Aero India 2023:ಯಲಹಂಕದಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಮಾಂಸ ಮಾರಾಟ ನಿಷೇಧ
ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ 'ಏರೋ ಇಂಡಿಯಾ 2023' ಪ್ರದರ್ಶನ ನಡೆಯಲಿದೆ. ಈ ಸಂಬಂಧ ಬಿಬಿಎಂಪಿ ಮಾಂಸ ಮಾರಾಟ ನಿಷೇಧಿಸಿ ಆದೇಶಿಸಿದೆ. ಯಾವ ಭಾಗದಲ್ಲಿ ಈ ಆದೇಶ ಅನ್ವಯವಾಗಲಿದೆ? ನಿಯಮ ಉಲ್ಲಂಘಿಸಿದರೆ ಏನು ಕ್ರಮ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು, ಜನವರಿ 27: ಬೆಂಗಳೂರಿನ ಯಲಹಂಕ ವಾಯು ನೆಲೆಯಲ್ಲಿ 'ಏರೋ ಇಂಡಿಯಾ 2023' ಪ್ರದರ್ಶನ ನಡೆಯಲಿರುವ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಈ ಭಾಗದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಕೇಂದ್ರ ರಕ್ಷಣಾ ಸಚಿವಾಲಯ ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಮುಂದಿನ ತಿಂಗಳು ಫೆಬ್ರುವರಿ 13ರಿಂದ ಫೆಬ್ರುವರಿ 17ರವರೆಗೆ 'ಅಂತಾರಾಷ್ಟ್ರೀಯ ಏರೋ ಇಂಡಿಯಾ 2023" (ವೈಮಾನಿಕ ಪ್ರದರ್ಶನ) ಹಮ್ಮಿಕೊಂಡಿದೆ. ಇದರ ಅಂಗವಾಗಿ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಎಲ್ಲ ಮಾಂಸದ ಮಳಿಗೆಗಳಲ್ಲಿ ಜನವರಿ 30 ರಿಂದಲೇ ರಿಂದ ಫೆಬ್ರುವರಿ 20ರವರೆಗೆ ಯಲಹಂಕ ವಲಯದ ವ್ಯಾಪ್ತಿಯಲ್ಲಿರುವ ಎಲ್ಲ ತರಹದ ಮಾಂಸ ಮಾರಾಟ ನಿಷೇಧಿಸಲಾಗಿದೆ. ಇಷ್ಟೇ ಅಲ್ಲದೇ ಹೋಟೇಲ್ ಹಾಗೂ ರೆಸ್ಟೋರೆಂಟ್/ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನೂ ಸಹ ಬಿಬಿಎಂಫಿ ನಿಷೇಧಿಸಿದೆ.
ಬಿಬಿಎಂಪಿ ನಿಗದಿಪಡಿಸಿದ ಅವಧಿಯಲ್ಲಿ ಮಾಂಸ ಮಾರಾಟ, ಮಾಂಸಾಹಾರ ತಯಾರಿಸಿ ನಿಯಮ ಉಲ್ಲಂಘಿಸಿದ್ದೇ ಆದಲ್ಲಿ 'ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಪ್ಟ್ ರೂಲ್ಸ್ 1937ರ ರೂಲ್ 91' ಅಡಿ ಕ್ರಮ ಕೈಗೊಳ್ಳುವುದಾಗಿ ಆದೇಶದಲ್ಲಿ ಯಲಹಂಕ ವಲಯ ಜಂಟಿ ಆಯುಕ್ತೆ ಪೂರ್ಣಿಮಾ ತಿಳಿಸಿದ್ದಾರೆ.

23 ದೇಶಗಳ ಪ್ರಾತಿನಿಧ್ಯದಡಿ ಏರ್ ಶೋ: ಪ್ರಧಾನಿ ಚಾಲನೆ
ಕೊರೊನಾ ನಂತರ ಯಲಹಂಕ ವಾಯುನೆಲೆಯಲ್ಲಿ ವಾರ್ಷಿಕ ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಇದು 14ನೇ ಆವೃತ್ತಿ ಏರ್ ಶೋ ಆಗಿದೆ. ಪ್ರದರ್ಶನದಲ್ಲಿ ಸುಮಾರು 557 ಭಾರತೀಯ ಪ್ರದರ್ಶಕರು ಹಾಗೂ 40ಕ್ಕೂ ಹೆಚ್ಚು ವಿದೇಶಿ ಪ್ರದರ್ಶಕರು ಭಾಗವಹಿಸುವುದು ಖಚಿತವಾಗಿದೆ. ಒಟ್ಟಾರೆ 23 ದೇಶಗಳ ಪ್ರಾತಿನಿಧ್ಯದಡಿ ಕಾರ್ಯಕ್ರಮ ನಡೆಯಲಿದೆ.

ಏರ್ ಇಂಡಿಯಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಪ್ರದರ್ಶನದಲ್ಲಿ ವೈಮಾನಿಕ ಉದ್ಯಮ ಕುರಿತ ವಿಚಾರ ವಿನಿಮಯಕ್ಕೆ ಇದೊಂದು ಉತ್ತಮ ವೇದಿಕೆ ಆಗಿದೆ. ಯಲಹಂಕ ವಲಯವ್ಯಾಪ್ತಿಯಲ್ಲಿ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಕಳೆದ1996 ರಿಂದ ವೈಮಾನಿಕ ಪ್ರದರ್ಶನ ನಡೆಸಿಕೊಂಡು ಬರಲಾಗಿದೆ.












Click it and Unblock the Notifications