• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ರಾಜ್ಯದ ಗಡಿ ಬಂದ್, ಎಲ್ಲ ಚುನಾವಣೆ ಮುಂದಕ್ಕೆ

|

ಬೆಂಗಳೂರು, ಮಾರ್ಚ್ 22: ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿರುವಂತೆ ಇಂದು ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ದೇಶವ್ಯಾಪಿ ಈ ಅಭಿಯಾನಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಜ್ಯದಲ್ಲೂ ಉತ್ತಮ ಬೆಂಬಲ ಸಿಕ್ಕಿದ್ದು, ಸಿಲಿಕಾನ್ ಸಿಟಿ ಸೇರಿದಂತೆ ಇಡೀ ರಾಜ್ಯ ಸ್ವಯಂ ಪ್ರೇರಿತವಾಗಿ ಸ್ತಬ್ದವಾಗಿದೆ.

ಮತ್ತೊಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೇ ಇದ್ದು, ರಾಜ್ಯದಲ್ಲಿ ಆತಂಕ ಹೆಚ್ಚಾಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಹೆಚ್ಚಿನ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುತ್ತಿದ್ದು, ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತಷ್ಟು ಮಾಹಿತಿ ನೀಡಿದ್ದಾರೆ.

ಕೊರೊನಾಭೀತಿ: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ

ರಾಜ್ಯ ಗಡಿ ಬಂದ್

ರಾಜ್ಯ ಗಡಿ ಬಂದ್

ಮಹಾರಾಷ್ಟ್ರ, ಕೇರಳ ಸೇರಿದಂತೆ ಗಡಿರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊರರಾಜ್ಯಗಳಿಂದ ಬರುವವರಿಗೆ ಕಡಿವಾಣ ಹಾಕಲು ಸರ್ಕಾರ ತೀರ್ಮಾನಿಸಿದೆ.

* ಕರ್ನಾಟಕ ರಾಜ್ಯದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಸಿಎಂ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆ ಮತ್ತು ಚುನಾವಣೆ ಮುಂದಕ್ಕೆ

ಪರೀಕ್ಷೆ ಮತ್ತು ಚುನಾವಣೆ ಮುಂದಕ್ಕೆ

*ಮಾರ್ಚ್ 27ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಬೇಕಿತ್ತು. ಇದೀಗ, SSLC ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳನ್ನು ಮುಂದಿನ ತೀರ್ಮಾನದವರೆಗೆ ಮುಂದೂಡಲಾಗುವುದು ಎಂದು ಸಿಎಂ ಆದೇಶ ನೀಡಿದ್ದಾರೆ.

*ಇನ್ನು ಮುಂದಿನ ಆದೇಶದವರೆಗೂ ಎಲ್ಲ ಚುನಾವಣೆಗಳನ್ನು ಕೂಡ ಮುಂದೂಡಲಾಗಿದೆ.

ಕೊರೊನಾ ಸೇವೆಗಾಗಿ ಬದಲಾದ ಬಾಲಬ್ರೂಯಿ, ವಿಕ್ಟೋರಿಯಾ ಆಸ್ಪತ್ರೆ

ಟಾಸ್ಕ್‌ ಫೋರ್ಸ್ ಕಾರ್ಯಾರಂಭ

ಟಾಸ್ಕ್‌ ಫೋರ್ಸ್ ಕಾರ್ಯಾರಂಭ

*ಹಿರಿಯ ಸಚಿವರನ್ನೊಳಗೊಂಡ ಕೊವಿಡ್ ಟಾಸ್ಕ್ ಫೋರ್ಸ್ ಕಾರ್ಯ ನಿರ್ವಹಣೆಗೆ ಸಹಾಯವಾಗುವಂತೆ ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಒಂದು ತೀವ್ರ ನಿಗ್ರಹ ದಳವನ್ನು ಮಾಡಲಾಗಿದ್ದು ಅದರಂತೆ ಕಾರ್ಯೋನ್ಮುಖರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

*ಐಸಿಎಂಆರ್ ಹಾಗೂಎನ್‌ಐವಿ ಇವರ ಸಹಕಾರದೊಂದಿಗೆ ಆದಷ್ಟು ಸರ್ಕಾರಿ ಹಾಗೂ ಸರ್ಕಾರೇತರ ಲ್ಯಾಬ್‌ಗಳಿಗೆ ಕೊವಿಡ್ ತಪಾಸಣಾ ಪರವಾನಗಿ ನೀಡಲಾಗುತ್ತದೆ.

ಸ್ಥಳೀಯ ವಿಮಾನಗಳನ್ನು ತಪಾಸಣೆ

ಸ್ಥಳೀಯ ವಿಮಾನಗಳನ್ನು ತಪಾಸಣೆ

*ಈಗಾಗಲೇ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದ್ದು, ಇನ್ನುಮುಂದೆ ಸ್ಥಳೀಯ ವಿಮಾನ ಪ್ರಯಾಣಿಕರನ್ನೂ ಕೂಡ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ.

* ಕೊವಿಡ್ ವೈರಾಣುವನ್ನು ಪತ್ತೆ ಮಾಡುವ ಲ್ಯಾಬ್‌ಟೆಸ್ಟ್‌ಗಳ ಪ್ರಮಾಣವನ್ನು ಈ ಕೂಡಲೇ ಹೆಚ್ಚಿಸುವುದು. ವೈರಾಣು ದೃಢಪಟ್ಟಿರುವ ರೋಗಿಗಳ ಸಂಪರ್ಕಕ್ಕೆ ಬಂದಿರುವ ಎಲ್ಲಾ ರೋಗ ಲಕ್ಷಣಗಳನ್ನು ತೋರುವ/ತೋರದಿರುವ ಎಲ್ಲರನ್ನೂ ತಪಾಸಣೆಗೊಳಪಡಿಸುವುದು. ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ ಕನಿಷ್ಠ 200 ಜನರಿಗೆ ಪರೀಕ್ಷೆ ಮಾಡುವಂತಹ ಸೌಕರ್ಯಗಳನ್ನು ಈ ಕೂಡಲೇ ಸಜ್ಜುಗೊಳಿಸಲಾಗುವುದು.

1700 ಹಾಸಿಗೆಗಳ ಸಿದ್ಧತೆ

1700 ಹಾಸಿಗೆಗಳ ಸಿದ್ಧತೆ

* ಜಿಲ್ಲಾ ಮಟ್ಟದಲ್ಲಿ ಎಲ್ಲಾ ನುರಿತ ತಜ್ಞ ವೈದ್ಯರುಗಳ ಸಲಹೆ ಸೂಚನೆಗಳನ್ನು ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್‌ಗಳು ಪರಿಗಣಿಸುವುದು.

* 1700 ಹಾಸಿಗೆಗಳನ್ನು ಒಳಗೊಂಡ ವಿಕ್ಟೋರಿಯಾ ಸಮುಚ್ಚಯದಲ್ಲಿರುವ ಎಲ್ಲಾ ಆಸ್ಪತ್ರೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಕೋವಿಡ್‌19ಗೆ ಸಂಬಂಧಿಸಿದಂತೆ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು. ಈಗಾಗಲೇ ದಾಖಲಾಗಿರುವ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದು.

ವಾರ್ ರೂಂ ಪರಿವರ್ತನೆ

ವಾರ್ ರೂಂ ಪರಿವರ್ತನೆ

* ಬಾಲಬೃಹಿ ಅತಿಥಿ ಗೃಹವನ್ನು ಕೊರೊನಾ (ಕೋವಿಡ್ 19) ರೂಂ ಆಗಿ ಪರಿವರ್ತಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಕೊರೊನಾ ಕುರಿತು ಸಂಪೂರ್ಣ ಕ್ರಮಗಳ ಉಸ್ತುವಾರಿಯನ್ನು ಈ ಕೇಂದ್ರ ಸಾಧಿಸಲಾಗುವುದು. ಮಾನ್ಯ ಮುಖ್ಯಮಂತ್ರಿ ಇದರ ನೇತೃತ್ವ ವಹಿಸುವರು. ಇದಕ್ಕೆ ಸಂಬಂಧಿಸಿದ ಎಲ್ಲಾ ಟಾಸ್ಕ್‌ ಪೋರ್ಸ್ ಕಾರ್ಯನಿರತವಾಗಿರುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಟಾಸ್ಕ್ ಪೋರ್ಸ್ ಸಭೆಗಳ ವಿಡಿಯೋ ಕಾನ್ಫೆರೆನ್ಸ್ ಗಳು ಇಲ್ಲಿಂದಲೇ ಜರುಗುತ್ತವೆ.

English summary
Karnataka chief minister Yediyurappa have taken decision to close all karnataka border till next order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X