೆ ಹೋಗಲಿದ್ದಾನೆ. ಪತ್ನಿ ಇಬ್ಬರು ಮಕ್ಕಳಿಗೆ ಈ ವಿಷಯ ಗೊತ್ತಾಗಿ ಕಂಗಾಲಾಗಿದ್ದಾರೆ. ಅತ್ತ ಯೋಗೀಶ್ ನ ಅತ್ತೆ ಮಗಳಿಗೆ ಇತ್ತ ಪ್ರಿಯತಮನೂ ಇಲ್ಲ, ಅಲ್ಲಿ ಗಂಡ ಮನೆಗೆ ಬಿಟ್ಟಿಕೊಳ್ಳುವುದಿಲ್ಲ ಎಂಬ ಸಂದಿಗ್ಧ ಸ್ಥಿತಿ ಎದುರಾಗಿದೆ. ಯೋಗೀಶ್ ನ ಪ್ರೇಮಕಥೆ ಪರಿಹಾರ ವಿಲ್ಲದೇ ಅಂತ್ಯ ಕಂಡಿದೆ.

English summary
Bengaluru: ATM Driver who escape with Rs 64 lakh with his sister in law Arrested. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X