ಆಕಾಶವಾಣಿ-ದೂರದರ್ಶನ ನೌಕರರ ಪ್ರತಿಭಟನೆ: ಸಮಸ್ಯೆ ಏನಂತೀರಾ?
ಬೆಂಗಳೂರು, ಆಗಸ್ಟ್ 2: ಉದ್ಯೋಗ ಬಡ್ತಿಯಲ್ಲಿ ವಿಳಂಬ ಧೋರಣೆ, ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿರುವುದು, ಕಾರ್ಯಕ್ರಮ ಮಾಡಲು ಅನುದಾನ ನೀಡದಿರುವದು ಮುಂತಾದ ಬೇಡಿಕೆಯನ್ನಿಟ್ಟು, ಆಕಾಶವಾಣಿ ಮುಖ್ಯದ್ವಾರದ ಎದುರು ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿಯವರು ಪ್ರತಿಭಟನೆಯನ್ನು ನಡೆಸಿದರು.
ಭಾರತೀಯ ಪ್ರಸಾರ ಸೇವೆಯ 810 ಉನ್ನತ ಹುದ್ದೆಗಳಿದ್ದು, ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಜನ ಸಿಬ್ಬಂದಿಯವರು ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ ಎಂದು ಆಕಾಶವಾಣಿ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿಯ ಸಂಯೋಜಕ ಎಸ್. ಬಸವರಾಜ ತಮ್ಮ ಭಾಷಣದಲ್ಲಿ ತಿಳಿಸಿದರು.

ಮುಂದುವರೆದು ಸರಕಾರದ ನೇರ ಸುಪರ್ದಿಯಲ್ಲಿರುವ ಆಕಾಶವಾಣಿ ಮತ್ತು ದೂರದರ್ಶನದ ಸಿಬ್ಬಂದಿ ಇಂದು ಹೊರಳು ಹಾದಿಯಲ್ಲಿದ್ದಾರೆ. ಅವರ ಗೋಳನ್ನು ಯಾರೂ ಕೇಳುವವರಿಲ್ಲ. ನಿಗದಿತ ಸಮಯದಲ್ಲಿ ಎಲ್ಲಾ ಹುದ್ದೆಗಳನ್ನು ತುಂಬುವ ಕೆಲಸ ಪ್ರಸಾರ ಭಾರತಿ ಮಾಡಬೇಕು ಎಂದು ಒತ್ತಿ ಹೇಳಿದರು.

ಪ್ರತಿಭಟನೆಯಲ್ಲಿ ನಿಲಯದ ವಿನೋದಕುಮಾರ, ಅಶೋಕ, ಎಸ್.ಎಸ್. ಚೋಳಿನ ದೂರದರ್ಶನ ಕೇಂದ್ರದ ಹರೀಶ, ಪ್ರದೀಪ, ಮೋಹನಕುಮಾರ್, ಕಾರ್ಯಕ್ರಮ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.












Click it and Unblock the Notifications