• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶತಾಬ್ದಿ ಹಾಗೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು

|
Google Oneindia Kannada News

ಬೆಂಗಳೂರು, ನವೆಂಬರ್‌ 3: ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮೈಸೂರು ಬೆಂಗಳೂರು ಚೆನ್ನೈ ಮಾರ್ಗದಲ್ಲಿ ನವೆಂಬರ್ 11 ರಿಂದ ಪ್ರಾರಂಭವಾಗಲಿದೆ. ಗಂಟೆಗೆ ಗರಿಷ್ಠ 160ರಿಂದ 180 ಕಿಮೀ ವೇಗವನ್ನು ಹೊಂದಿರುವ ರೈಲು ಮಾರ್ಗದಲ್ಲಿ 75ರಿಂದ 77 ಕಿಮೀ ವೇಗದಲ್ಲಿ ಸದರಿ ರೈಲು ಚಲಿಸುತ್ತದೆ. ಇದು ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ಸ್ವಲ್ಪ ವೇಗದಲ್ಲಿ ಚಲಿಸುತ್ತದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ರೈಲಿಗೆ ಚಾಲನೆ ನೀಡಲಿದ್ದಾರೆ. ಇದು ಪ್ರಯಾಣದ ಸಮಯವನ್ನು ಅಲ್ವ ಸಮಯ ಕಡಿಮೆಗೊಳಿಸುತ್ತದೆ. ಅಂದರೆ ಶತಾಬ್ದಿಗಿಂತ ರೈಲಿಗಿಂತ ಪ್ರಯಾಣಿಕರು ಸ್ವಲ್ಪ ಬೇಗ ನಿರ್ದಿಷ್ಟ ಸ್ಥಳವನ್ನು ತಲುಬಹುದು. ವಿವಿಧ ಕಾರಣಗಳಿಂದಾಗಿ ವೇಗದ ಮೇಲಿನ ನಿರ್ಬಂಧಗಳೊಂದಿಗೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದಲ್ಲೇ ಅತ್ಯಂತ ನಿಧಾನವಾಗಿರುತ್ತದೆ.

ಚೆನ್ನೈ-ಮೈಸೂರು ವಂದೇ ಭಾರತ್ ರೈಲು ಏರಲು 921 ರೂ. ಸಾಕು!ಚೆನ್ನೈ-ಮೈಸೂರು ವಂದೇ ಭಾರತ್ ರೈಲು ಏರಲು 921 ರೂ. ಸಾಕು!

ಬೆಂಗಳೂರಿನಲ್ಲಿ ರೈಲು ಪ್ಲಾಟ್‌ಫಾರ್ಮ್ ನಂ.7ನಲ್ಲಿ ನಿಲ್ಲುವ ನಿರೀಕ್ಷೆಯಿದೆ. ಇದು ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದ ಎರಡನೇ ಪ್ರವೇಶ ದ್ವಾರದಿಂದ ಪ್ರಯಾಣಿಕರಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ.

ಪ್ರಸ್ತಾವಿತ ಮಂಗಳವಾರ ಹೊರತುಪಡಿಸಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಚೆನ್ನೈನಿಂದ ಬೆಂಗಳೂರಿನ ಮೂಲಕ ಮೈಸೂರಿಗೆ ಓಡಾಡುತ್ತದೆ. ಇದು ಬೆಳಗ್ಗೆ 5.50 ರಿಂದ ಚೆನ್ನೈನಿಂದ ಹೋರಾಡುತ್ತದೆ. ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಬೆಳಗ್ಗೆ 8.30 ಆಗಮಿಸುತ್ತದೆ. ಬೆಂಗಳೂರು ರೈಲು ನಿಲ್ದಾಣಕ್ಕೆ ಬೆಳಗ್ಗೆ 10.30ಕ್ಕೆ ಬಂದು ಸೇರುತ್ತದೆ. ಮೈಸೂರು ಜಂಕ್ಷನ್‌ಗೆ ಮಧ್ಯಾಹ್ನ 12.30ಕ್ಕೆ ಆಗಮಿಸುತ್ತದೆ. ಇದರ ಒಟ್ಟು ಪ್ರಯಾಣ ಅವಧಿ 6 ಗಂಟೆ 40 ನಿಮಿಷಗಳು. ರೈಲಿನ ಒಟ್ಟಾರೆ ವೇಗ ಗಂಟೆಗೆ 75.60 ಕಿಮೀ ಆಗಿರುತ್ತದೆ.

ಮಂಗಳವಾರ ಹೊರತುಪಡಿಸಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮರುದಿನ ಮೈಸೂರಿನಿಂದ ಮಧ್ಯಾಹ್ನ 1.05 ನಿರ್ಗಮಿಸುತ್ತದೆ. ಬೆಂಗಳೂರಿನ ಕೆಎಸ್ಆರ್ ನಿಲ್ದಾಣಕ್ಕೆ ಮಧ್ಯಾಹ್ನ 2.55 ಗಂಟೆಗೆ ಬಂದು ಸೇರುತ್ತದೆ. ಇದು ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಸಂಜೆ 4.55 ಗಂಟೆಗೆ ಬರುತ್ತದೆ. ಚೆನ್ನೈಗೆ ರಾತ್ರಿ 7.45 ಗಂಟೆಗೆ ಬಂದು ಸೇರುತ್ತದೆ. ಇದರ ಒಟ್ಟಾರೆ ವೇಗ ಗಂಟೆಗೆ 75.60 ಕಿಮೀ ಆಗಿರುತ್ತದೆ.

ಆದರೆ ಶತಾಬ್ದಿ ರೈಲು ಮಂಗಳವಾರ ಹೊರತುಪಡಿಸಿ ಚೆನ್ನೈನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಬೆಳಗ್ಗೆ 8.50 ಗಂಟೆಗೆ ಆಗಮಿಸುತ್ತದೆ. ಕೆಎಸ್‌ಆರ್‌ ಬೆಂಗಳೂರಿಗೆ ಬೆಳಗ್ಗೆ 10.45 ಗಂಟೆಗೆ ತಲುಪುತ್ತದೆ. ಮೈಸೂರು ಜಂಕ್ಷನ್‌ಗೆ ಮಧ್ಯಾಹ್ನ 1 ಗಂಟೆಗೆ ಬಂದು ಸೇರುತ್ತದೆ. ಇದರ ಒಟ್ಟು ಪ್ರಯಾಣ ಅವಧಿ 7 ಗಂಟೆಗಳು. ಇದರ ಒಟ್ಟಾರೆ ವೇಗ ಗಂಟೆಗೆ 72.04 ಕಿಮೀ ಆಗಿರುತ್ತದೆ.

All you need to know about Shatabdi and Vande Bharat Express

ಮಂಗಳವಾರ ಹೊರತುಪಡಿಸಿ ಮೈಸೂರಿನಿಂದ ಬೆಂಗಳೂರಿನ ಮೂಲಕ ಚೆನ್ನೈಗೆ ಮಧ್ಯಾಹ್ನ 2.15ಕ್ಕೆ ಹೊರಟು ಕೆಎಸ್‌ಆರ್‌ ಬೆಂಗಳೂರಿಗೆ ಸಂಜೆ 4.10ಕ್ಕೆ ತಲುಪುತ್ತದೆ. ಜೋಲಾರ್‌ಪೆಟ್ಟೈ ಜಂಕ್ಷನ್‌ಗೆ ಸಂಜೆ 6.25ಕ್ಕೆ ಬಂದು ಸೇರುತ್ತದೆ. ಚೆನ್ನೈ ರಾತ್ರಿ 9.30ಕ್ಕೆ ಬಂದು ಸೇರುತ್ತದೆ. ಇದರ ಒಟ್ಟಾರೆ ವೇಗ ಗಂಟೆಗೆ 69.56 ಕಿಮೀ. ಇದರ ಪ್ರಯಾಣ ಅವಧಿಗಳು 7.15 ಗಂಟೆಗಳು ಆಗಿರುತ್ತದೆ.

English summary
Semi High Speed ​​Train Vande Bharat Express Mysuru Bengaluru Chennai route will start from November 11. The train runs at a speed of 75 to 77 kmph on a railway line with a maximum speed of 160 to 180 kmph. It runs slightly faster than the Shatabdi Express.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X