ಬನ್ನೇರುಘಟ್ಟ ರಸ್ತೆಯಲ್ಲಿ ರೌಡಿ ಶೀಟರ್ ಮೇಲೆ ಫೈರಿಂಗ್
ಬೆಂಗಳೂರು, ಮೇ 18: ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಆತನನ್ನು ಬಂಧಿಸಿದ ಘಟನೆ ಬನ್ನೇರುಘಟ್ಟ ಕ್ರಿಶ್ಚಿಯನ್ ಸೆರಮನಿ ಬಳಿ ನಡೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ವಿನೋದ್ ಅಲಿಯಾಸ್ ಪಚ್ಚೆ ಅಶೋಕನಗರ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿದ್ದ. ದರೋಡೆ, ಕೊಲೆಯತ್ನದಂಥ ಹಲವು ಪ್ರಕರಣಗಳು ಆತ ವಿರುದ್ಧ ದಾಖಲಾಗಿದ್ದವು. ಈತನಿರುವ ಸುಳಿವು ಪಡೆದು ಪೊಲೀಸರು ಬಂದಿಲು ಹೋದಾಗ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ.

ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.ಅಶೋಕ ನಗರ ಇನ್ಸ್ಪೆಕ್ಟರ್ ಶಶಿಧರ್ ಆರೋಪಿಯ ಬಲಗಾಲಿಗೆ ಒಂದು ಸುತ್ತು ಗುಂಡು ಹಾರಿಸಿದ್ದು ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications