ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿದ್ದ ಮರಗಳ ತೆರವಿಗೆ ಬಿಬಿಎಂಪಿ ಸಿಬ್ಬಂದಿಗಳ ಹರಸಾಹಸ

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಎರಡು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಉರುಳಿದ್ದ 150ಕ್ಕೂ ಹೆಚ್ಚಿನ ಮರ ಹಾಗೂ ರೆಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸದೆ ನಿರ್ಲಕ್ಷ್ಯ ವಹಿಸಿರುವುದರಿಂದ ಸವಾರರು ಸಮಸ್ಯೆ ಅನುಭವಿಸುವಂತೆಗಿದೆ.

ಮಂಗಳವಾರ, ಬುಧವಾರ ಸುರಿದ ಗಾಳಿ ಸಹಿತ ಮಳೆಗೆ ಬೆಂಗಳೂರಿನ ಕೇಂದ್ರ ಭಾಗದಲ್ಲಿಯೇ 100ಕಕೂ ಹೆಚ್ಚಿನ ಮರ ಹಾಗೂ ರೆಂಬೆಗಳು ಉರುಳಿವೆ. ಕೋರಮಂಗಲ, ಸ್ಯಾಂಕಿ ಕೆರೆ, ಎಚ್‌ಆರ್ ಬಿಆರ್ ಬಡಾವಣೆ, ವೆಸ್ಟ್ ಆಫ್ ಕಾರ್ಡ್ ರೋಡ್, ಬಸವೇಶ್ವರನಗರ, ಸರ್ಕಲ್ ಮಾರಮ್ಮ ವೃತ್ತ, ಯಶವಂತಪುರ, ಜಯನಗರ, ಕತ್ತರಿಗುಪ್ಪೆ ಸೇರಿ ಹಲವು ಭಾಗಗಳಲ್ಲಿ ಉರುಳಿರುವ ಮರಗಳ ಕೊಂಬೆಗಳು ವಿಲೇವಾರಿಯಾಗಿಲ್ಲ.

ಬೆಂಗಳೂರಿನಲ್ಲಿ ಭಾರಿ ಮಳೆ: ಧರೆಗುರುಳಿದ ಮರ, ಎಲೆಕ್ಟ್ರಿಕ್ ಕಂಬಗಳು ಬೆಂಗಳೂರಿನಲ್ಲಿ ಭಾರಿ ಮಳೆ: ಧರೆಗುರುಳಿದ ಮರ, ಎಲೆಕ್ಟ್ರಿಕ್ ಕಂಬಗಳು

ಗುರುವಾರ ಸಂಜೆಯೂ ಮಲ್ಲೇಶ್ವರ 7ನೇ ಅಡ್ಡರಸ್ತೆಯಲ್ಲಿ ಬೃಹತ್ ಮರ ಉರುಳಿದ್ದು, ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಎರಡು ದಿನಗಳಿಂದ ನಿರಂತರವಾಗಿ ಮರಗಳು ಉರುಳಿದ ದೂರುಗಳು ಬರುತ್ತಿರುವುದರಿಂದ ಬಿಬಿಎಂಪಿ ಅರಣ್ಯ ಘಟಕ ಹೈರಾಣಾಗಿದೆ.

After rain effect, BBMP fails to remove trees in road!

ಕಳೆದ ಎರಡು ದಿನಗಳಲ್ಲಿ 40ಕ್ಕೂ ಹೆಚ್ಚು ಬೃಹದಾಕಾರದ ಮರಗಳು ಉರುಳಿ 15 ವಾಹನಗಳು ಜಖಂಗೊಂಡಿವೆ. ಇನ್ನೂ ನಗರದಲ್ಲಿ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸಿಬ್ಬಂದಿಗಳು ಮುನ್ಸೂಚನೆ ನೀಡಿದ್ದಾರೆ.

English summary
After rain fall with heavy wind in Bangalore on last Wednesday and Thursday many trees were fell down in various places. But BBMP has failed to remove from the roads even after 48 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X