ಅಜ್ಮೀರ್ ಗ್ರೂಪ್ ಬಹುಕೋಟಿ ವಂಚನೆ ಪ್ರಕರಣ: ಆಸ್ತಿ ಜಪ್ತಿ ಮಾಡಿದ ಇಡಿ
ಬೆಂಗಳೂರು, ಡಿಸೆಂಬರ್ 22: ಅಜ್ಮೀರ್ ಗ್ರೂಪ್ ನಿಂದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಮಾಡಲಾಗಿದೆ.
ಹಣ ವರ್ಗಾವಣೆ ತಡೆ ಕಾಯ್ದೆ-2002 (PMLA) ಅಡಿಯಲ್ಲಿ ಆಸ್ತಿ, ಕೃಷಿ ಜಮೀನು, ರೆಸಿಡೆನ್ಸಿಯಲ್ ಪ್ಲಾಟ್, ಬ್ಯಾಂಕ್ ಬ್ಯಾಲೆನ್ಸ್ ಜಪ್ತಿ ಮಾಡಿದ್ದು, ಒಟ್ಟು 8.41 ಕೋಟಿ ಮೌಲ್ಯದ ಆಸ್ತಿಗಳನ್ನು ಲಗತ್ತಿಸಲಾಗಿದೆ.
2019 ರ ಜನವರಿಯಲ್ಲಿ ನಡೆದ ಬಹುಕೋಟಿ ವಂಚನೆ ಬಗ್ಗೆ ಹೂಡಿಕೆದಾರರು ಸಿಸಿಬಿಗೆ ದೂರು ನೀಡಿದ್ದರು. ವಂಚನೆ ಬಗ್ಗೆ ಬೆಂಗಳೂರು ED ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಅಜ್ಮೀರ್ ಗ್ರೂಪ್ ಮಾಲೀಕ ತಬ್ರೇಜ್ ಪಾಷಾರನ್ನು ಸಿಸಿಬಿ ಮತ್ತು ಇಡಿ ಬಂಧಿಸಿತ್ತು.

ಇದೀಗ ಜಾರಿ ನಿರ್ದೇಶನಾಲಯದಿಂದ ಅಜ್ಮೀರ್ ಗ್ರೂಪ್ ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಇಡಿಯಿಂದ ತನಿಖೆ ಮುಂದುವರೆದಿದೆ. ಸುಮಾರು 1500ಕ್ಕೂ ಹೆಚ್ಚು ಜನರು ಅಜ್ಮೀರ್ ಗ್ರೂಪ್ ನಲ್ಲಿ ಹೂಡಿಕೆ ಮಾಡಿದ್ದರು.
2017 ರಲ್ಲಿ ಜಯನಗರದಲ್ಲಿ ಅಜ್ಮೀರ್ ಗ್ರೂಪ್ ಪ್ರಾರಂಭವಾಗಿದ್ದು, ಪ್ರತಿ ತಿಂಗಳಿಗೆ ಅಧಿಕ ಬಡ್ಡಿಯ ಆಸೆ ತೋರಿಸಿ ಜನರಿಗೆ ವಂಚನೆ ಮಾಡಿದ್ದರು ಎನ್ನಲಾಗಿದೆ. ಅಜ್ಮೀರ್ ಗ್ರೂಪ್ ಪ್ರಾರಂಭವಾಗಿ ಒಂದು ವರ್ಷದಲ್ಲಿ ಅಂದರೆ 2018 ರಲ್ಲಿ ಜಯನಗರ ಪೊಲೀಸ್ ಠಾಣೆಗೆ ಹೂಡಿಕೆದಾರರು ದೂರು ನೀಡಿದ್ದರು.
Recommended Video
ಎರಡು ಸ್ಥಿರ ಆಸ್ತಿ (ಕೃಷಿ ಭೂಮಿ ಮತ್ತು ವಸತಿ) ಮತ್ತು 14 ಚರ ಆಸ್ತಿಗಳು (13 ಬ್ಯಾಂಕ್ ಖಾತೆಗಳು ಮತ್ತು 1 ಡಿಮ್ಯಾಟ್ ಖಾತೆ) M / s ಅಜ್ಮೆರಾ ಗ್ರೂಪ್ಸ್, ಅದರ ಪಾಲುದಾರರು ಮತ್ತು ಇತರರನ್ನು ಅಟ್ಯಾಚ್ ಮಾಡಲಾಗಿದೆ.












Click it and Unblock the Notifications