Ranya Rao Case: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್: ಏರ್‌ಪೋರ್ಟ್, ಕಸ್ಟಮ್ ಸಿಬ್ಬಂದಿ ಶಾಮೀಲು ?
Ranya Rao Case: ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಿದ ಕೇಸ್‌ನಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು. ಇದರಲ್ಲಿ ರಾಜಕಾರಣಿಗಳು ಹಾಗೂ ಪ್ರಭಾವಿಗಳು ಮಾತ್ರವಲ್ಲ ಏರ್‌ಪೋರ್ಟ್‌ನ ಸಿಬ್ಬಂದಿ ಹಾಗೂ ಕಸ್ಟಮ್ ಅಧಿಕಾರಿಗಳು ಸಹ ಶಾಮೀಲಾಗಿರುವ ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಹಲವರು ಸೇರಿದ್ದಾರೆ ಎನ್ನುವ ಅನುಮಾನ ಶುರುವಾಗಿದ್ದು ಈ ಸಂಬಂಧ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಿದ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದ್ದು. ತನಿಖೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಚಿನ್ನದ ಸಾಗಾಟದ ಹಿಂದೆ ಇನ್ನೂ ಹಲವರು ಇರುವ ಅನುಮಾನ ಶುರುವಾಗಿದ್ದು. ಅಧಿಕಾರಿಗಳು ಏಕಕಾಲಕ್ಕೆ ಹಲವರಿಗೆ ಬಲೆ ಬೀಸಿದ್ದಾರೆ. ಈ ನಡುವೆ ವಿಮಾನ ಸಿಬ್ಬಂದಿಯ ಮೇಲೂ ಹಾಗೂ ಕಸ್ಟಮ್ ಅಧಿಕಾರಿಗಳ ಮೇಲೂ ಅನುಮಾನ ಬಂದಿದ್ದು ಅವರೂ ಸಹ ಇದರಲ್ಲಿ ಭಾಗಿ ಆಗಿರುವ ಶಂಕೆ ಎದುರಾಗಿದೆ.

ದುಬೈನಿಂದ ಹಿಂದಿರುಗುವ ಸಂದರ್ಭದಲ್ಲಿ 14.2 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ ಆರೋಪ ನಟಿ ರನ್ಯಾ ಅವರ ಮೇಲಿದೆ. ಈ ಸಂಬಂಧ ಅವರನ್ನು ಮಾರ್ಚ್ 3ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಇನ್ನು ಈ ಅಕ್ರಮ ಚಿನ್ನ ಸಾಗಾಣಿಕೆಯು ದೊಡ್ಡ ಮಟ್ಟದಲ್ಲಿ ನಡೆದಿರುವ ಅನುಮಾನ ವ್ಯಕ್ತವಾಗುತ್ತಿದೆ. ಹೀಗಾಗಿ ಅವರನ್ನು ಮೂರು ದಿನಗಳ ಕಾಲ ಡಿಆರ್‌ಐಗೆ ಒಪ್ಪಿಸಲಾಗಿದೆ.
ಕಸ್ಟಮ್ ಸುಂಕ ತಪ್ಪಿಸುವ ಯತ್ನ: ಅಕ್ರಮ ಚಿನ್ನ ಸಾಗಾಣಿಕೆ ಮಾತ್ರವಲ್ಲ ರನ್ಯಾ ಅವರ ವಿರುದ್ಧ ಕಸ್ಟಮ್ ಸುಂಕವನ್ನು ತಪ್ಪಿಸುವ ಪ್ರಯತ್ನದ ಆರೋಪವೂ ಸಹ ಕೇಳಿ ಬಂದಿದೆ. ಡಿಆರ್‌ಐ ಕೋರ್ಟ್‌ಗೆ ಸಲ್ಲಿಸಿರುವ ಅಫೀಡಿವಿಟ್‌ನಲ್ಲಿ ರನ್ಯಾ ಅವರು 14.2 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ್ದಾರೆ. ಇದರ ಮೌಲ್ಯವು ಬರೋಬ್ಬರಿ 12.56 ಕೋಟಿ ರೂಪಾಯಿ ಇದೆ. ಅಲ್ಲದೆ ಚಿನ್ನಾಭರಣಗಳನ್ನು ಧರಿಸುವ ಮೂಲಕ 4.83 ಕೋಟಿ ಕಸ್ಟಮ್ ಸುಂಕವನ್ನು ಸಹ ತಪ್ಪಿಸುವ ಪ್ರಯತ್ನ ಮಾಡಿದ್ದರು ಎನ್ನುವ ಅಂಶವು ಇದೀಗ ಬಹಿರಂಗವಾಗಿದೆ.
ಮಾನಸಿಕ ಆರೋಗ್ಯ ಸಮಸ್ಯೆ: ಇನ್ನು ರನ್ಯಾ ಅವರು ಈ ಕೇಸ್‌ನಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಕೋರ್ಟ್ ಆವರಣದಲ್ಲಿ ಅವರು ಮೂರ್ಛೆ ಹೋಗಿದ್ದಾರೆ. ನನಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದೇ ಆಹಾರವನ್ನು ಸಹ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅವರ ವಕೀಲರ ಬಳಿ ಹೇಳಿಕೊಂಡಿದ್ದಾರೆ. ಇನ್ನು ಇದೇ ವೇಳೆ ತನಿಖೆಯ ವಿಷಯಗಳನ್ನು ಗೌಪ್ಯವಾಗಿ ಇರಿಸಿ ಅಥವಾ ತನಿಖೆಯ ಅಂಶಗಳನ್ನು ಹೊರಗೆ ಹಂಚಿಕೊಳ್ಳಬೇಡಿ ಎಂದೂ ಅವರು ತನಿಖಾಧಿಕಾರಿಗಳ ಮುಂದೆ ಮನವಿ ಮಾಡಿರುವುದು ವರದಿಯಾಗಿತ್ತು.
ವಿಮಾನ ನಿಲ್ದಾಣದ ಸಿಬ್ಬಂದಿ & ಕಸ್ಟಮ್ ಅಧಿಕಾರಿಗಳು ಭಾಗಿ: ಇನ್ನು ರನ್ಯಾ ಅವರ ಪ್ರಕರಣದಲ್ಲಿ ಏರ್‌ಪೋರ್ಟ್ ಸಿಬ್ಬಂದಿ ಹಾಗೂ ಕಸ್ಟಮ್ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎನ್ನುವ ಆಘಾತಕಾರಿ ಅಂಶಗಳು ಇದೀಗ ಬೆಳಕಿಗೆ ಬಂದಿದೆ. ಈ ಸಂಬಂಧ ಅನುಮಾನಗಳು ಶುರುವಾಗಿವೆ. ಈ ಸಂಬಂಧ ಸಿಬಿಐ ಹಾಗೂ ಡಿಆರ್ಐ ಅಧಿಕಾರಿಗಳು ಅಲರ್ಟ್ ಆಗಿದ್ದು. ವಿವಿಧ ವಿಮಾನ ನಿಲ್ದಾಣಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಏರ್ಪೋರ್ಟ್ ಸಿಬ್ಬಂದಿ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಮೇಲೂ ಕಣ್ಣಿರಿಸಿದ್ದಾರೆ. ಅಲ್ಲದೇ ಹೀಗಾಗಲೇ ಕೆಲವರನ್ನು ವಿಚಾರಗೂ ಒಳಪಡಿಸಲಾಗಿದೆ ಎನ್ನಲಾಗಿದೆ.
ಬೃಹತ್ ಸ್ವರೂಪ: ನಟಿ ರನ್ಯಾ ರಾವ್ ಅವರ ಪ್ರಕರಣವು ದಿನಕ್ಕೊಂದು ತಿರುವು ಹಾಗೂ ಸ್ವರೂಪವನ್ನು ಪಡೆದುಕೊಳುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ಪ್ರಭಾವಿ ಸಚಿವರು ಹಾಗೂ ಮಾಜಿ ಸಚಿವರು ನಾಯಕರು ಸೇರಿದಂತೆ ಹಲವರು ಸೇರಿರುವ ಆರೋಪಗಳು ಕೇಳಿ ಬಂದಿವೆ. ಅಲ್ಲದೇ ಹವಾಲಾ ಲಿಂಕ್ ಇರುವ ಬಗ್ಗೆಯೂ ಅನುಮಾಗಳ ವ್ಯಕ್ತವಾಗಿವೆ.












Click it and Unblock the Notifications