Darshan Birthday: ನಟ ದರ್ಶನ್ ಶಕ್ತಿ ಕುರಿತು ನಟಿ ಸುಮಲತಾ ಅಂಬರೀಶ್ ಬೆಸ್ಟ್ ವಿಷ್
ಬೆಂಗಳೂರು, ಫೆಬ್ರವರಿ 16: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ನೇಹಿತರ, ಆಪ್ತರು, ಚಿತ್ರರಂಗ ಕಲಾವಿದರ ಶುಭಾಶಯ ಕೋರುತ್ತಿದ್ದಾರೆ. ಡಿ.ಬಾಸ್ ಅಭಿಮಾನಿಗಳು ಕಾಮನ್ ಡಿಪಿ ಮಾಡಿಕೊಂಡಿಕೊಂಡು ನೆಚ್ಚಿನ ನಟನಿಗೆ ಶುಭಾಷಯಗಳ ಸುರಿಮಳೆ ಸುರಿಸಿದ್ದಾರೆ. ದರ್ಶನ್ ಅನ್ನು ಎರಡನೇ ಮಗನೆಂದು ಭಾವಿಸುವ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಸಹ ವಿಶೇಷವಾಗಿ ಶುಭ ಹಾರೈಸಿದ್ದಾರೆ.
ನಟಿ ಸುಮಲತಾ ಅಂಬರೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ತೂಗುದೀಪ್ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ವಿಷ್ ಮಾಡಿದ್ದಾರೆ. ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸುಮಲತಾ ಅವರು ಮಾತ್ರವಲ್ಲದೇ ಅನೇಕ ನಟ, ನಟಿಯರು ವಿಷ್ ಮಾಡಿದ್ದಾರೆ.

''ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾಧನೆಯ ಶಿಖರವೇರುತ್ತಿರುವಾಗ ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ. ಸದಾ ಸಂತೋಷ ಹಾಗೂ ಯಶಸ್ಸಿನ ಜೀವನ ನಿನ್ನದಾಗಲಿ ಎಂದು ಶುಭ ಹಾರೈಸುವೆ...'' ಎಂದು ಸುಮಲತಾ ಅಂಬರೀಶ್ ಅವರು ಬರೆದುಕೊಂಡಿದ್ದಾರೆ.
ಈ ಮೂಲಕ ಸಿನಿರಂಗದಲ್ಲಿ ಇನ್ನಷ್ಟು ಸಾಧನೆಗಳು ಮಾಡುವಂತಾಗಲಿದೆ. ಆ ಹಾದಿಯಲ್ಲಿ ಎದುರಾಗುವ ಏನೆ ಕಷ್ಟಗಳನ್ನು ದಾಟಿ ಮುನ್ನುಗ್ಗುವ ಶಕ್ತಿ ನಿನ್ನಲಿದೆ ಎಂದು ಧೈರ್ಯ ಹೇಳಿದ್ದಾರೆ. ಈ ಹಿಂದೆಯು ನಟಿ ದರ್ಶನ್ ಜೈಲಿನಿಂದ ಬಿಡುಗಡೆ ಆದಾಗಲೂ ಪ್ರತಿಕ್ರಿಯಿಸಿದ್ದರು. ಸುಮಲತಾ ಅವರು ಯಾವ ಕಾರಣಕ್ಕೂ ದರ್ಶನ್ ಅನ್ನು ಬಿಟ್ಟುಕೊಟ್ಟಿರಲಿಲ್ಲ.
ದರ್ಶನ್ ಸಹ ಮಂಡ್ಯ ಲೋಕಸಭಾ ಚುನಾವಣೆ ವೇಳೆ (2019) ಪಕ್ಷೇತರವಾಗಿ ನಿಂತಿದ್ದ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದರು. ಅವರ ಪರ ಭರ್ಜರಿ ಪ್ರಚಾರ ಮಾಡಿದ್ದರು. ದಿ.ನಟ ಅಂಬರೀಶ್ ಕುಟುಂಬದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ನಟ ದರ್ಶನ್ ಆ ಮನೆಯ ಎಲ್ಲ ಖುಷಿ, ಕಷ್ಟದ ಸಂದರ್ಭದಲ್ಲೂ ಜೊತೆಯಾಗಿದ್ದ ನಿಂತಿದ್ದಾರೆ. ಚುನಾವಣೆ ವೇಳೆ ದರ್ಶನ್ ಜೊತೆಗೆ ನಟ ಯಶ್ ಅವರು ಸುಮಲತಾ ಅವರಿಗೆ ಸಾಥ್ ನೀಡಿದ್ದರು.
ನಟ ದರ್ಶನ್ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ. ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದಾರೆ. ದರ್ಶನ್ ಸೇರಿದಂತೆ ಪವಿತ್ರಾ ಗೌಡ ಹಾಗೂ ಇತರ ಎಲ್ಲ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಜೈಲಿನಿಂದ ಬಂದ ಬಳಿಕ ನಟಿ ರಕ್ಷಿತಾ ಪ್ರೇಮ್ ಸಹೋದರನ (ರಾಣಾ) ವಿವಾಹ ಕಾರ್ಯಕ್ರಮದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು.
ದರ್ಶನ್ ಜೈಲಿಗೆ ಹೋಗಿದ್ದು, ಇದು ಎರಡನೇ ಭಾರಿ. ಈ ಹಿಂದೆ ಪತ್ನಿ ಮೇಲಿನ ಹಲ್ಲೆ ಕೇಸ್ ಸಂಬಂಧ ಜೈಲು ಸೇರಿದ್ದರು. ನಂತರ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಹೊರ ಬಂದಿದ್ದಾರೆ. ಜೈಲಿನಿಂದ ಬಂದ ಬಳಿಕ ಅವರ ಮೊದಲ ಹುಟ್ಟುಹಬ್ಬ ಸಂಭ್ರಮ ಇದಾಗಿದೆ.












Click it and Unblock the Notifications