ಎಟಿಎಂ ಹಂತಕನ ಮತ್ತೊಂದು ಹಲ್ಲೆ ಯತ್ನ ಬಯಲು

ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ನ.19ರಂದು ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಅದೇ ವ್ಯಕ್ತಿ ಅದೇ ಎಟಿಎಂನಲ್ಲಿ ನ.18ರಂದು ಮುಂಜಾನೆ ಮತ್ತೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಹಣ ದೋಚಲು ಸಂಚು ರೂಪಿಸಿದ್ದ. ಆದರೆ, ಮಹಿಳೆಯ ಪತಿ ಆಗಮಿಸಿದ್ದರಿಂದ ಸ್ಥಳದಿಂದ ಪರಾರಿಯಾಗಿದ್ದ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಕಾರ್ಪೊರೇಷನ್ ಬ್ಯಾಂಕ್‌ನ ಎಟಿಎಂ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ, ಈ ಕೃತ್ಯ ಬೆಳಕಿಗೆ ಬಂದಿದೆ. ನ.18ರ ಸೋಮವಾರ ಬೆಳಗ್ಗೆ 6.45ರ ಸುಮಾರಿಗೆ ದರೋಡೆ ಯತ್ನ ನಡೆದಿದೆ. ಮರುದಿನ ನ.19ರ ಮಂಗಳವಾರ ಬೆಳಗ್ಗೆ 7.10ಕ್ಕೆ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆದಿದೆ. (ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ)
ಹಲ್ಲೆ ಯತ್ನ : ನ.18ರಂದು ಬೆಳಗ್ಗೆ ಮಹಿಳೆಯೊಬ್ಬರು ಎಟಿಎಂಗೆ ಬಂದಿದ್ದಾರೆ. ಅವರನ್ನು ಹಿಂಬಾಲಿಸಿದ ದುಷ್ಕರ್ಮಿ, ಎಟಿಎಂ ಕೇಂದ್ರದ ಷಟರ್ ಎಳೆಯುವ ಯತ್ನ ನಡೆಸಿದ್ದಾನೆ. ಅದೇ ವೇಳೆಗೆ ಮಹಿಳೆಯ ಪತಿ ಬಾಗಿಲ ಬಳಿ ಆಗಮಿಸಿ, ಷಟರ್ ಎಳೆಯುತ್ತಿರುವ ಬಗ್ಗೆ ಆತನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಆತ ಅಲ್ಲಿಂದ ಪರಾರಿಯಾಗಿದ್ದಾನೆ. (ಎಟಿಎಂಗಳಲ್ಲಿ ಸಿಸಿಟಿವಿ : 45 ದಿನ ಡೆಡ್ ಲೈನ್)
ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಜ್ಯೋತಿ ಉದಯ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಧರಿಸಿದ್ದ ಬಟ್ಟೆ ಹಾಗೂ ಆತ ಹಿಡಿದಿದ್ದ ಕೈಚೀಲ ಮತ್ತು ನ.18ರಂದು ವ್ಯಕ್ತಿ ಹಿಡಿದಿದ್ದ ಬ್ಯಾಗ್, ಧರಿಸಿದ್ದ ಬಟ್ಟೆಗೆ ಹೊಂದಾಣಿಕೆಯಾಗುತ್ತಿದೆ ಅಂಶ ತಿಳಿದುಬಂದಿದೆ. ಆದ್ದರಿಂದ ಎರಡೂ ಘಟನೆಗಳಿಗೆ ಆರೋಪಿಯೇ ಸೂತ್ರಧಾರ ಎಂದು ತೀರ್ಮಾನಿಸಿದ್ದಾರೆ.
ಜ್ಯೋತಿ ಉದಯ್ ಮೇಲೆ ದಾಳಿ ನಡೆಸಿದ ಆರೋಪಿ, ಘಟನೆ ನಡೆದ 2-3 ದಿನಗಳ ಹಿಂದೆಯೇ ಬೆಂಗಳೂರಿಗೆ ಆಗಮಿಸಿರುವ ಸಾಧ್ಯತೆ ಇದೆ ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಹೇಳಿಕೆ ನೀಡಿದ್ದರು. ಈ ಘಟನೆಯನ್ನು ನೋಡಿದರೆ ಪೊಲೀಸರು ಶಂಕೆ ಸತ್ಯವಾದಂತೆ ಕಾಣುತ್ತದೆ. (ಎಟಿಎಂ ಹಂತಕನ ತಲೆಗೆ ಆಂಧ್ರದಲ್ಲೂ ಬಹುಮಾನ)












Click it and Unblock the Notifications