ಏರೋ ಇಂಡಿಯಾ-2021: ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಮಾರ್ಗ ಬದಲು
ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ ಫೆ.3 ರಿಂದ ಆರಂಭವಾಗುವ ಏರೋ ಇಂಡಿಯಾ-2021ರ ಸಮಯದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲು ಈ ಕೆಳಕಂಡ ಪರ್ಯಾಯ ಮಾರ್ಗಗಳನ್ನು ಬಳಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. ವಾಹನ ಸವಾರರಿಗೆ ಫೆ.3ರ ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಇದು ಫೆ.5 ರವರೆಗೆ ಇದೆ ನಿಯಮ ಜಾರಿಯಲ್ಲಿರಲಿದೆ.
Recommended Video
ಬೆಂಗಳೂರು ಪಶ್ಚಿಮ ಮತ್ತು ಉತ್ತರ ಭಾಗದ ಕಡೆಯಿಂದ

(ಕೆಂಗೇರಿ, ವಿಜಯನಗರ, ಮೈಸೂರು ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ ಇತರೆ ಕಡೆಗಳಿಂದ)
ವಯಾ- ಗೊರಗುಂಟೆಪಾಳ್ಯ- ಬಿಇಎಲ್ ಜಂಕ್ಷನ್- ಎಡತಿರುವು- ಗಂಗಮ್ಮನಗುಡಿ ಸರ್ಕಲ್- ಎಂ.ಎಸ್ ಪಾಳ್ಯ-ಯಲಹಂಕ ಮದರ್ ಡೈರಿ ಜಂಕ್ಷನ್- ಮೇ| ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್- ಎಡತಿರುವು- ನಾಗೇನಹಳ್ಳಿ ಗೇಟ್- ಸಿಂಗನಾಯಕನಹಳ್ಳಿ- ರಾಜಾನುಕುಂಟೆ- ಬಲತಿರುವು- ಎಂ.ವಿ.ಐ.ಟಿ ಜಂಕ್ಷನ್- ಎಡತಿರುವು- ವಿದ್ಯಾನಗರ ಕ್ರಾಸ್- ಚಿಕ್ಕಜಾಲ- ಸಾದಹಳ್ಳಿ ಗೇಟ್- ಏರ್ ಪೋರ್ಟ್ ಟೋಲ್- 1ನೇ ಸರ್ಕಲ್- 2ನೇ ಸರ್ಕಲ್- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದ ಕಡೆಯಿಂದ

(ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಜಯನಗರ, ಜೆ.ಪಿ ನಗರ, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಗಾಂಧಿನಗರ, ಎಂ.ಜಿ ರಸ್ತೆ)
ವಯಾ- ಬಸವೇಶ್ವರ ಸರ್ಕಲ್- ಮೇಕ್ರಿ ಸರ್ಕಲ್- ಎಡತಿರುವು- ಸದಾಶಿವ ನಗರ ಪೊಲೀಸ್ ಠಾಣೆ- ಬಲತಿರುವು- ನ್ಯೂ ಬಿಇಎಲ್ ರಸ್ತೆ- ಕುವೆಂಪು ಸರ್ಕಲ್- ಬಲತಿರುವು- ಭದ್ರಪ್ಪ ಲೇಔಟ್- ಹೆಬ್ಬಾಳ್ ಸರ್ಕಲ್- ವೀರಣ್ಣ ಪಾಳ್ಯ- ನಾಗವಾರ ಜಂಕ್ಷನ್- ಎಡತಿರುವು- ಥಣಿಸಂದ್ರ ಮುಖ್ಯರಸ್ತೆ- ರೇವಾ ಕಾಲೇಜ್ ಜಂಕ್ಷನ್- ಬಲತಿರುವು- ಬಾಗಲೂರು ಮುಖ್ಯರಸ್ತೆ- ಬಾಗಲೂರು ಗುಂಡಪ್ಪ ಎಡತಿರುವು-ಬಾಗಲೂರು ಬಸ್ ನಿಲ್ದಾಣ- ಎಡತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ- ಮೈಲನಹಳ್ಳಿ ಕ್ರಾಸ್- ಎಡತಿರುವು- ಬೇಗೂರು ಬ್ಯಾಕ್ ಗೇಟ್- ಬಲತಿರುವು- 1ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ.
ಬೆಂಗಳೂರು ಪೂರ್ವ ವಿಭಾಗದ ಕಡೆಯಿಂದ

(ವರ್ತೂರು, ವೈಟ್ ಫೀಲ್ಡ್, ಕಾಡುಗೋಡಿ, ಕೆ.ಆರ್ ನಗರ, ಹಲಸೂರು, ಶಿವಾಜಿನಗರ, ಇಂದಿರಾ ನಗರ, ಬಾಣಸವಾಡಿ ಇತರೆ ಕಡೆಗಳಿಂದ)
ವಯಾ- ಟಿನ್ ಫ್ಯಾಕ್ಟರಿ- ರಾಮಮೂರ್ತಿ ನಗರ- ಹೆಣ್ಣೂರು ಕ್ರಾಸ್- ಹೆಣ್ಣೂರು ಮುಖ್ಯರಸ್ತೆ- ಭೈರತಿ ಕ್ರಾಸ್- ಹೊಸೂರು ಬಂಡೆ- ಚಾಗಲಹಟ್ಟಿ- ಬಾಗಲೂರು ಗುಂಡಪ್ಪ ಸರ್ಕಲ್- ಬಾಗಲೂರು ಬಸ್ ನಿಲ್ದಾಣ- ಬಂಡಿಕೊಡಿಗೇಹಳ್ಳಿ- ಮೈಲನಹಳ್ಳಿ- ಬೇಗೂರು ಬ್ಯಾಕ್ ಗೇಟ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಪ್ರಕಟಿಸಿದೆ.












Click it and Unblock the Notifications