ಬಿಬಿಎಂಪಿ: ಕೆ.ಆರ್.ವೃತ್ತದ ಅಂಡರ್‌ಪಾಸ್ ದುರಂತದ ಬಳಿಕವೂ ಏನು ಬದಲಾಗಿಲ್ಲ
ಬೆಂಗಳೂರು, ಅಕ್ಟೋಬರ್ 17: ಸಂಚಾರ ದಟ್ಟಣೆ, ಕಸ ವಿಲೇವಾರಿ, ಮಳೆ ಕುರಿತು ಸಮಸ್ಯೆಗಳಿಗೆ ಸುದ್ದಿಯಾಗುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಐದು ತಿಂಗಳ ಹಿಂದೆ ಮಳೆ ನೀರಿಗೆ ಯುವತಿ ಸಿಲುಕಿ ಮೃತಪಟ್ಟಿದ್ದ ಘಟನೆಯಿಂದ ಭಾರೀ ಸುದ್ದಿ ಆಗಿತ್ತು. ಕಾರಣ ಬಿಬಿಎಂಪಿ ನಿರ್ವಹಣೆಯ ವೈಫಲ್ಯದಿಂದ ನಗರದ ಕೆ.ಆರ್ ವೃತ್ತದಲ್ಲಿ ರಸ್ತೆ ಅಂಡರ್ ಪಾಸ್‌ನಲ್ಲಿ ಕಾರು ಸಿಲುಕಿ ಯುವತಿಯೊಬ್ಬರು (22) ಮೃತಪಟ್ಟಿದ್ದರು. ಆದರೆ ಈ ದುರಂತರದ ಬಳಿವೂ ಯಾವುದೂ ಬದಲಾಗಿಲ್ಲ. ಪಾಲಿಕೆ ಕೈಗೊಂಡ ಯಾವ ಕನಿಷ್ಠ ಕ್ರಮಗಳು ಪೂರ್ಣಗೊಂಡಿಲ್ಲ.
ಸುಮಾರು ಐದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೆಲವೇ ನಿಮಿಗಳಲ್ಲಿ ಸುರಿದ ಭಾರಿ ಮಳೆಗೆ ಕೆ.ಆರ್.ವೃತ್ತದಲ್ಲಿನ ರಸ್ತೆ ಅಂಡರ್‌ಪಾಸ್ ನಲ್ಲಿ ನೀರು ತುಂಬಿಕೊಂಡಿತ್ತು. ಅಂಧ್ರಪ್ರದೇಶ ಮೂಲದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಯುವತಿ ಇದ್ದ ಕಾರು ಇದೇ ಅಂಡರ್‌ಪಾಸ್‌ನಲ್ಲಿ ಸಿಲುಕಿತ್ತು.

ಕಾರಿನೋಳಗೆ ನೀರು ತುಂಬಿದ ಪರಿಣಾಮ ಯುವತಿ ಬಿಟ್ಟು ಬೇರೆಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದರು. ಆದರೆ ಯುವತಿ ಉಸಿರುಚೆಲ್ಲಿದರಯ. ಈ ದುರಂತದಿದ್ದಾಗಿ ಪಾಲಿಕೆ ಆಡಳಿತ ವೈಖರಿ ಮೇಲೆ ಹಲವು ಅನುಮಾನ ಸೃಷ್ಟಿಸಿತ್ತು. ಘಟನೆ ಸಾಕಷ್ಟು ಚರ್ಚೆ ಆಗಿತ್ತು ಎಂದು TOI ವರದಿ ಮಾಡಿದೆ.
71 ಅಂಡರ್‌ಪಾಸ್ ತಪಾಸಣೆ, ಕೆಲಸ ಆಗಿದ್ದೆಷ್ಟು?
ಇದಾದ ಬಳಿಕ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ಬಿಬಿಎಂಪಿ 71 ಅಂಡರ್‌ಪಾಸ್ ಪರಿಶೀಲನೆ ಮಾಡಿತು. ಆದರೆ ಐದು ತಿಂಗಳಾದರೂ ಯಾವುದು ಬದಲಾಗದೇ ಹಾಗೇಯೇ ಇದೆ. ಪಾಲಿಕೆಯ ನಿರ್ಲಕ್ಷ್ ಮತ್ತೆ ಮುಂದುವರಿದಿದೆ.
71 ಅಂಡರ್‌ಪಾಸ್‌ಗಳಲ್ಲಿ 03 ಅಂಡರ್ ಪಾಸ್‌ಗಳಿಗೆ ಮಳೆ ನೀರು ನುಗ್ಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿ ಎರಡು ಕೆಳ ಸೇತುವೆಗಳ ಕೆಲಸ ಆರಂಭಿಸಲಾಯಿತು. ಕೆ.ಆರ್ ಸರ್ಕಲ್ ಮತ್ತು ಲೆ ಮೆರಿಡಿಯನ್ ಬಳಿ, ಒಂದು ತಿಂಗಳ ಗಡುವು ನಿಗದಿ ಮಾಡಿದ್ದರೂ ಸಹಿತಿ ಈವರೆಗೆ ಅದು ಪೂರ್ಣಗೊಂಡಿಲ್ಲ.
ಶೀಘ್ರವೇ ಕೆಲಸ ಪೂರ್ಣದ ಭರವಸೆ
ಇನ್ನು ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯಿಂದ ಸ್ಯಾಂಕಿ ರಸ್ತೆಗೆ ಸಂಪರ್ಕ ಸಾಧಿಸುವ ಲೆ ಮೆರಿಡಿಯನ್ ರಸ್ತೆ ಅಂಡರ್‌ಪಾಸ್ ಪ್ರವಾಹ ತಡೆಗೆ ಮೇಲ್ಛಾವಣಿ ಸರಿಪಡಿಸಬೇಕಿತ್ತು. ಕನ್ನಿಂಗ್‌ಹ್ಯಾಮ್ ರಸ್ತೆ ಬದಿಯಲ್ಲಿ ಮೇಲ್ಛಾವಣಿಯ ಕವರ್ ಶೀಟ್‌ಗಳನ್ನು ಸರಿಪಡಿಸಲಾಗಿದೆ. ಸ್ಯಾಂಕಿ ರಸ್ತೆ ಬದಿಯಲ್ಲಿ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಹೇಳಿದರು.

ಮೂಲಗಳ ಪ್ರಕಾರ, ಲೆ ಮೆರಿಡಿಯನ್ ಅಂಡರ್‌ಪಾಸ್‌ನಲ್ಲಿನ ಮಳೆ ನೀರು ಪ್ರವೇಶಿಸದಂತೆ ತಡೆಯಲು ಮೇಲಕ್ಕೆ ಮತ್ತು ಕೆಳಕ್ಕೆ ಎರಡೂ ರಾಂಪ್‌ಗಳಲ್ಲಿ ಕಲಾಯಿ ಬಣ್ಣದ ಹಾಳೆಗಳನ್ನು ಬಳಸಿ ಛಾವಣಿ ಸಿದ್ಧಪಡಿಸಲಾಗಿದೆ. ನೀರು ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಹಂಪ್ ನಿರ್ಮಿಸಲು ಯೋಚಿಸಿದೆ. ಹಗಲಿನಲ್ಲಿ ಬೆಳಕು ಬರಲು ಪೈಬರ್ ಸೀಟ್ ಅಳಡಿಸಿ, ಎಕ್ಸಾಸ್ಟ್ ಫ್ಯಾನ್ ಅಳವಡಿಸಲಾಗುತ್ತದೆ.
ಬಿಬಿಎಂಪಿ ಅಧಿಕಾರಿಗಳ ವರದಿಯಲ್ಲಿ ಏನಿದೆ
ಈ ಅಂಡರ್‌ಪಾಸ್ ವಿಚಾರವಾಗಿ ಪಾಲಿಕೆ ಅಧಿಕಾರಿಗಳ ವರದಿಯಲ್ಲಿ ಈ ಅಂಡರ್‌ಪಾಸ್‌ನಲ್ಲಿ ಎರಡು ಡ್ರೈನ್‌ಗಳನ್ನು ಹೊಂದಿವೆ. ಅವುಗಳು ಯಾವುದೇ ಮಳೆನೀರು ಜಾಲಕ್ಕೆ ಸಂಪರ್ಕ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಎರಡೂ ಚರಂಡಿಗಳನ್ನು ಮುಚ್ಚಲಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ.
ಕಳೆದ ಮೂರು ವರ್ಷಗಳಿಂದ, ಅಂಡರ್‌ಪಾಸ್‌ನಿಂದ ನೀರನ್ನು ಪಂಪ್ ಮಾಡುವ ತಾತ್ಕಾಲಿಕ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ನಡೆಯುತ್ತಿರುವ ಪುನರಾಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳು ಇವೆ.
ಇನ್ನೂ ದುರಂತೆ ನಡೆದ ಕೆ.ಆರ್.ವೃತ್ತದಲ್ಲಿ ಬಿಬಿಎಂಪಿಯು ಅಂಡರ್‌ಪಾಸ್‌ನ ಮೇಲೆ ಮತ್ತು ಡೌನ್ ರ್ಯಾಂಪ್‌ಗಳಲ್ಲಿ ಹೊಸ ಚರಂಡಿ ನಿರ್ಮಾಣ ಮಾಡಲಿದೆ. ಅಂಡರ್‌ಪಾಸ್‌ಗೆ ನೀರು ಹರಿದುಬರದಂತೆ ತಡೆಯಲು ಮತ್ತು ಮಳೆ ನೀರು ಸರಾಗವಾಗಿ ಹರಿದು ಹೋಗಲು ಎರಡು ಚೇಂಬರ್ ನಿರ್ಮಿಸಲಾಗಿದೆ. ಕೆಲವು ಕೆಲಸಗಳು ಇನ್ನೂ ಇಲ್ಲಿ ಬಾಕಿ ಇದೆ.
-
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ












Click it and Unblock the Notifications