ಮೆಟ್ರೋ ಮಾರ್ಗ: ಬನ್ನೇರುಘಟ್ಟ ರಸ್ತೆಯಲ್ಲಿ 185 ಮರಗಳ ಸ್ಥಳಾಂತರ

ಬೆಂಗಳೂರು, ಜನವರಿ 09: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ಕಾಮಗಾರಿ ಸಲುವಾಗಿ ಬಲಿಯಾಗಬೇಕಾಗಿದ್ದ ಬನ್ನೇರುಘಟ್ಟ ರಸ್ತೆ ಪಕ್ಕದ185ಮರಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಈ ಮರಗಳ ಸ್ಥಳಾಂತರ ಕಾಮರ್ಯವೂ ಆರಂಭವಾಗಿದೆ. ಈ ಮರಗಳ ಪೈಕಿ 51 ಮರಗಳನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆವರಣಕ್ಕೆ ಹಾಗೂ ಉಳಿದ 134 ಮರಗಳನ್ನು ಬಿಬಿಎಂಪಿಯ ಶಾಂತಿನಿಕೇತನ ಉದ್ಯಾನಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಮೆಟ್ರೋ ನಿಗಮವಹಿಸಿಕೊಂಡಿದೆ.

ಕಾಮಗಾರಿಗಾಗಿ ಅವುಗಳನ್ನು ಕಡಿಯುವುದು ಅಥವಾ ಸ್ಥಳಾಂತರ ಮಾಡುವುದು ಅನಿವಾರ್ಯ. ಮರಗಳ ಹನನಕ್ಕೆ ಸ್ಥಳೀಯರೂ ವಿರೋಧಿಸಿದ್ದರು. ಹೀಗಾಗಿ, ಸ್ಥಳಾಂತರಕ್ಕೆ ನಿಗಮದ ಅಧಿಕಾರಿಗಳು ಮುಂದಾಗಿದ್ದಾರೆ.
ಪ್ರತಿ ಮರದ ಸ್ಥಳಾಂತರಕ್ಕೆ10,750 ರೂ.ನಂತೆ 185 ಮರಗಳ ಸ್ಥಳಾಂತರಕ್ಕೆ 19,88,750 ಖರ್ಚಾಗಲಿದೆ. ಈಗಾಗಲೇ ಆ ಮರಗಳ ರೆಂಬೆ ಕೊಂಬೆಗಳನ್ನು ಕಡಿಯುವ ಕೆಲಸ ಆರಂಭವಾಗಿದೆ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯುಎ ವಸಂತರಾವ್ ತಿಳಿಸಿದ್ದಾರೆ.

Around 185 trees will shift for Metro phase-2

ಟ್ವಿಟರ್ ನಲ್ಲಿ ಮೆಚ್ಚುಗೆ: ಬನ್ನೇರುಘಟ್ಟ ರಸ್ತೆ ಮಾರ್ಗದಲ್ಲಿ ಮೆಟ್ರೊ ಕಾಮಗಾರಿಗಾಗಿ ಬಲಿಯಾಗಬೇಕಿದ್ದ ಮರಗಳನ್ನು ಸ್ಥಳಾಂತರ ಮಾಡುವುದಾಗಿ ನಿಗಮವು ಟ್ವಿಟರ್ ನಲ್ಲಿ ತಿಳಿಸಿದೆ. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+