ಕರ್ನಾಟಕಕ್ಕೆ ಅಮುಲ್ ಪ್ರವೇಶದ ಗದ್ದಲ: ನಂದಿನಿ ಐಸ್ ಕ್ರೀಂ ಸವಿದ ರಾಹುಲ್ ಗಾಂಧಿ
ಕೋಲಾರ ಏಪ್ರಿಲ್ 17: ಕರ್ನಾಟಕಕ್ಕೆ ಅಮೂಲ್ ಪ್ರವೇಶದಿಂದಾಗಿ ರಾಜಕೀಯ ಗದ್ದಲ ಭುಗಿಲೆದ್ದಿದೆ. ಈ ನಡುವೆ ಭಾನುವಾರ ಬೆಂಗಳೂರಿನ ಜೆಪಿ ನಗರದಲ್ಲಿರುವ ನಂದಾನಿ ಹಾಲಿನ ಪಾರ್ಲರ್‌ನಲ್ಲಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಐಸ್ ಕ್ರೀಂ ಸವಿಯುತ್ತಿರುವುದು ಕಂಡುಬಂದಿದೆ. ಮಾಜಿ ಸಂಸದರು, ರಾಜ್ಯ ಪಕ್ಷದ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಈ ವೇಳೆ ನಂದಿನಿ ಅಂಗಡಿಯಲ್ಲಿ ಐಸ್ ಕ್ರೀಂ ಸವಿದಿದ್ದಾರೆ.
2019ರ ನಂತರ ಮೊದಲ ಬಾರಿಗೆ ಕೋಲಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡದ್ದರು. ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿನ್ನದ ನಾಡು ಕೋಲಾರದಲ್ಲಿ ಭಾನುವಾರ ಜೈ ಭಾರತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶದ ಬಳಿಕ ಬೆಂಗಳೂರು ತಲುಪಿದ ರಾಹುಲ್ ಗಾಂಧಿ ಅವರು ಸಂಜೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ನಂದಿನಿ ಐಸ್ ಕ್ರೀಂ ಸವಿದರು.

ರಾಹುಲ್ ಗಾಂಧಿ ಅವರು ಈ ಫೋಟೋಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡು, "ಕರ್ನಾಟಕದ ಹೆಮ್ಮೆ ನಂದಿನಿ ಅತ್ಯುತ್ತಮ!" ಎಂದು ಬರೆದಿದ್ದಾರೆ.
#KarnatakaAssemblyElections | Amid row over the entry of Amul in the state, Congress leader Rahul Gandhi, state party chief DK Shivakumar and general secretary KC Venugopal visited Nandani Milk parlour in JP Nagar, Bengaluru. pic.twitter.com/JzfJrTP5uf
— ANI (@ANI) April 16, 2023
ಈ ಹಿಂದೆ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರದ ವೇಳೆ ನಂದಿನಿ ಸ್ಟೋರ್‌ಗೆ ಭೇಟಿ ನೀಡಿ ಹಾಲಿನ ಉತ್ಪನ್ನಗಳ ಖರೀದಿ ಮಾಡಿದ್ದರು. ಈ ಬ್ರ್ಯಾಂಡ್ ಕರ್ನಾಟಕದ ರೈತರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಅವರು ಹೇಳಿದರು.
"ಇಂದು ಹಾಸನದ ನಂದಿನಿ ಸ್ಟೋರ್‌ಗೆ ಭೇಟಿ ನೀಡಿ ಹಾಲಿನ ಉತ್ಪನ್ನಗಳನ್ನು ಖರೀದಿಸಿದೆ. ನಮ್ಮ ರೈತರ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ನಂದಿನಿ ಬ್ರಾಂಡ್ ಅನ್ನು ಬಿಜೆಪಿ ಸರ್ಕಾರ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಬಿಜೆಪಿ ಸರ್ಕಾರ ಇದನ್ನು ನೆನಪಿಟ್ಟುಕೊಳ್ಳಲಿ, ಕನ್ನಡಿಗರು ತಮ್ಮ ಸ್ವಾಭಿಮಾನವನ್ನು ಎಂದಿಗೂ ಮಾರಿಕೊಳ್ಳುವುದಿಲ್ಲ'' ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹೇಳಿದ್ದರು.

ಗುಜರಾತ್ ಮೂಲದ ಅಮುಲ್ ಶೀಘ್ರದಲ್ಲೇ ಬೆಂಗಳೂರಿನಲ್ಲಿ ತನ್ನ ಉತ್ಪನ್ನಗಳು ಲಭ್ಯವಾಗಲಿದೆ ಎಂದು ಘೋಷಿಸಿದ ನಂತರ ದಕ್ಷಿಣ ರಾಜ್ಯದಲ್ಲಿ ರಾಜಕೀಯ ಗದ್ದಲ ತೆರೆದುಕೊಂಡಿದೆ. ಇದು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧ ಪಕ್ಷದ ನಡುವಿನ ಮಾತಿನ ಸಮರಕ್ಕೆ ಕಾರಣವಾಯಿಗಿದೆ. ಗುಜರಾತ್ ಬ್ರ್ಯಾಂಡ್ ಅಮುಲ್ ರಾಜ್ಯದ ಮಾರುಕಟ್ಟೆಯನ್ನು ಪ್ರವೇಶಿಸಿದರೆ ನಂದಿನಿ ಬ್ರ್ಯಾಂಡ್ ಅಪಾಯಕ್ಕೆ ಒಳಗಾಗುತ್ತದೆ ಎಂದು ವಿರೋಧ ಹೇಳುತ್ತದೆ. ಆದರೆ ಈ ವಿಷಯದಿಂದ ಕಾಂಗ್ರೆಸ್ ಕೇವಲ ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕೇಸರಿ ಪಾಳಯ ಆರೋಪಿಸಿದೆ.
ಮಾತ್ರವಲ್ಲದೆ ಭಾನುವಾರ ಕೋಲಾರದಲ್ಲಿ ನಡೆದ ಜೈ ಭಾರತ್ ಸಮಾವೇಶದಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಮುಲ್ ವಿರುದ್ಧ ಆಕ್ರೋಶ ಹೊರಹಾಕಿದರು.

ಕರ್ನಾಟಕ ಮಿಲ್ಕ ಫಡರೇಷನ್ ಅನ್ನು ನುಂಗಲು ಬಿಜೆಪಿ ಅವರು ಮುಂದಾಗಿದ್ದಾರೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಬೆಂಗಳೂರು ಸೇರಿದಂತೆ ಬೇರೆ ಬೇರೆ ಪಟ್ಟಣಗಳಲ್ಲಿ ಉತ್ಪಾದನೆ ಮಾಡುವ ವ್ಯವಸ್ಥೆ ಇತ್ತು. ಲಕ್ಷಾಂತರ ರೈತರು ಹಾಲು ಉತ್ಪಾದನೆ ಮಾಡಿ ಅವರ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅಮಿತ್ ಶಾ ಸಹಕಾರಿ ಮಂತ್ರಿ ಆದ ಮೇಲೆ ಕೆಎಂಎಫ್ ಅನ್ನು ಅಮುಲ್ ಜೊತೆ ಮರ್ಜ್ ಮಾಡಲು ಪ್ರಯತ್ನ ಮಾಡಿದರು. ಈಗ ಅಮುಲ್ ಪ್ರಾಡಕ್ಟ್‌ಗಳನ್ನು ಕರ್ನಾಟಕದಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಬಂದು ನಂದಿನ ಪ್ರಾಡಕ್ಟ್ಗಳ ವಿರುದ್ಧ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಮಾವೇಶದಲ್ಲಿ ಸಿದ್ದರಾಮಯ್ಯ ಗುಡುಗಿದೆ.
ನಂದಿನ ಪ್ರಾಡಕ್ಟ್ಗಳು ಮಾರಾಟವಾಗುತ್ತಿಲ್ಲ ಎಂದು ಹೇಳುತ್ತಾ ಅಮುಲ್ ತರಲು ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಹಾಲಿನ ಉತ್ಪಾದನೆ 81 ಲಕ್ಷ ಲೀಟರ್‌ಗೆ ಇಳಿದೆ. ನಾನು ಕನ್ನಡಿಗರಲ್ಲಿ ಮನವಿ ಮಾಡುತ್ತೇನೆ. ಅಮುಲ್ ಪದಾರ್ಥಗಳನ್ನು ಖರೀದಿ ಮಾಡದೆ ನಂದಿನಿ ಹಾಲು ಮತ್ತು ಅದರ ಉತ್ಪಾದನೆಗಳನ್ನು ಮಾತ್ರ ಕೊಂಡುಕೊಳ್ಳುವ ಶಪತ ಮಾಡಬೇಕು. ಈ ಮೂಲಕ ಕೇಂದ್ರದ ಹುನ್ನಾರವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.












Click it and Unblock the Notifications