'ಕರ್ನಾಟಕದ ಹೆಮ್ಮೆ, ಕಾಂಗ್ರೆಸ್ ಮತ್ತೊಮ್ಮೆ' ಕಾಂಗ್ರೆಸ್ ಘೋಷವಾಕ್ಯ

ಬೆಂಗಳೂರು, ಏಪ್ರಿಲ್ 24: 'ಕರ್ನಾಟಕದ ಹೆಮ್ಮೆ, ಕಾಂಗ್ರೆಸ್‌ ಮತ್ತೊಮ್ಮೆ' ಎಂಬುದು ಈ ಬಾರಿಯ ಚುನಾವಣೆಗೆ ಕಾಂಗ್ರೆಸ್‌ನ ಘೋಷವಾಕ್ಯ ಆಗಿದೆ. ಘೋಷವಾಕ್ಯ ಮತ್ತು ಚುನಾವಣಾ ಲೋಗೊವನ್ನು ರಾಷ್ಟ್ರೀಯ ಕಾಂಗ್ರೆಸ್‌ ಮುಖ್ಯ ಕಾರ್ಯದರ್ಶಿ ರಂದೀಪ್ ಸುರ್ಜೇವಾಲಾ ಅವರು ಕೆಪಿಸಿಸಿ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಘೋಷವಾಕ್ಯ ಹಾಗೂ ಲೋಗೊ ಬಿಡುಗಡೆಗೆ ಮುನ್ನಾ ಕೆಪಿಸಿಸಿ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರವು 'ಬಳ್ಳಾರಿ ಗ್ಯಾಂಗ್' (ಜನಾರ್ಧನ ರೆಡ್ಡಿ, ಶ್ರೀರಾಮಯಲು)ಮ ಬೆಂಬಲಕ್ಕೆ ನಿಂತಿದೆ ಎಂದು ಆರೋಪಿಸಿದರು.

ಬಳ್ಳಾರಿಯಲ್ಲಿ ಬಿಜೆಪಿ ಸಚಿವರಿಂದ ನಡೆದ ಗಣಿ ಹಗರಣ ಭೂಮಿ ಮೇಲೆ ನಡೆದಿರುವ ಅತಿ ದೊಡ್ಡ ಗಣಿ ಹಗರಣ ಆಗಿದೆ ಎಂದ ಅವರು, ಹಗರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಮಾಧ್ಯಮದವರಿಗೆ ಓದಿ ಹೇಳಿದರು.

AICC spokesperson Randeep Surjewala slams BJP over mining case

ಸಿಬಿಐ ವರದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ರಂದೀಪ್ ಅವರು, ಸಿಬಿಐ ಯು ಕೇಂದ್ರದ ಬಿಜೆಪಿ ಸರ್ಕಾರದ ಅಣಿತಿಯಂತೆ ತನಿಖೆ ಮಾಡಿ, ಜನಾರ್ದನ ರೆಡ್ಡಿ ಪರ ವರದಿ ನೀಡಿದೆ. ಸಿಬಿಐಯು ಕೇಂದ್ರದ ಪ್ರಭಾವಕ್ಕೆ ಸಿಲುಕಿ ಜನಾರ್ದನ ರೆಡ್ಡಿ ಮೇಲೆ ಕ್ರಿಮಿನಲ್ ಪ್ರಕರಣವನ್ನು ಕೈಬಿಟ್ಟಿದೆ ಎಂದು ಅವರು ಆರೋಪಿಸಿದರು.

ಸಿಬಿಐ ಸರಿಯಾಗಿ ತನಿಖೆ ಮಾಡದೇ ಬೇಕೆಂದೇ ಪ್ರಕರಣವನ್ನು ದುರ್ಬಲಗೊಳಿಸಿ ನ್ಯಾಯಾಲಯಕ್ಕೆ ವರದಿ ನಿಡಿದೆ ಎಂದು ಆರೋಪಿಸಿದ ರಂದೀಪ್ ಸುರ್ಜೇವಾಲಾ ಅವರು, ಕೇಂದ್ರದ ಬಿಜೆಪಿ ಸರ್ಕಾರವು ಸಿಬಿಐಯನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ ಎಂದರು.

ಈ ಸಮಯ ಎಐಸಿಸಿ ಉಪಾಧ್ಯಕ್ಷ ಕೆ.ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+