ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

4 ದಶಕದ ನಂತರ ಭೂಸ್ವಾಧೀನಕ್ಕೆ ಬಿಡಿಎಗೆ ಅನುಮತಿ ನೀಡಿದ ಸುಪ್ರೀಂ

|
Google Oneindia Kannada News

ಬೆಂಗಳೂರು ಜುಲೈ 27: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಒಟ್ಟು ಸುಮಾರು 42ವರ್ಷದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನ ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅನುಮತಿ ದೊರೆತಿದೆ.

ಹೌದು ಕಳೆದ 42ವರ್ಷಗಳಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಗರದ ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ಬಾಣಸವಾಡಿ ಮುಖ್ಯರಸ್ತೆಯ್ಲಲಿರುವ ಸುಮಾರು 70 ಕೋಟಿ ರೂಪಾಯಿ ಮೌಲ್ಯದ 3ಎಕರೆ 23 ಗುಂಟೆ ಪ್ರದೇಶ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿತ್ತು. ಆದರೆ ಆ ಭೂಮಿ ಮಾಲೀಕರು ಜಾಗ ಬಿಟ್ಟುಕೊಡಲು ನಿರಾಕರಿಸಿದ್ದರಿಂದಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 42 ವರ್ಷದಿಂದ ಕಾನೂನು ಹೋರಾಟ ನಡೆಸಿತ್ತು. ಪರಿಣಾಮ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ನಾಲ್ಕು ದಶಕಗಳೇ ಕಳೆದಿದ್ದವು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ 'ಭುವನೇಶ್ವರಿ' ಕಂಚಿನ ಪ್ರತಿಮೆ: ಎಲ್ಲಿ ಸ್ಥಾಪನೆ?ಬೆಂಗಳೂರಿನಲ್ಲಿ ಮೊದಲ ಬಾರಿಗೆ 'ಭುವನೇಶ್ವರಿ' ಕಂಚಿನ ಪ್ರತಿಮೆ: ಎಲ್ಲಿ ಸ್ಥಾಪನೆ?

ನಿರಂತರ ಹೋರಾಟದ ಫಲವಾಗಿ ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಬಳಿಕ ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುಮತಿ ನೀಡಿದೆ ಆದೇಶ ಹೊರಡಿಸಿದೆ.

ಸುಪ್ರೀಂ ತೀರ್ಪು ಸ್ವಾಗತಿಸಿದ ಬಿಡಿಎ ಅಧಿಕಾರಿ

ಸುಪ್ರೀಂ ತೀರ್ಪು ಸ್ವಾಗತಿಸಿದ ಬಿಡಿಎ ಅಧಿಕಾರಿ

ಸುಪ್ರೀಂ ಕೋರ್ಟ್‌ನಿಂದ ಬಿಡಿಎ ಪರ ತೀರ್ಪು ಬರುತ್ತಿದ್ದಂತೆ ಬಿಡಿಎ ಉತ್ತರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಕುಮಾರ್ ಅವರು ನ್ಯಾಯಾಲಯದ ಆದೇಶ ಸ್ವಾಗತಿಸಿದ್ದಾರೆ. ಇದೊಂದು ಮಹತ್ವದ ತೀರ್ಪು. ಈ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಚ್‌ಆರ್‌ಬಿಆರ್‌ ಪ್ರದೇಶದಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಿತ್ತು. ಕೆಲವು ವ್ಯಾಜ್ಯಗಳು ತಲೆದೂರಿದ್ದರಿಂದ ಈ ಪ್ರದೇಶದಲ್ಲಿ ಭೂಮಿ ಖರೀದಿಸುವುದು ಆಗಿರಲಿಲ್ಲ.

ಬೆಂಗಳೂರು: ರಸ್ತೆಗಳ ನಿರ್ವಹಣೆಗಾಗಿ 75 ಕಸ ಸ್ವಚ್ಚ ಯಂತ್ರ ಖರೀದಿಗೆ ಮುಂದಾದ ಬಿಬಿಎಂಪಿಬೆಂಗಳೂರು: ರಸ್ತೆಗಳ ನಿರ್ವಹಣೆಗಾಗಿ 75 ಕಸ ಸ್ವಚ್ಚ ಯಂತ್ರ ಖರೀದಿಗೆ ಮುಂದಾದ ಬಿಬಿಎಂಪಿ

ಬಿಡಿಎ ಅಧಿಸೂಚನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಭೂ ಮಾಲೀಕರು

ಬಿಡಿಎ ಅಧಿಸೂಚನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಭೂ ಮಾಲೀಕರು

ಬೆಂಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1977ರಲ್ಲಿ ಎಚ್‌ಆರ್‌ಬಿಆರ್‌ ಬಡಾವಣೆಯ ನಿವಾಸಿ ನಾರಾಯಣ ರೆಡ್ಡಿ ಎಂಬುವವರಿಗೆ ಸೇರಿರುವ ಈ ಭೂಮಿಯ ಸರ್ವೆ ನಂ.345ರಲ್ಲಿನ ಆಸ್ತಿಯ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹಾಗೂ 1980 ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ವಿರೋಧಿಸಿದ್ದ ನಾರಾಯಣ ರೆಡ್ಡಿ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು ಎಂದು ಪ್ರಕರಣ ಹಿನ್ನೆಲೆ ಕುರಿತು ಬಿಡಿಎ ಕುಮಾರ್ ವಿವರಿಸಿದರು.

 ಕ್ರೀಡಾಪಟು, ಪ್ರಶಸ್ತಿ ವಿಜೇತರಿಗೆ ಸೈಟ್ ಹಂಚಿಕೆ?

ಕ್ರೀಡಾಪಟು, ಪ್ರಶಸ್ತಿ ವಿಜೇತರಿಗೆ ಸೈಟ್ ಹಂಚಿಕೆ?

ಈ ಕುರಿತು ಭೂಮಿ ಮಾಲೀಕರನ್ನು ಕೇಳಿದರೆ ಅವರು ಬಿಟ್ಟುಕೊಡಲು ತಯಾರಿರಲಿಲ್ಲ. ಇಂತಹ ವ್ಯಾಜ್ಯಗಳು ಪರಿಹಾರ ಕಾಣದ ಹಿನ್ನೆಲೆ 1980 ರಿಂದಲೇ ಕಾನೂನು ಹೋರಾಟ ಆರಂಭವಾಯಿತು. ಕೊನೆಗೂ ಎಚ್‌ಆರ್‌ಬಿಆರ್‌ ಬಡಾವಣೆಯಲ್ಲಿನ ಉದ್ದೇಶಿತ ಭೂಮಿ ನಮ್ಮ ವಶಕ್ಕೆ ಬರುತ್ತಿದೆ. ಒಟ್ಟು 70 ಕೋಟಿ ರೂಪಾಯಿ ಮೌಲ್ಯದ 3ಎಕರೆ 23 ಗುಂಟೆ ಪ್ರದೇಶ ಬಿಡಿಎ 40x60 ಚದರ ಅಡಿ ವಿಸ್ತೀರ್ಣದಲ್ಲಿ 30ಕ್ಕೂ ಹೆಚ್ಚು ನಿವೇಶನ/ಸೈಟ್‌ಗಳನ್ನು ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು.

ವಶಕ್ಕೆ ಪಡೆದ ಪ್ರದೇಶದಲ್ಲಿ ಸೈಟ್ ನಿರ್ಮಾಣ ಮಾಡಿ ಕಳೆದ ಒಂದು ದಶಕದಿಂದ ಕಾಯುತ್ತಿರುವ ಕ್ರೀಡಾಪಟುಗಳು ಅಥವಾ ಪ್ರಶಸ್ತಿ ವಿಜೇತರಂತಹ ವಿಶೇಷ ವರ್ಗದವರಿಗೆ ಹಂಚಿಕೆ ಮಾಡುವ ಉದ್ದೇಶ ಬಿಡಿಎ ಹೊಂದಿದೆ ಎಂದು ಅವರು ತಿಳಿಸಿದರು. ಈ ಸೈಟ್‌ಗಳು ಸಮಾಜಕ್ಕಾಗಿ ದುಡಿದ, ವಿಶೇಷ ಕ್ಷೇತ್ರದಲ್ಲಿ ಕೆಲಸ ಮಾಡಿದ ಸಾಧರಿಕಗೆ ಹಂಚಿಕೆಗೆ ಬಳಕೆ ಮಾಡುವ ಚಿಂತನೆಯಲ್ಲಿದ್ದೇವೆ ಎಂದರು.

ಅಲ್ಲದೇ ಡಿನೋಟಿಫಿಕೇಶನ್ ನಿಂದಾಗಿ ಈಗಾಗಲೇ ಅರ್ಕಾವತಿ ಬಡಾವಣೆಯಲ್ಲಿ ಸ್ವಂತ ಜಾಗ, ಖಾಲಿ ಸೈಟ್‌ಗಳನ್ನು ಕಳೆದುಕೊಂಡ ನಾಗರಿಕರಿಗೆ ಪರ್ಯಾಯವಾಗಿ ಇಲ್ಲಿನ ಸೈಟುಗಳನ್ನು ಒದಗಿಸಲು ಒಂದು ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು.

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್

ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಜಮೀನಿನಲ್ಲಿ 3.8ಎಕರೆ ಪ್ರದೇಶವನ್ನು ಡಿನೋಟಿಪೈ ಮಾಡಿ ಅಕ್ರ ಎಸಗಲಾಗಿತ್ತು. ಈ ಕುರಿತು ಆರೋಪವನ್ನು 2007ರಿಂದಲೂ ಎಚ್‌.ಡಿ.ಕುಮಾರಸ್ವಾಮಿ ಎದುರಿಸುತ್ತಿದ್ದರು. ನಂತರ ನ್ಯಾಯಾಲಯ ಪ್ರಕರಣದಿಂದ ಅವರನ್ನು ಕೈಬಿಡುವ ಮನವಿ ಪುರಸ್ಕರಿಸಿತ್ತು. ಅಲ್ಲದೇ ಪ್ರಕರಣ ಕುರಿತು ಸುಧೀರ್ಘ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಅವರು ವರದಿ ಸಲ್ಲಿಸಿದ್ದರು. ಈ ಅಕ್ರಮದಲ್ಲಿ ಅಲ್ಲಿನ ಸಾಕಷ್ಟು ಮಂದಿ ಸೈಟ್ ಕಳೆದುಕೊಂಡಿದ್ದರು. ಇದೀಗ ಅವರು ಬಿಡಿಎ ಪರ್ಯಾಯ ಸೈಟ್ ಕೊಡುತ್ತದೆ ಎಂದು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

English summary
After 42 years Supreme Court has allowed Bengaluru Development Authority (BDA) for land acquisition in HRBR layout at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X