ಬೆಂಗಳೂರು ವಾಯುಮಾಲಿನ್ಯ: 2020ರಲ್ಲಿ 12 ಸಾವಿರ ಮಂದಿ ಸಾವು

ಬೆಂಗಳೂರು,ಫೆಬ್ರವರಿ 19: ಬೆಂಗಳೂರಲ್ಲಿ ದಿನೇದಿನೆ ವಾಯುಮಾಲಿನ್ಯ ಹೆಚ್ಚುತ್ತಿದೆ. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ವಾಯುಮಾಲಿನ್ಯ ಕೊಂಚ ಕಡಿಮೆಯಾಗಿದ್ದರೂ ಕೂಡ 12 ಸಾವಿರ ಮಂದಿ ಮೃತಪಟ್ಟಿದ್ದಾರೆ.

Recommended Video

      ಸಿಲಿಕಾನ್ ಸಿಟಿಯಲ್ಲಿ ಇಂದು ವರುಣಾರ್ಭಟ-ವಾಹನ ಸವಾರರ ಪರದಾಟ | Oneindia Kannada

      ಗ್ರೀನ್ ಪೀಸ್ ವರದಿ ಪ್ರಕಾರ, 2020ರಲ್ಲಿ ಬೆಂಗಳೂರು ವೊಂದರಲ್ಲಿ 12 ಸಾವಿರ ಜನರು ಮೃತಪಟ್ಟಿದ್ದಾರೆ. (ಪಿಎಂ) 2.5 ಅಂದರೆ ಕಡಿಮೆ ವಾಯುಗುಣಮಟ್ಟದಿಂದಾಗಿ ಬೆಂಗಳೂರು ಒಂದರಲ್ಲಿಯೇ 12 ಸಾವಿರ ಜನರು ಸಾವನ್ನಪ್ಪಿದ್ದಾರೆ.

      2020ರಲ್ಲಿ ಮುಂಬೈಯಲ್ಲಿ 25 ಸಾವಿರ ಜನರ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ. ಚೆನ್ನೈ ಮತ್ತು ಹೈದರಾಬಾದಿನಲ್ಲಿ 11 ಸಾವಿರ ಮಂದಿ ವಾಯುಮಾಲಿನ್ಯದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

      ದೆಹಲಿಯಲ್ಲಿ 54 ಸಾವಿರ ಜನರು ಮೃತಪಟ್ಟಿದ್ದಾರೆ. ಆಗ್ನೇಯ ಏಷ್ಯಾ ಗ್ರೀನ್ ಪೀಸ್ ನ ವಾಯುಗುಣಮಟ್ಟ ವಿಶ್ಲೇಷಣೆಯಲ್ಲಿ ಇದು ತಿಳಿದುಬಂದಿದೆ. ಐದು ದೊಡ್ಡ ನಗರಗಳಲ್ಲಿ 1 ಲಕ್ಷ 60 ಸಾವಿರ ಜನರ ಸಾವಿಗೆ ವಾಯು ಮಾಲಿನ್ಯ ಕಾರಣವಾಗಿದೆ.

      ವಿಷಕಾರಿ ಅಂಶದಿಂದ ರಕ್ತ ಸಂಚಾರಕ್ಕೂ ತೊಂದರೆ

      ವಿಷಕಾರಿ ಅಂಶದಿಂದ ರಕ್ತ ಸಂಚಾರಕ್ಕೂ ತೊಂದರೆ

      ಒಂದು ವೇಳೆ ಗಾಳಿಯೊಂದಿಗೆ ವಿಷಕಾರಿ ಅಂಶಗಳು ಸೇರಿದರೆ ಅದರಿಂದ ರಕ್ತ ಸಂಚಾರಕ್ಕೂ ತೊಂದರೆ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ. ಕಡಿಮೆ ಆರ್ಥಿಕ ಚಟುವಟಿಕೆಯಿಂದಾಗಿ ಕಳೆದ ವರ್ಷ ಕಡಿಮೆ ವಾಯು ಮಾಲಿನ್ಯವಾಗಿದೆ. ಸರ್ಕಾರ, ಕಾರ್ಪೋರೇಷನ್ ಮತ್ತು ವಯಕ್ತಿಕವಾಗಿ ವಾಯು ಮಾಲಿನ್ಯ ತಡೆಗೆ ಕ್ರಮ ಕೈಗೊಂಡು, ನಗರವನ್ನು ಉತ್ತಮ ಸ್ಥಳವನ್ನಾಗಿ ಮಾಡಬೇಕಾಗಿದೆ ಎಂದು ಐ ಕ್ಯೂ ಏರ್ ಸಿಇಒ ಪ್ರಾಂಕ್ ಹಮ್ಮಿಸ್ ಹೇಳಿದ್ದಾರೆ

      ವಾಯುಮಾಲಿನ್ಯ ನಿಯಂತ್ರಿಸಲು ಅನುದಾನ

      ವಾಯುಮಾಲಿನ್ಯ ನಿಯಂತ್ರಿಸಲು ಅನುದಾನ

      ವಾಯು ಮಾಲಿನ್ಯ ನಿಯಂತ್ರಿಸಲು ಪರಿಸರ ಸಚಿವಾಲಯದಿಂದ ಬಿಬಿಎಂಪಿಗೆ 279 ಕೋಟಿ ಹೊರತಾಗಿಯೂ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡಾ 2.2 ಕೋಟಿಯನ್ನು ನೀಡಲಾಗುತ್ತಿದೆ. ಆದರೆ. ಪ್ರಯೋಜನವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

      ಕಟ್ಟಡ ನಿರ್ಮಾಣ ಕಾರ್ಯದಿಂದಲೂ ವಾಯುಮಾಲಿನ್ಯ

      ಕಟ್ಟಡ ನಿರ್ಮಾಣ ಕಾರ್ಯದಿಂದಲೂ ವಾಯುಮಾಲಿನ್ಯ

      ಈಗ ನಗರದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣದಿಂದ ಉಂಟಾಗುವ ಪಿಎಂ 2.5 ವಾಯುಮಾಲಿನ್ಯದಿಂದಲೇ ಅಧಿಕ ಸಂಖ್ಯೆಯ ಜನರು ಸಾವನ್ನಪ್ಪುತ್ತಿರುವುದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

      44 ಅಂಶಗಳ ಕಾರ್ಯ ಯೋಜನೆಗೆ ಒಪ್ಪಿಗೆ

      44 ಅಂಶಗಳ ಕಾರ್ಯ ಯೋಜನೆಗೆ ಒಪ್ಪಿಗೆ

      ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲಾ ಪಾಲುದಾರರು ಎನ್ ಜಿಟಿ ಮತ್ತು ಸರ್ಕಾರದ ಮುಂದೆ ವಾಯು ಮಾಲಿನ್ಯ ನಿಯಂತ್ರಣಕ್ಕೆ 44 ಅಂಶಗಳ ಕಾರ್ಯ ಯೋಜನೆಗೆ ಒಪ್ಪಿಕೊಂಡಿದ್ದೇವೆ. ಆದರೆ, ಹಣದ ಕೊರತೆಯಿಂದ ಅದರ ಅನುಷ್ಠಾನ ಕಷ್ಟವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+