ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಆಟೋ ಬ್ಲಾಸ್ಟ್ ಪ್ರಕರಣ: ಬೆಂಗಳೂರಲ್ಲಿ ಶಂಕಿತನ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 21: ಮಂಗಳೂರಿನ ನಾಗುರಿ ಬಳಿ ಆಟೋ ರಿಕ್ಷಾ ಬ್ಲಾಸ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಶಂಕಿತ ಆರೋಪಿಯೊಬ್ಬನ ಬಂಧನವಾಗಿದೆ.

ಮಹಮ್ಮದ್ ರುಹುಲ್ಲಾ ಎಂಬಾತನೇ ಬಂಧಿತ ವ್ಯಕ್ತಿ. ಈತ ಬೆಂಗಳೂರಿನ ಕೆ.ಜೆ.ಹಳ್ಳಿಯರುವ ಮಾಹಿತಿ ಕಲೆ ಹಾಕಿದ ಮೈಸೂರು ಪೊಲೀಸರು ಭಾನುವಾರವೇ ಬೆಂಗಳೂರಿಗೆ ಆಗಮಿಸಿದ್ದರು. ಯೋಜನೆಯಂತೆ ಪ್ರಕರಣದ ಶಂಕಿತ ಮಹಮ್ಮದ್ ರುಹುಲ್ಲಾ ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ವಿಚಾರಣೆ ಒಳಪಡಿಸಿರುವ ಪೊಲೀಸರಿಗೆ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಶಾರೀಕ್ ಬಗ್ಗೆಯೂ ಆರೋಪಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಆಟೋ ಸ್ಫೋಟ ಪ್ರಕರಣ: ಉಗ್ರ ಸಂಘಟನೆಗಳೊಂದಿಗಿನ ಸಂಬಂಧದ ಬಗ್ಗೆ ತನಿಖೆ- ಸುಧಾಕರ್ಮಂಗಳೂರು ಆಟೋ ಸ್ಫೋಟ ಪ್ರಕರಣ: ಉಗ್ರ ಸಂಘಟನೆಗಳೊಂದಿಗಿನ ಸಂಬಂಧದ ಬಗ್ಗೆ ತನಿಖೆ- ಸುಧಾಕರ್

ಈ ಹಿಂದೆ ಬೆಂಗಳೂರಿನ ಕೆ.ಜಿ.ಹಳ್ಳಿಗೆ ಆಗಮಿಸಿದ್ದ ಬಂಧಿತ ಮಹಮ್ಮದ್ ಆಟೋ ಸ್ಪೋಟಕ್ಕೆ ಕಾರಣವಾಗಿರುವ ತೀರ್ಥಹಳ್ಳಿ ನಿವಾಸಿ ಶಾರೀಕ್ ಜೊತೆ ಭೇಟಿಯಾಗಿದ್ದ. ಅಲ್ಲಿಂದ ಈ ಇಬ್ಬರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಘಟನೆ ನಡೆದ ನಂತರ ರುಹುಲ್ಲಾ ಬೆಂಗಳೂರಿನಲ್ಲಿದ್ದರ ಬಗ್ಗೆ ಕೆ.ಜಿ.ಹಳ್ಳಿಯಲ್ಲಿರುವ ಬಗ್ಗೆ ನಗರದ ಪೂರ್ವ ವಿಭಾಗದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿ ಸದ್ಯ ಮಂಗಳೂರಿಗೆ ಕರೆದೊಯ್ಯಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

Another suspect arrested in Bengaluru in Mangaluru auto blast case

ಇನ್ನೂ ಪ್ರಕರಣ ನಡೆದ ಬಳಿಕ ಶಾರೀಕ್ ಹೆಸರು ಕೇಳಿ ಬಂದಿತ್ತು. ಆತನ ಬಗ್ಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ತಿಳಿದು ಬಂದಿದೆ. ಹೀಗಾಗಿ ಪ್ರಕರಣದಲ್ಲಿ ಆತನ ಹೆಸರನ್ನು ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೇ ತೀರ್ಥಹಳ್ಳಿ ಆತನ ಮನೆಗೂ ಪೊಲೀಸರು ದೌಡಾಯಿಸಿ ಹಲವರ ವಿಚಾರಣೆ ನಡೆಸಿ ತೆರಳಿದ್ದರು.

Another suspect arrested in Bengaluru in Mangaluru auto blast case

ಆಟೋ ಬ್ಲಾಸ್ಟ್ ಪ್ರಕರಣ ಸಂಬಂಧ ಭಾನುವಾರ ಮೈಸೂರಿನಲ್ಲಿ ಮಂಗಳೂರು ಹಾಗೂ ಮೈಸೂರು ಪೊಲೀಸರು ಲೋಕನಾಯಕ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ನಂತರ ಅಲ್ಲಿದ್ದ ಇಬ್ಬರು ಶಂಕಿತರನ್ನು ಬಂಧಿಸಿದ್ದರು. ಮೈಸೂರು ಪೊಲೀಸರು ಸುಳಿವಿನ ಬೆನ್ನುಹತ್ತಿ ಬೆಂಗಳೂರಿಗೆ ಬಂದು, ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದಾರೆ.

English summary
Mangaluru Auto Blast Case: Another suspect arrested in Bengaluru by Mysuru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X