Namma Metro: 15000 ಸಸಿ ಬೆಳೆಸಲು ನಮ್ಮ ಮೆಟ್ರೋ ಸಜ್ಜು
ಬೆಂಗಳೂರು, ಮೇ 08: ಸಾರಿಗೆ ವಿಷಯದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಇದರಿಂದ ಹಸಿರು ಹೊದಿಕೆಯ ನಷ್ಟು ಉಂಟಾಗಿದೆ. ಸಾಧ್ಯವಾದಷ್ಟು ಇದನ್ನು ಸರಿಪಡಿಸಲು ಹಾಗೂ ತನ್ನ ಯೋಜನೆಗಾಗಿ ಮರಕ್ಕೆ ಕೊಡಲಿ ಹಾಕಿದ್ದ ನಮ್ಮ ಮೆಟ್ರೋ (Namma Metro) ಬರೋಬ್ಬರಿ 15000 ಸಸಿಗಳನ್ನು ನೆಡುವುದಾಗಿ ತಿಳಿಸಿದೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತನ್ನ ಮೆಟ್ರೋ 2ನೇ ಹಂತ ಯೋಜನೆಗಾಗಿ ಅನೇಕ ಮರಗಳನ್ನು ಧರೆಗುರುಳಿಸಿತ್ತು. ಇದಕ್ಕೆ ಪರ್ಯಾಯ ಪರಿಹಾರ ಮಾರ್ಗವಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮೂರು ಹಂತಗಳಲ್ಲಿ ಸಸಿ ನೆಟ್ಟು ಬೆಳೆಸಲು ಪ್ಲಾನ್ ಮಾಡಿದೆ.

ಒಂದೊಂದು ಹತ್ತದಲ್ಲಿ ಒಟ್ಟು 5000 ಸಸಿಗಳನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ನೆಡಲಿದೆ. ಈ ಸಸಿ ನೆಡುವ ಪೂರ್ತಿ ಯೋಜನೆಗೆ 76ಕೋಟಿ ರೂಪಾಯಿ ವ್ಯಯಿಸಲಿದೆ ಎಂದು 'ಕನ್ನಡಪ್ರಭ' ವರದಿ ಮಾಡಿದೆ. ಆದಷ್ಟು ಶೀಘ್ರವೇ ಸಸಿ ನೆಡುವ ಕಾರ್ಯಕ್ಕೆ BMRCL ಚಾಲನೆ ನೀಡಲಿದೆ.
ಮೊದಲ ಹಂತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾಬಾಸ್‌ಪೇಟೆ ಕೈಗಾರಿಕೆ ಪ್ರದೇಶ ಅಕ್ಕಪಕ್ಕ ಹಾಗೂ ಬೆಂಗಳೂರು ಸುತ್ತಮುತ್ತ ಐದು ಸಾವಿರ ಸಸಿ ನೆಡಲು ಯೋಜಿಸಿದೆ. ನಂತರ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಮತ್ತು ಮೂರನೇ ಹಂತದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ (KIADB) ಉದ್ಯಾನ, ಬಫರ್ ವಲಯ, ಸುತ್ತಮುತ್ತಲಿನ ಸರ್ಕಾರ ಜಾಗಗಳನ್ನು ಗುರುತಿಸಿ ಅಲ್ಲಿ ಸಸಿ ನೆಟ್ಟು ಪೋಷಿಸಲಾಗುವುದು.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆ 2 ಹಾಗೂ ಅದರ 2ಎ ಯೋಜನೆ ಕಾಮಗಾರಿಗಾಗಿ ಸಾವಿರಾರು ಮರಗಳಿಗೆ ಕೊಡಲಿ ಹಾಕಲಾಗಿತ್ತು. 1190 ಮರಗಳನ್ನು ಸ್ಥಳಾಂತರ ಮಾಡಲಾಗಿದ್ದು, ಈ ಪೈಕಿ ಮರಗಳನ್ನು ಕಡಿದಿದ್ದೇ ಹೆಚ್ಚು. ಒಂದೆರಡು ವಾರಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈ ವೇಳೆ ಸಸಿ ನೆಟ್ಟರೆ ಅನುಕೂಲವಾಗಲಿದೆ. ಈ ಸಂಬಂಧ ಕರೆದ ಟೆಂಡರ್‌ನಲ್ಲಿ ಪರಿಸರ ಬಗ್ಗೆ ಕಾಳಜಿ ಇರುವ ಕೆಲವು ಸಂಸ್ಥೆಗಳು ಪಾಲ್ಗೊಂಡಿವೆ.

ಈ ಸಂಸ್ಥೆಗಳೇ ಸೂಕ್ತ ವ್ಯವಸ್ಥೆಗಳ ಮೂಲಕ ಸ್ಥಳ ಗುರುತಿಸುವುದು, ಸಸಿ ನೆಡುವ ಕಾರ್ಯ ಮಾಡಲಿದ್ದಾರೆ. ಸದ್ಯ ವಿಸ್ತರಣೆಗೊಳ್ಳುತ್ತಿರುವ ನಮ್ಮ ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳಲ್ಲಿ ಕಾಮಗಾರಿ ಸಂಬಂಧ ಒಟ್ಟು 750 ಮರಗಳ ಕೊಂಬೆಗಳನ್ನು ಕತ್ತರಿಸಲು ಮೆಟ್ರೋ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ನಮ್ಮ ಮೆಟ್ರೋ ಕಡಿದ ವರ್ಷ-ಮರಗಳ ಸಂಖ್ಯೆ
* 2021-2023 ರ ಅವಧಿ- 3,628 ಮರಗಳಿಗೆ ಕೊಡಲಿ ಬಿದ್ದಿದೆ.
* 2021-2022 ರಲ್ಲಿ 856 ಮರಗಳು
* ಮೆಟ್ರೋ ಯೋಜನೆ ಹಂತ -2 ಮತ್ತು ಹಂತ 2 'ಎ' ಯೋಜನೆಗೆ 2,461 ಮರಗಳಿಗೆ ಕತ್ತರಿ
* ಹಾಲಿ ಮೆಟ್ರೋ ಮಾರ್ಗಗಳಿಗೆಗಾಗಿ 750 ಮರ ಕೊಂಬೆಗಳಿಗೆ ಕೊಡಲಿ
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications