ಜ್ಯೋತಿಷಿಯ ಎಡಬಿಡಂಗಿ ಜ್ಯೋತಿಷ್ಯದಿಂದ ಮೂರು ಮುಗ್ದ ಜೀವಗಳು ಬಲಿ
ಬೆಂಗಳೂರು, ಜನವರಿ 28: ಜ್ಯೋತಿಷಿ ಹೇಳಿದ ಜ್ಯೋತಿಷ್ಯದಿಂದ ಮೂರು ಮುಗ್ದ ಜೀವಗಳು ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಮಗುವಿನ ಬಗ್ಗೆ ಜ್ಯೋತಿಷಿ ಹೇಳಿದ ಆತಂಕಕಾರಿ ಭವಿಷ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಗೃಹಿಣಿ ಇಬ್ಬರು ಮಕ್ಕಳು ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎಪಿಎಂಸಿ ಸಮೀಪದ ಸರ್ ಎಂ ವಿ ಬಡಾವಣೆಯಲ್ಲಿರುವ ಉಷಾ(29) ಶಮಂತ್(8) ಮತ್ತು ಸಾನ್ವಿ (4) ಕೊಂದು ಸಾವಿಗೆ ಶರಣಾಗಿದ್ದಾರೆ.
ಶಿಡ್ಲಘಟ್ಟ ತಾಲೂಕು ಅಬ್ಲೂಡು ಗ್ರಾಮದ ಶಿಕ್ಷಕ ಅಶ್ವತ್ಥನಾರಾಯಣ್ ಮತ್ತು ಚಿಕ್ಕಬಳ್ಳಾಪುರದ ಕಂದವಾರಪೇಟೆ ನಿವಾಸಿ ಉಷಾ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಎಂವಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ನಗರದ ಕೆವಿ ಆಂಗ್ಲ ಶಾಲೆಯಲ್ಲಿ ಮಗ ಶಮಂತ್ ಎರಡನೇ ತರಗತಿ ಓದುತ್ತಿದ್ದ, ಈ ನಡುವೆ ಮಕ್ಕಳ ಜಾತಕ ಬರೆಸಿದಾಗ ಜ್ಯೋತಿಷಿ ಗಂಡಾಂತರ ಎದುರಾಗುವ ಲಕ್ಷಣ ವಿದೆ ಎಂಉ ಭವಿಷ್ಯ ನುಡಿದಿದ್ದ. ಇದರಿಂದ ಉಷಾ ಖಿನ್ನತೆಗೆ ಒಳಗಾಗಿದ್ದರು, ಪತಿ ಈ ಬಗ್ಗೆ ಎಷ್ಟು ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಭಾನುವಾರ ಬೆಳಗ್ಗೆ ಉಷಾ ಕರೆ ಸ್ವೀಕರಿಸದಿದ್ದಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಉಷಾ ಊಟದ ಜೊತೆಗೆ ಮಕ್ಕಳಿಬ್ಬರಿಗೆ ನಿದ್ರೆ ಮಾತ್ರೆ ತಿನ್ನಿಸಿದ್ದಾಳೆ. ಮಕ್ಕಳು ನಿದ್ದೆ ಹೋದ ಮೇಲೆ ಕತ್ತು ಹಿಸುಕಿ ಹಾಸಿಗೆ ಮೇಲೆ ಮಲಗಿಸಿದ್ದಾಳೆ. ಬಳಿಕ ಮಕ್ಕಳ ಪಕ್ಕದಲ್ಲೇ ನೇಣು ಬಿಗಿದುಕೊಂಡಿದ್ದಾಳೆ. ಎರಡೂವರೆ ವರ್ಷದ ಹಿಂದೆ ಉಷಾ ಸಹೋದರಿ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಳು. ಇತ್ತೀಚೆಗಷ್ಟೇ ಜ್ಯೋತಿಷಿ ಮಾತು ಕೇಳಿಕೊಂಡು ಹುಟ್ಟುವ ಮಗು ಹೆಣ್ಣೆಂದು ಭಾವಿಸಿ ಪತ್ನಿಗ ಗರ್ಭಪಾತ ಮಾಡಿಸಿದ್ದ ಘಟನೆಯೂ ಕೂಡ ನಡೆದಿತ್ತು.












Click it and Unblock the Notifications