• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಉದ್ಯಮಿಗಳ ಆರ್ಥಿಕ ಸ್ವಾವಲಂಬನೆಗೆ ಭಾರತ, ಅಮೆರಿಕ ಸಹಭಾಗಿತ್ವ

|
Google Oneindia Kannada News

ಬೆಂಗಳೂರು, ಜುಲೈ 08; ತಮಿಳುನಾಡು, ಕೇರಳ ಮತ್ತು ಕರ್ನಾಟಕದ 18 ಮಹಿಳಾ ಉದ್ಯಮಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಚೆನ್ನೈನ ಅಮೆರಿಕ ರಾಯಭಾರ ಕಚೇರಿ ಮತ್ತು ಅಮಾನಿ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಿತು.

ಮೂರು ರಾಜ್ಯಗಳ ವಿವಿಧ ನಗರಗಳ ಉದ್ಯಮಿಗಳು 'Leadership for Growth Program-Impact Showcase' ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಚಾರಗಳನ್ನು ಹಂಚಿಕೊಂಡರು. ಅಮೆರಿಕ ಮೂಲಕ ಎನ್‌ಜಿಓ ಅಮಾನಿ ಇನ್‌ಸ್ಟಿಟ್ಯೂಟ್‌ ಈ ಕಾರ್ಯಾಗಾರ ಆಯೋಜಿಸಿತ್ತು.

ಬೆಂಗಳೂರಿನಲ್ಲಿಯೇ ಮುಖ್ಯ ಕಚೇರಿ ಹೊಂದಿರುವ ಅಮಾನಿ ಇನ್‌ಸ್ಟಿಟ್ಯೂಟ್‌ ಮಹಿಳಾ ಉದ್ಯಮಿಗಳಲ್ಲಿ ನಾಯಕತ್ವ ಗುಣಬೆಳೆಸಲು ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ನಡೆಸಿತು.

ಸ್ವಯಂ ಬೆಳವಣಿಗೆ, ತಂಡದ ಅಭಿವೃದ್ಧಿ ಮತ್ತು ಉದ್ಯಮ ಅಭಿವೃದ್ಧಿ ಎಂಬ ಅಂಶಗಳು ಕಾರ್ಯಾಗಾರದ ಪ್ರಮುಖ ವಿಷಯವಾಗಿದ್ದವು. 5 ತಿಂಗಳಿನಿಂದ ಉದ್ಯಮಿಗಳಿಗೆ ವಿವಿಧ ಚಟುವಟಿಕೆ ಮೂಲಕ ತರಬೇತಿ ನೀಡಲಾಗುತ್ತಿತ್ತು. ಅಂತಿಮ ಕಾರ್ಯಕ್ರಮ ಜೂನ್ 29ರಂದು ನಡೆಯಿತು.

ವಿಶ್ವದಲ್ಲೇ ವಾಣಿಜ್ಯ ಉದ್ಯಮದಲ್ಲಿ ಮಹಿಳೆಯರಿಗೆ ಸೂಕ್ತಮಾನ ಸಿಗುವಂತೆ ಮಾಡಲು ಶ್ರಮಿಸುತ್ತಿರುವ ಈ ಯೋಜನೆಗೆ ಅಮೆರಿಕದ ರಾಯಭಾರ ಕಚೇರಿ ಹಣಕಾಸು ನೆರವು ನೀಡಿದೆ. ಮಹಿಳಾ ಉದ್ಯಮಗಳಿಗೆ ಅವಕಾಶ ನೀಡುವ ಜೊತೆ ಆರ್ಥಿಕ ಸ್ವಾವಲಂಬನೆ ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ.

ಚೆನ್ನೈನ ಅಮೆರಿಕ ರಾಯಭಾರ ಕಚೇರಿಯ ಜನರಲ್ ಜುಡಿತ್ ರವಿನ್ ಮಾತನಾಡಿ, "ವಿಶ್ವದಾದ್ಯಂತ ಹೆಚ್ಚಿನ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಮಹಿಳೆಯರ ಆರ್ಥಿಕ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ" ಎಂದರು.

Amani Institute Host Workshop For Woman Entrepreneurs

"ಸಮಾಜದಲ್ಲಿ ನಿರಂತರ ಸಮೃದ್ಧಿ, ಶಾಂತಿ ಮತ್ತು ಪ್ರಗತಿಗೆ ಮಹಿಳೆಯರ ಸಬಲೀಕರಣವು ಅತ್ಯಗತ್ಯ ಎಂದು ಅಮೆರಿಕ ಮತ್ತು ಭಾರತ ನಂಬಿದೆ. ಅಮೆರಿಕ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಇರುವ ಅಡೆತಡೆಗಳನ್ನು ತೆಗೆದುಹಾಕಲು ಭಾರತದೊಂದಿಗೆ ಕೆಲಸ ಮಾಡಲು ಬದ್ಧವಾಗಿದೆ" ಎಂದು ಹೇಳಿದರು.

ಅಮಾನಿ ಇನ್‌ಸ್ಟಿಟ್ಯೂಟ್‌ ಭಾರತದ ನಿರ್ದೇಶಕಿ ಶೆಹ್ಜಿಯಾ ಲಿಲಾನಿ ಮಾತನಾಡಿ, "ಚೆನ್ನೈನ ರಾಯಭಾರಿ ಕಚೇರಿ ಸಹಯೋಗದೊಂದಿಗೆ ಕಳೆದ ಮೂರು ವರ್ಷಗಳಿಂದ ಮಹಿಳಾ ಸಾಮಾಜಿಕ ಉದ್ಯಮಿಗಳನ್ನು ಬೆಂಬಲಿಸುವ ಕಾರ್ಯ ಮಾಡುತ್ತಿರುವುದಕ್ಕೆ ನಾವು ತುಂಬಾ ಹೆಮ್ಮೆಪಡುತ್ತೇವೆ" ಎಂದು ತಿಳಿಸಿದರು.

"ಮೊದಲ 40 ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲಾಗಿತ್ತು. ಈಗ 18 ಮಹಿಳೆಯರು ಕಾರ್ಯಾಗಾರದಲ್ಲಿ ಪಾಲ್ಗೊಂಡು ನಾಯಕತ್ವದ ತಂತ್ರಗಳನ್ನು ಅಳವಡಿಸಿಕೊಂಡರು. ಭಾರತದಂತಹ ದೇಶದಲ್ಲಿ ಮಹಿಳಾ ಉದ್ಯಮಿಗಳು ಒಗ್ಗೂಡುವ, ಅವರಲ್ಲಿರುವ ಸಾಮೂಹಿಕ ಬುದ್ಧಿವಂತಿಕೆ ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳುವುದು ಅತ್ಯತ್ತಮ ಸಂಗತಿಯಾಗಿದ್ದು, ವೃತ್ತಿಪರ ಸಮಯದಾಯದ ಬೆಳವಣಿಗೆಗೆ ಇದು ಸಹಕಾರಿ" ಎಂದರು.

ಎಸ್‌ಸ್ಟ್ರೈಟ್ ಸರ್ಕಲ್‌ನ ಸಂಸ್ಥಾಪಕ ಮತ್ತು ಸಿಇಒ ಲಾವಣ್ಯ ಸೋಮನ್ ಮತ್ತು ಲೀಡರ್‌ಶಿಪ್ ಫಾರ್ ಗ್ರೋತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಮ್ಮ ಕಲಿಕೆಯ ಬಗ್ಗೆ ಮಾಹಿತಿ ಹಂಚಿಕೊಂಡರು.

ಕಳೆದ ಐದು ತಿಂಗಳುಗಳಲ್ಲಿ ಮೊದಲ ಬಾರಿಗೆ ಇಂತಹ ಅನುಭವದ ಕೋರ್ಸ್‌ಗಳಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಉದ್ಯಮಿಗಳ ಬೆಳವಣಿಗೆಗೆ ನಾಯಕರಾಗಿ ನಮ್ಮನ್ನು ಸಬಲೀಕರಣಗೊಳಿಸಿದ್ದಕ್ಕೆ ಅಮಾನಿ ಇನ್‌ಸ್ಟಿಟ್ಯೂಟ್‌ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಅಮೆರಿಕ ರಾಯಭಾರ ಕಚೇರಿಗೆ ಅಪಾರ ಕೃತಜ್ಞತೆಗಳು ಎಂದು ಅನುಭವ ಹಂಚಿಕೊಂಡರು.

Recommended Video

   Modi ಆಪ್ತ ಗುಂಡೇಟಿಗೆ ಬಲಿಯಾಗಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಚೀನಾ | *World | OneIndia Kannada
   English summary
   Bengaluru Amani institute with support from the U.S. Consulate General Chennai hosted a day-long workshop for woman entrepreneurs. Tamil Nadu, Kerala and Karnataka based 18 women social entrepreneurs took part in the event.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X