Upendra news: ಜಾತಿ ನಿಂದನೆ ಆರೋಪ: ಉಪೇಂದ್ರ ಪ್ರತಿಕೃತಿ ದಹಿಸಿದ ಬೆಂಗಳೂರು ವಿವಿ ವಿದ್ಯಾರ್ಥಿಗಳು
ಬೆಂಗಳೂರು, ಆಗಸ್ಟ್, 14: ಜಾತಿ ನಿಂದನೆ ಆರೋಪ ಹಿನ್ನೆಲೆ ನಟ ಉಪೇಂದ್ರ ಅವರ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಇಂದು ಬೆಂಗಳೂರು ವಿವಿಯ ವಿದ್ಯಾರ್ಥಿಗಳು ನಟ ಉಪೇಂದ್ರ ಅವೆ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿ ನಿಂದನೆ ಹಿನ್ನೆಲೆ ನಟ ಉಪೇಂದ್ರ ವಿರುದ್ಧ ರಾಜ್ಯದೆಲ್ಲಡೆ ಆಕ್ರೋಶಗಳು ಭುಗಿಲೆದ್ದಿದ್ದು, ಮತ್ತೊಂದೆಡೆ ಬೆಂಗಳೂರು ವಿವಿ ವಿದ್ಯಾರ್ಥಿಗಳು ವಿವಿ ಕಚೇರಿ ಮುಂದೆ ಉಪೇಂದ್ರ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸುವ ಮೂಲಕ ಬಿಸಿಮುಟ್ಟಿಸಿದ್ದಾರೆ.

ಇದೀಗ ಬಂದ ಮಾಹಿತಿಯ ಪ್ರಕಾರ ಉಪ್ಪಿ ಸಂಪರ್ಕಕ್ಕೆ ಸಿಗುತ್ತಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಕೂಡ ಸದ್ಯ ಉಪ್ರೇಂದ್ರ ಅವರ ಹುಡುಕಾಟದಲ್ಲಿದ್ದಾರೆ. ಈಗಾಗಲೇ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ದೂರು ದಾಖಲಾಗಿದ್ದು, ಈ ಹಿನ್ನೆಲೆ ಬಂಧನ ಭೀತಿಯಲ್ಲಿ ನಟ ಉಪೇಂದ್ರ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆಗೆ ಹಾಜರಾಗಬೇಕಾದ ಬೆನ್ನಲ್ಲೆ ನಟ ನಾಪತ್ತೆ ಆಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಹಾಗೆಯೇ ಈ ತನಿಖೆ ಯಾವ ರೀತಿ ನಡೆಯುತ್ತದೆಂದು ಕಾದುನೋಡಬೇಕಿದೆ.
ಉಪೇಂದ್ರ ವಿರುದ್ಧ ಎಚ್.ಸಿ.ಮಹದೇವಪ್ಪ ಬೇಸರ
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಟ, ನಿರ್ಮಾಪಕ ಉಪೇಂದ್ರ ಅವರು ಜಾತಿ ಹೆಸರನ್ನು ಕರೆದಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ ಎಂದು ಜಿಲ್ಲಾ ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಟ ಉಪೇಂದ್ರ ಇತ್ತೀಚೆಗೆ ಮಾತಿನ ಭರದಲ್ಲಿ ಊರು ಇದ್ದ ಕಡೆ ಹೊಲಗೇರಿ ಇದ್ದೇ ಇರುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿ ದಲಿತ ಸಮುದಾಯದ ಕಿಡಿಕಾರಿದೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಮಾಜದ ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ದೊಡ್ಡ ನಟ, ನಿರ್ಮಾಪಕರಾಗಿರುವ ಉಪೇಂದ್ರರಿಗೆ ದೇಶದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು ಬಹಳ ಇದೆ ಎಂದುಕೊಂಡಿದ್ದೆ. ಆದರೆ, ಅವರು ಮಾತನಾಡುವಾಗ ಸಮಾಜವನ್ನು ಅರಿತು ಮಾತನಾಡಬೇಕು ಎಂದರು.
ಇನ್ನೂ ಮೈಸೂರು ವಿವಿಗೆ ಹಂಗಾಮಿ ಕುಲಪತಿ ನೇಮಕ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೆ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಲಿದೆ. ಖಾಯಂ ಕುಲಪತಿಗಳ ನೇಮಕ ವಿಚಾರದಲ್ಲಿ ಹಿರಿಯರನ್ನು ಪರಿಗಣಿಸಬೇಕಿದೆ. ಇದನ್ನೆಲ್ಲಾ ಮಾಡಲು ಶೋಧನಾ ಕಮಿಟಿ ತೀರ್ಮಾನ ಮಾಡಲಿದೆ ಎಂದರು.












Click it and Unblock the Notifications