ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ತೆರಿಗೆ ವಿನಾಯಿತಿಗೆ ಅಮೆಜಾನ್ ಕಾಯಬೇಕು

By Kiran B Hegde
|
Google Oneindia Kannada News

ಬೆಂಗಳೂರು, ಡಿ. 11: ಅಮೆರಿಕ ಮೂಲದ ಆನ್ ಲೈನ್ ಶಾಪಿಂಗ್ ದೈತ್ಯ ಅಮೆಜಾನ್ ಕರ್ನಾಟಕದಲ್ಲಿ ನೇರವಾಗಿ ಬಿಸಿನೆಸ್ ಮಾಡಲು ಇನ್ನೂ ಕಾಯಬೇಕಾಗುತ್ತದೆ. ಏಕೆಂದರೆ ಕರ್ನಾಟಕ ಸರ್ಕಾರವು ಕರ್ನಾಟಕ ಮೌಲ್ಯಾಧಾರಿತ ತೆರಿಗೆ ಕಾಯ್ದೆ, 2003ರ ತಿದ್ದುಪಡಿಗೆ ಆತುರ ತೋರುತ್ತಿಲ್ಲ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರದ ಹಿರಿಯ ಅಧಿಕಾರಿಯೋರ್ವರು, "ಪ್ರಸ್ತುತ ಅಮೆಜಾನ್ ಕಂಪನಿಯು ಆನ್ ಲೈನ್ ವ್ಯವಹಾರಕ್ಕೆ ವ್ಯಾಟ್ ತೆರಿಗೆ ಪಾವತಿಸುತ್ತಿಲ್ಲ. ತಾನು ನೇರವಾಗಿ ವ್ಯವಹರಿಸುತ್ತಿಲ್ಲ. ಆದ್ದರಿಂದ ತನ್ನ ವಿತರಕರೇ ವ್ಯಾಟ್ ತೆರಿಗೆ ಪಾವತಿಸಬೇಕೆಂದು ಅಮೆಜಾನ್ ವಾದಿಸುತ್ತಿದೆ. [ಆನ್ ಲೈನ್ ಶಾಪಿಂಗ್ ನಲ್ಲಿ ರಿಯಾಯಿತಿ]

ಹಣಕಾಸು ಮತ್ತು ವಾಣಿಜ್ಯಿಕ ತೆರಿಗೆ ಇಲಾಖೆಯು ಮುಖ್ಯಮಂತ್ರಿ ಕಚೇರಿಯಿಂದ ನಿರ್ದೇಶನಕ್ಕಾಗಿ ಕಾಯುತ್ತಿದೆ. ಮುಖ್ಯಮಂತ್ರಿಗಳು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಅವರ ಅಭಿಪ್ರಾಯ ಪಡೆದ ನಂತರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

amazon

2015ರಲ್ಲಿ ಕಾಯ್ದೆಗೆ ತಿದ್ದುಪಡಿ: ಈ ಮಧ್ಯೆ ರಾಜ್ಯ ಸರ್ಕಾರವು ಕರ್ನಾಟಕ ಮೌಲ್ಯಾಧಾರಿತ ತೆರಿಗೆ ಕಾಯಿದೆಯಲ್ಲಿ ತಿದ್ದುಪಡಿ ತರಲು ಯೋಚಿಸುತ್ತಿದೆ. ಆದರೆ, ತಿದ್ದುಪಡಿಯನ್ನು 2015ರಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತರುವ ಉದ್ದೇಶವಿದೆ. [ಆನ್ ಲೈನ್ ಶಾಪಿಂಗ್ ವಂಚಕರ ಬಂಧನ]

ಪ್ರಸ್ತುತ ಅಮೆಜಾನ್ ವ್ಯವಹಾರವು ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ 2003ರ ಸೆಕ್ಷನ್ 8 ಹಾಗೂ ಸೆಕ್ಷನ್ 2 (12)ರ ಅಡಿ ಬರುತ್ತದೆ ಎಂದು ತೆರಿಗೆ ಇಲಾಖೆಯು ವಾದಿಸುತ್ತಿದೆ. [ಫ್ಲಿಪ್ ಕಾರ್ಟ್ ಗೆ ಅದ್ಭುತ ಪ್ರತಿಕ್ರಿಯೆ]

ಈಗಿನ ಕಾಯ್ದೆ ಏನು ಹೇಳುವುದೇನು?: ಸೆಕ್ಷನ್ 8ರ ಪ್ರಕಾರ ಕರ್ನಾಟಕದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಕಂಪನಿಯೊಂದರ ಉತ್ಪನ್ನವನ್ನು ದಲ್ಲಾಳಿ ಶುಲ್ಕದೊಂದಿಗೆ ಖರೀದಿಸಿದರೆ ಅಥವಾ ಮಾರಿದರೆ ಆತ ತೆರಿಗೆ ಪಾವತಿಸಬೇಕಾಗುತ್ತದೆ. ಸೆಕ್ಷನ್ 2 (12)ರ ಪ್ರಕಾರ ಖರೀದಿ, ಮಾರಾಟ, ಪೂರೈಕೆ ಅಥವಾ ವಿತರಣೆ ವ್ಯವಹಾರ ವ್ಯಕ್ತಿಯು ನೇರವಾಗಿ, ನಗದು ಹಣಕ್ಕಾಗಿ, ಇತರ ಹಣ ಪಾವತಿ ಅಥವಾ ದಲ್ಲಾಳಿ ಶುಲ್ಕವನ್ನು ಪಡೆಯುವ ವ್ಯಕ್ತಿಯನ್ನು ವಿತರಕ ಎಂದು ಕರೆಯಲಾಗುತ್ತದೆ. [ಆನ್ ಲೈನ್ ಶಾಪಿಂಗ್ ಎಂಬ ಮೋಹ, ದಾಹ]

ಆದ್ದರಿಂದ ಈ ಗೊಂದಲವನ್ನು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರವು ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆಯಲ್ಲಿ ಸಾಮಾನ್ಯ ತಿದ್ದುಪಡಿ ತರಬೇಕಾಗುತ್ತದೆ.

English summary
Karnataka is expected to go slow in amending the Karnataka Value Added Tax Act, 2003 provisions. Therefore e-commerce major Amazon should wait for tax relief to do business in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X