ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಗರಿಕರಿಂದ ತೆರಿಗೆ ಕಟ್ಟಿಸಿಕೊಳ್ಳಲು ಬಿಬಿಎಂಪಿಗೆ ಪುರುಸೊತ್ತಿಲ್ಲ!

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಬಿಬಿಎಂಪಿಗೆ ಏಪ್ರಿಲ್ ಅಂತ್ಯದೊಳಗೆ ತೆರಿಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ದೊರೆಯಲಿದೆ ಎನ್ನುವ ಮಾತೇನೋ ಸತ್ಯ. ಆದರೆ ಏಪ್ರಿಲ್ ತಿಂಗಳು ಮುಗಿಯಲು ಕೇವಲ 2 ವಾರಗಳು ಮಾತ್ರ ಬಾಕಿ ಇದೆ.

ತೆರಿಗೆ ಪಾವತಿ ಮಾಡಲು ನಾಗರಿಕರು ಸಿದ್ಧರಿದ್ದಾರೆ, ಆದರೆ ತೆರಿಗೆ ಕಟ್ಟಿಸಿಕೊಳ್ಳುವ ಬಿಬಿಎಂಪಿ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ತೆರಿಗೆ ಪಾವತಿಸಲು ಬಿಬಿಎಂಪಿ ಕಚೇರಿಗೆ ತೆರಳಿದರೆ ಕೆಲವು ಕಚೇರಿಗಳು ಬಾಗಿಲು ಮುಚ್ಚಿವೆ, ಇನ್ನು ಕೆಲವು ಕಚೇರಿಗಳಲ್ಲಿ ಸಿಬ್ಬಂದಿಯ ಕೊರತೆ ಎದುರಾಗಿದೆ.

ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯಿರಿ ಏಪ್ರಿಲ್ ಅಂತ್ಯದೊಳಗೆ ಆಸ್ತಿ ತೆರಿಗೆ ಪಾವತಿಸಿ ರಿಯಾಯಿತಿ ಪಡೆಯಿರಿ

ಏಪ್ರಿಲ್ ಅಂತ್ಯದೊಳಗೆ ತೆರಿಗೆ ಕಟ್ಟಲಾಗದಿದ್ದರೆ ಶೆ.5ರಷ್ಟು ರಿಯಾಯಿತಿ ಕಳೆದುಕೊಳ್ಳುತ್ತೇವೆ ಎನ್ನುವ ಬೇಸರದಲ್ಲಿ ಜನರಿದ್ದಾರೆ. ಇನ್ನು ಬ್ಯಾಂಕ್ ಗಳಿಗೆ ತೆರಳಿದರೆ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಗಳಿಗೆ ತೆರಳಿ ಕೇಳೊದರೆ ನಮ್ಮ ಶಾಖೆಯಲ್ಲಿ ತೆರಿಗೆ ಕಟ್ಟಿಸಿಕೊಳ್ಳುತ್ತಿಲ್ಲ ಮತ್ತೊಂದು ಶಾಖೆಗೆ ಹೋಗಿ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ ಎಂದು ಕೆಲ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

As deadline nears, closed offices and slow servers irk property tax payers

ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಆನ್ ಲೈನ್ ಮೂಲಕ ಪಾವತಿ ಮಾಡುವುದಾದರೆ ಸರ್ವರ್ ಡೌನ್ ಇದ್ದು ದಿನಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಂಡಹಳ್ಳಿ ಬಳಿ ಇರುವ ಬಿಬಿಎಂಪಿ ಕಚೇರಿಯು ಕಳೆದ ಎರಡು ದಿನಗಳಿಂದ ಮುಚ್ಚಲಾಗಿದೆ. ಸಾಕಷ್ಟು ಜನರು ಎರಡು ದಿನ ಹೋಗಿ ಹಿಂದಿರುಗಿದ್ದಾರೆ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?

ಈ ಹಣಕಾಸು ವರ್ಷದಲ್ಲಿ ಏ.1ರಿಂದ ಎರಡು ದಿನಗಳಲ್ಲಿ 3600 ಮಂದಿ ಆನ್‌ಲೈನ್ ಮೂಲಕ 2.80 ಕೋಟಿ ರೂ. ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಒಟ್ಟು 1200 ಮಂದಿ ಚಲನ್ ಸೃಜಿಸಿಕೊಂಡಿದ್ದಾರೆ. ಆನ್‌ಲೈನ್ ಮೂಲಕ ತೆರಿಗೆ ಕಟ್ಟುವವರಿಗೆ 5 ಸಾವಿರ ರೂ.ವರೆಗೆ ಹೆಚ್ಚುವರಿ ಶುಲ್ಕ ವಿರುವುದಿಲ್ಲ. ಅದಕ್ಕಿಂತ ಮೇಲ್ಪಟ್ಟ ತೆರಿಗೆಗೆ ಶೇ.0.9ರಷ್ಟು ಶುಲ್ಕವನ್ನು ಬ್ಯಾಂಕ್‌ಗಳು ವಿಧಿಸುತ್ತದೆ.

English summary
With hardly two weeks left to avail the 5% rebate on property tax, multiple hurdles have ticked off citizens. Many BBMP ward offices which generate challans are either shut or not accepting payments due to staff crunch as most officials are on poll duty. Many banks, which should have separate counters for tax payments, are not adhering to guidelines and shooing away taxpayers citing server problems or other glitches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X