ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೇಜಿ ಕ್ವೀನ್ ರಕ್ಷಿತಾ ಬಿಜೆಪಿಗೆ ಅಧಿಕೃತ ಸೇರ್ಪಡೆ

By Mahesh
|
Google Oneindia Kannada News

ಬೆಂಗಳೂರು, ಮಾ.20: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಕಾಣುವ ಗುರಿಯೊಂದಿಗೆ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ಗುರುವಾರ ಮಧ್ಯಾಹ್ನ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪಕ್ಷದಿಂದ ಪಕ್ಷಕ್ಕೆ ಹಾರುವ ಹೊಸ 'ಹಾಂಪಿಂಗ್/ಜಂಪಿಂಗ್ ಸ್ಟಾರ್' ಎಂದು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ರಕ್ಷಿತಾ ಅವರಿಗೆ ಯಾವುದೇ ಕ್ಷೇತ್ರದಿಂದ ಟಿಕೆಟ್ ಭರವಸೆ ಸಿಕ್ಕಿಲ್ಲ. [ರಕ್ಷಿತಾ ಬಿಎಸ್ಆರ್ ಕಾಂಗ್ರೆಸ್ ತೊರೆಯುತ್ತಿರುವುದೇತಕ್ಕೆ?]

ಬಿಎಸ್ ಶ್ರೀರಾಮುಲು ಸ್ಥಾಪಿತ ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಸೇರಿದ್ದ ರಕ್ಷಿತಾ ಅವರು ನಂತರ ಎಚ್ ಡಿ ದೇವೇಗೌಡರ ಜೆಡಿಎಸ್ ಸೇರಿದ್ದರು. ಯಡಿಯೂರಪ್ಪ ಅಂಡ್ ಪದ್ಮನಾಭ ಪ್ರಸನ್ನ ಅವರ ಕರ್ನಾಟಕ ಜನತಾ ಪಕ್ಷದಿಂದ ಕೂಡಾ ಟಿಕೆಟ್ ಆಫರ್ ಬಂದಿತ್ತು. [ಜೆಡಿಎಸ್ ಪಕ್ಷಕ್ಕೆ ನಟಿ ರಕ್ಷಿತಾ ಅಧಿಕೃತ ಸೇರ್ಪಡೆ]

ಕೊನೆಗೆ ಜೆಡಿಎಸ್ ನಲ್ಲಿ ಉಳಿದಿದ್ದ ರಕ್ಷಿತಾ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಶ್ರೀರಾಮುಲು ಹಾಗೂ ಯಡಿಯುರಪ್ಪ ಅವರು ಮತ್ತೆ ಬಿಜೆಪಿಗೆ ಮರಳುತ್ತಿದ್ದಂತೆ ರಕ್ಷಿತಾ ಕೂಡಾ ಹಿಂಬಾಲಕಿಯಾಗಿ ನಿಂತು ಕಮಲವನ್ನು ಕೈಯಲ್ಲಿ ಹಿಡಿದು ಮುಗುಳ್ನಗೆ ಬೀರಿದ್ದಾರೆ. ಮಾರ್ಚ್ 2012ರಲ್ಲಿ ಬಿಎಸ್ಸಾರ್ ಕಾಂಗ್ರೆಸ್, ಏಪ್ರಿಲ್ 2013ರಲ್ಲಿ ಜೆಡಿಎಸ್ ನಂತರ ಮಾರ್ಚ್ 2014ರಲ್ಲಿ ಬಿಜೆಪಿ ಸೇರುವ ಮೂಲಕ ರಕ್ಷಿತಾ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಕ್ಷಿತಾ ಅವರಿಗೆ ಬಿಜೆಪಿಯಲ್ಲಿ ಮುಕ್ತ ಸ್ವಾಗತ ಸಿಕ್ಕಿದೆ. ರಕ್ಷಿತಾ ಅವರ ಬಿಜೆಪಿ ಸೇರ್ಪಡೆ ಚಿತ್ರಗಳು ಮುಂದಿದೆ. [ಶ್ರೀರಾಮುಲು ಪಕ್ಷದಲ್ಲಿ 'ಸುಂಟರಗಾಳಿ' ಜೊತೆ 'ಮಳೆ'] ಚಿತ್ರಕೃಪೆ:(ಬಿಜೆಪಿ ಕರ್ನಾಟಕ)

ಗಣ್ಯರ ಉಪಸ್ಥಿತಿಯಲ್ಲಿ ರಕ್ಷಿತಾ ಸೇರ್ಪಡೆ

ಗಣ್ಯರ ಉಪಸ್ಥಿತಿಯಲ್ಲಿ ರಕ್ಷಿತಾ ಸೇರ್ಪಡೆ

ಗುರುವಾರ ರಕ್ಷಿತಾ ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರ ಪತಿ ನಟ, ನಿರ್ದೇಶಕ ಪ್ರೇಮ್, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 ನಾನು ಪಕ್ಷಾಂತರ ಪಕ್ಷಿಯಲ್ಲ: ರಕ್ಷಿತಾ

ನಾನು ಪಕ್ಷಾಂತರ ಪಕ್ಷಿಯಲ್ಲ: ರಕ್ಷಿತಾ

ಕಳೆದ ಎರಡು ವರ್ಷಗಳಲ್ಲಿ ಮೂರನೇ ಪಕ್ಷಕ್ಕೆ ಹಾರಿರುವ ರಕ್ಷಿತಾ ಅವರನ್ನು ಹಾಂಪಿಂಗ್ /ಜಂಪಿಂಗ್ ಸ್ಟಾರ್ ಎಂದು ಕರೆಯಬಾರದಂತೆ. ನಾನು ಪಕ್ಷಾಂತರ ಪಕ್ಷಿಯಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿಯಾಗಿದ್ದು ಅವರನ್ನು ಬೆಂಬಲಿಸಲು ಬಿಜೆಪಿ ಸೇರಿಕೊಂಡಿದ್ದೇನೆ ಎಂದು ರಕ್ಷಿತಾ ಹೇಳಿದ್ದಾರೆ.

ನಾನು ಪಕ್ಷಾಂತರ ಪಕ್ಷಿಯಲ್ಲ: ರಕ್ಷಿತಾ

ನಾನು ಪಕ್ಷಾಂತರ ಪಕ್ಷಿಯಲ್ಲ: ರಕ್ಷಿತಾ

ಕಳೆದ ಎರಡು ವರ್ಷಗಳಲ್ಲಿ ಮೂರನೇ ಪಕ್ಷಕ್ಕೆ ಹಾರಿರುವ ರಕ್ಷಿತಾ ಅವರನ್ನು ಹಾಂಪಿಂಗ್ /ಜಂಪಿಂಗ್ ಸ್ಟಾರ್ ಎಂದು ಕರೆಯಬಾರದಂತೆ. ನಾನು ಪಕ್ಷಾಂತರ ಪಕ್ಷಿಯಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿಯಾಗಿದ್ದು ಅವರನ್ನು ಬೆಂಬಲಿಸಲು ಬಿಜೆಪಿ ಸೇರಿಕೊಂಡಿದ್ದೇನೆ ಎಂದು ರಕ್ಷಿತಾ ಹೇಳಿದ್ದಾರೆ.

ಜೆಡಿಎಸ್ ತೊರೆಯಲು ಕಾರಣವೇನು?

ಜೆಡಿಎಸ್ ತೊರೆಯಲು ಕಾರಣವೇನು?

ಬಹುಶಃ ಮಂಡ್ಯ ಕ್ಷೇತ್ರದಿಂದ ಟಿಕೆಟ್ ನೀಡಿದ್ದರೆ ನಾನು ಜೆಡಿಎಸ್ ನಲ್ಲೇ ಇರುತ್ತಿದ್ದೆ ಎನ್ನಬಹುದು. ಆದರೆ, ನಂಬಿಸಿ ಮೋಸ ಮಾಡಿದರು. ಹಾಗಾಗಿ ನಾನು ಬಿಜೆಪಿ ಸೇರಬೇಕಾಯಿತು. ನಾನು ಯಾವುದೆ ಅಪೇಕ್ಷೆಯಿಲ್ಲದೆ ಬಿಜೆಪಿ ಸೇರುತ್ತಿದ್ದೇನೆ. ನಾನು ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗುತ್ತೇನೆ ಎಂದಿದ್ದಾರೆ.

English summary
Elections 2014 : Rakshita today joined BJP in Bangalore in the presence of party leaders Ananth Kumar and R. Ashok. Actress Rakshita was rejected a ticket to contest from the Mandya constituency in the upcoming Lok Sabha elections by JDS. She refused to be dubbed a party-hopper in view of her brief stint in the BSR Congress and the JD(S) in the last two years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X