Get Updates
Get notified of breaking news, exclusive insights, and must-see stories!

ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಥಳಿತ ಪ್ರಕರಣ: ಒಡಿಶಾ ಡಿಎಸ್‌ಪಿ ಪುತ್ರರು ಸೇರಿ ಮೂವರ ಬಂಧನ

ಬೆಂಗಳೂರು ಏಪ್ರಿಲ್ 7: ಸೌಂಡ್ ಕಡಿಮೆ ಮಾಡಿ ಎಂದಿದ್ದಕ್ಕೆ ನೆರೆಯ ವ್ಯಕ್ತಿಗೆ ಥಳಿಸಿ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಡಿಎಸ್‌ಪಿ ಪುತ್ರ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದೆ.

ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಲ್ ಡೇವಿಡ್ ನೆಹೆಮಿಯಾ ಅವರ ಸಹೋದರ ಮತ್ತು ಬೆಂಗಳೂರಿನ ವಿಜ್ಞಾನ್ ನಗರದ ನಿವಾಸಿ ಲಾಯ್ಡ್ ನೆಹೆಮಿಯಾ (54) ಅವರ ಮೇಲೆ ನೆರೆಯ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಥಳಿಸಿದ್ದರು. ತೀವ್ರ ಹಲ್ಲೆಗೊಳಗಾದ ಲಾಯ್ಡ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಸಾವನ್ನಪ್ಪಿದ್ದಾರೆ.

Associate held for murder over loud music in bengaluru: Two sons of Odisha DSP involved

ಲಾಯ್ಡ ಸಾವಿಗೆ ಕಾರಣರಾದ ಮೂವರು ಯುವಕರಲ್ಲಿ ಇಬ್ಬರು ಭುವನೇಶ್ವರ ರಾಜ್ಯ ಅಪರಾಧ ದಾಖಲೆಗಳ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕೇಶಬ್ ಕುಮಾರ್ ಸಾಮಂತರಾಯರ ಪುತ್ರರಾಗಿದ್ದಾರೆ ಎಂದು ಎಚ್‌ಎಎಲ್ ಪೊಲೀಸರು ತನಿಖೆ ನಡೆಸಿ ತಿಳಿಸಿದ್ದಾರೆ.

ಒಡಿಶಾ ಡಿಎಸ್‌ಪಿ ಪುತ್ರ ವಿರುದ್ಧ ಕೇಸ್

ಡಿಎಸ್‌ಪಿ ಅವರ ಕಿರಿಯ ಪುತ್ರ ಅನಿರುದ್ಧ ಸಾಮಂರಾಯ್ (28) ಅವರನ್ನು ಗುರುವಾರ ದೆಹಲಿಯಿಂದ ಬೆಂಗಳೂರಿಗೆ ಕರೆತರಲಾಗಿದೆ. ಜೊತೆಗೆ ಅವರ ಹಿರಿಯ ಮಗ ಬಸುದೇವ್ ಸಾಮಂತ್ರಾಯ (34) ನಿರ್ಮಾಣ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದು, ಈವರನ್ನೂ ಬಂಧಿಸಲಾಗಿದೆ. ಖಾಸಗಿ ಸಂಸ್ಥೆಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಬಸುದೇವ್ ಸ್ನೇಹಿತ ಅಭಿಷೇಕ್ ಸಿಂಗ್ (31) ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಸುದೇವ್ ಮತ್ತು ಅಭಿಷೇಕ್ ಅವರನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ವಿಜ್ಞಾನ್ ನಗರದ ನಿವಾಸಿ ಲಾಯ್ಡ್ ಜೋರಾಗಿ ಸಂಗೀತವನ್ನು ಆಕ್ಷೇಪಿಸಿದಕ್ಕಾಗಿ ಮೂವರು ನೆರೆಹೊರೆಯವರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಸಾವನ್ನಪ್ಪಿದ ಲಾಯ್ಡ ಅವರನ್ನು ಗುರುವಾರ ಅಂತ್ಯಕ್ರಿಯೆ ನಡೆಸಲಾಯಿತು.

Associate held for murder over loud music in bengaluru: Two sons of Odisha DSP involved

ಡಿಸಿಪಿ (ವೈಟ್‌ಫೀಲ್ಡ್) ಎಸ್ ಗಿರೀಶ್ ಅವರು ಡಿಎಸ್‌ಪಿಯ ಪುತ್ರರು ಎಂದು TOI ಗೆ ಖಚಿತಪಡಿಸಿದ್ದಾರೆ. ದೆಹಲಿಯಿಂದ ಕರೆದುಕೊಂಡು ಬಂದಿರುವ ಅನಿರುದ್ಧ್ ರಾಷ್ಟ್ರ ರಾಜಧಾನಿಯಲ್ಲಿ MNC ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ವಕೀಲರಾಗಿದ್ದಾರೆ ಎಂದು ಗಿರೀಶ್ ಅವರು ಹೇಳಿದರು.

ಒಡಿಶಾ ಡಿಎಸ್‌ಪಿ ಪುತ್ರರು ಬೆಂಗಳೂರು ಬಂದಿದ್ದು ಯಾಕೆ?

ಅನಿರುದ್ಧ ರಜೆಯ ಮೇಲೆ ಬೆಂಗಳೂರಿಗೆ ಬಂದಿದ್ದು, ತನ್ನ ಸಹೋದರನ ಮಗುವಿಗೆ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಅವರು ಪಾರ್ಟಿ ಮಾಡಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಕಾರಿನಲ್ಲಿ ಜೋರಾಗಿ ಸಂಗೀತ ನುಡಿಸಿದ್ದಾರೆ. ಇದು ನೆರೆಯವರಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಇದರಿಂದ ಲಾಯ್ಡ್ ನೆಹೆಮಿಯಾ ಸೌಂಡ್ ಕಡಿಮೆ ಮಾಡುವಂತೆ ಕೇಳಿದ್ದಾರೆ.

ಆದರೆ ಇದಕ್ಕೆ ನಿರಾಕರಿಸಿದ ಗುಂಪು ಲಾಯ್ಡ್ ನೆಹೆಮಿಯಾ ಅವರ ಮೇಲೆ ಹಲ್ಲೆ ಮಾಡಿದೆ. ತೀವ್ರ ಹಲ್ಲೆಗೊಳಗಾಗಿದ್ದ ಲಾಯ್ಡ್ ನೆಹೆಮಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮೃತಪಟ್ಟಿದ್ದಾರೆ. ಗುರುವಾರ ಅವರ ಅಂತ್ಯಕ್ರಿಯೆ ನಡೆದಿದೆ. ಜಗಳದಲ್ಲಿ ಅನಿರುದ್ಧ್ ಕೂಡ ಗಾಯಗೊಂಡಿದ್ದಾರೆ ಮತ್ತು ಅವರ ಬೆರಳನ್ನು ಲಾಯ್ಡ್ ಕಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Associate held for murder over loud music in bengaluru: Two sons of Odisha DSP involved

ನಮ್ಮ ಬಗ್ಗೆ ಸುಳ್ಳು ಸುದ್ದಿ- ಒಡಿಶಾ ಡಿಎಸ್ಪಿ ಸಮರ್ಥನೆ

ಆದರೆ ಡಿಎಸ್ಪಿ ಕೇಶಬ್ ಕುಮಾರ್ ಸಾಮಂತರಾಯರ ನನ್ನ ಮಕ್ಕಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಡಿಎಸ್ಪಿ ಕೇಶಬ್ ಕುಮಾರ್ ಸಾಮಂತ್ರಾಯ್ ಅವರು ತಮ್ಮ ಪುತ್ರರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು TOI ಗೆ ತಿಳಿಸಿದ್ದಾರೆ. "ವಾಸ್ತವವಾಗಿ, ಲಾಯ್ಡ್ ಅವರ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿ ಸಂಗೀತದ ವಿಷಯವಾಗಿ ಜಗಳವನ್ನು ಪ್ರಾರಂಭಿಸಿದರು. ಅವರು ಅನಿರುದ್ಧ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಮೊದಲು ನನ್ನ ಮಕ್ಕಳಿಗೆ ಹೊಡೆದರು. ನನ್ನ ಮಕ್ಕಳು ಅವರ ಮೇಲೆ ಮೊದಲು ಕೈ ಮಾಡಿಲ್ಲ. ನಮ್ಮ ಮಕ್ಕಳು ಅವರ ವಿರುದ್ಧ ಪ್ರತಿ-ದೂರು ದಾಖಲಿಸಿದ್ದಾರೆ. ಎಚ್‌ಎಎಲ್‌ ಪೊಲೀಸ್‌ ಠಾಣೆ ಹಾಗೂ ಎಫ್‌ಐಆರ್‌ ದಾಖಲಿಸಲಾಗಿದೆ'' ಎಂದರು.

ಎರಡು ದಿನಗಳ ಹಿಂದೆ ಸಂಭವಿಸಿದ ಘಟನೆಗೂ ಲಾಯ್ಡ್‌ನ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಶಬ್ ಕುಮಾರ್ ಸಾಮಂತ್ರಾಯ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+