ಸೆಪ್ಟೆಂಬರ್ 22 ರಂದು ಅನಂತಕುಮಾರ್ ಪ್ರತಿಷ್ಠಾನ ಪ್ರಾರಂಭ
ಬೆಂಗಳೂರು, ಸೆ. 20: ಕೇಂದ್ರದ ಮಾಜಿ ಸಚಿವ, ದಿವಂಗತ ಎಚ್. ಎನ್ ಅನಂತಕುಮಾರ್ ಅವರ ಜನ್ಮದಿನ ಸೆಪ್ಟೆಂಬರ್ 22 ರ ಭಾನುವಾರದಂದು ಹೊಸ ಪ್ರತಿಷ್ಠಾನ ಆರಂಭಿಸಲಾಗುತ್ತಿದೆ." 'ದೇಶಮೊದಲು' ಎಂಬ ಧ್ಯೇಯವನ್ನೇ ಕಣ್ಣಮುಂದಿಟ್ಟುಕೊಂಡು ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜಕಾರ್ಯಕ್ಕೆ ಧುಮುಕಿದ ಅನಂತಕುಮಾರ್ ನಾಲ್ಕು ದಶಕಗಳಷ್ಟು ಕಾಲ ಅಹರ್ನಿಶಿ ದುಡಿದವರು. ತಮಗೆ ಯಾವುದೇ ಅಧಿಕಾರ ಸಿಗಲಿ, ಅದನ್ನು ದೇಶಸೇವೆ ಮತ್ತು ಸಮಾಜಸೇವೆಯ ಸದವಕಾಶವೆಂದು ತಿಳಿದು ಕೆಲಸ ಮಾಡಿದವರು. ಅವರ ಆಶಯಕ್ಕೆ ತಕ್ಕಂತೆ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ " ಎಂದು ಅನಂತಕುಮಾರ್ ಪತ್ನಿ ತೇಜಸ್ವಿನಿ ಹೇಳಿದರು.
ಅನಂತಕುಮಾರ್ ಅವರು ಕಂಡಿದ್ದ ಕನಸುಗಳು ಅಪಾರ. ಅವುಗಳು ನನಸಾಗುವ ಹಾದಿಯಲ್ಲಿರುವಾಗಲೇ ಅವರ ಅನಿರೀಕ್ಷಿತ ಕಣ್ಮರೆ ದುರ್ದೈವದ ಸಂಗತಿ. ಆದರೆ, ಅವರ ಶಾರೀರಿಕ ಕಣ್ಮರೆಯ ಅನಂತರವೂ ಅವರು ನಮ್ಮ ನಡುವೆ ಶಾಶ್ವತವಾಗಿ ಇರುವಂತೆ ಮಾಡಲು ಅವರು ಕಂಡ ಕನಸುಗಳನ್ನು ನನಸಾಗಿಸುವುದೊಂದೇ ಮಾರ್ಗ. ಅಂತಹ ಸಾರ್ಥಕ ಹಾದಿಯಲ್ಲಿ ಸಾಗಲು ನಾಡಿನ ಹಲವಾರು ಹಿರಿಯರು ಮತ್ತು ಹಿತೈಷಿಗಳ ಅಪೇಕ್ಷೆಯಂತೆ ಮಾಜಿ ವಿಧಾನ ಪರಿಷತ್ ಸದಸ್ಯರೂ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಆದ ಪ್ರೊ. ಪಿ.ವಿ.ಕೃಷ್ಣಭಟ್ ಅವರ ನೇತೃತ್ವದಲ್ಲಿ ಅನಂತಕುಮಾರ್ ಹೆಸರಿನಲ್ಲಿ ಟ್ರಸ್ಟ್ ವೊಂದನ್ನು ಸ್ಥಾಪಿಸಲು ನಿರ್ಣಯಿಸಲಾಗಿದ್ದು ಅದರ ಉದ್ಘಾಟನೆಯು ಅವರ ಹುಟ್ಟುಹಬ್ಬದಂದೇ ನೆರವೇರಲಿದೆ.

ಪ್ರತಿಭಾವಂತ ಮಕ್ಕಳಿಗೆ ಸನ್ಮಾನ
ಪ್ರತಿಭಾವಂತ ಬಡ ಮಕ್ಕಳೆಂದರೆ ಅನಂತಕುಮಾರ್ ಅವರಿಗೆ ಎಲ್ಲಿಲ್ಲದ ಕಾಳಜಿ. ಪ್ರತಿವರ್ಷವೂ ಅವರ ಹುಟ್ಟುಹಬ್ಬದಂದು ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಬಿಸಿಯೂಟ ಸರಬರಾಜಿನ ಶಾಲೆಯ ಮಕ್ಕಳಿಗೆ ಸನ್ಮಾನಿಸಿ ಸಂಭ್ರಮಿಸುವುದು ಅವರು ದಶಕಗಳಿಂದ ನಡೆಸಿಕೊಂಡು ಬಂದಿರುವ ಪದ್ಧತಿ. ಪ್ರಸ್ತುತ ವರ್ಷವೂ ಅನಂತಕುಮಾರ್ ಅವರ ಜನ್ಮದಿನದಂದು ಅಂತಹ ಮಕ್ಕಳನ್ನು ಗುರುತಿಸಿ ಸನ್ಮಾನಿಸಬೇಕೆಂದು ನಿರ್ಧರಿಸಲಾಗಿದೆ.
* ಸಂಜೆ 3 ಗಂಟೆಗೆ ಪ್ರತಿಭಾ ಪುರಸ್ಕಾರ.
* ಸಂಜೆ 5 ಗಂಟೆಗೆ ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮ
ಸೆಪ್ಟೆಂಬರ್ 22 ರ ಭಾನುವಾರ ಬೆಂಗಳೂರಿನ ಜಯನಗರದ ಎನ್‍ಎಂಕೆಆರ್ ವಿ ಕಾಲೇಜಿನ ಮಂಗಳ ಸಭಾಮಂಟಪದಲ್ಲಿ ಸಂಜೆ 3 ಗಂಟೆಗೆ ಅನಂತಕುಮಾರ್ ಅವರ ಜನ್ಮದಿನದ ಪ್ರಯುಕ್ತ ಮೇಲ್ಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ಪರಿಷತ್ತಿನಲ್ಲಿ ಕೆಲಸ ಮಾಡುತ್ತಿದ್ದ ಕಾಲದಿಂದಲೂ ಅನಂತಕುಮಾರ್ ಅವರಿಗೆ ಆತ್ಮೀಯರಾಗಿದ್ದ ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ, ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಇತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ












Click it and Unblock the Notifications