ಕನ್ನಡದಲ್ಲಿ ನಟಿ ಶಕೀಲಾ ಆತ್ಮಕಥೆ ರಿಲೀಸ್
ಬೆಂಗಳೂರು, ಆ.21: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 2ನಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಬಹುಭಾಷಾ ನಟಿ ಶಕೀಲಾ ಅವರ ಆತ್ಮಕಥೆ ನಗರದಲ್ಲಿ ಅನಾವರಣಗೊಳ್ಳಲಿದೆ. ಶಕೀಲಾ ಬರೆದಿರುವ ಆತ್ಮಕಥೆಯ ಕನ್ನಡ ಆವೃತ್ತಿಯನ್ನು ಸೀಮಾ ಬುಕ್ಸ್ ಹೊರ ತರುತ್ತಿದೆ.
ಹಲವಾರು ಯುವ ಮನಸ್ಸುಗಳ ನಿದ್ದೆಗೆಡಿಸಿದ ಮಾಜಿ ನೀಲಿ ಚಿತ್ರಗಳ ನಾಯಕಿ ಶಕೀಲಾ ಅವರ ಗತಕಾಲ ಗಮನಿಸಿದಾಗ ಅವರ ಹಾದಿ ಹೂವಿನ ಹಾದಿಯೇನು ಆಗಿರಲಿಲ್ಲ. ಅವರ ಬಾಳಿನಲ್ಲಿ ಎಲ್ಲವೂ ವಿಷಾದಮಯ ಸಂಗತಿಗಳೇ. ಚಿಕ್ಕಂದಿನಲ್ಲಿ ಸೂಳ್ಳೂರುಪೇಟ ಬಳಿಯ ಕೋಟೆಯಲ್ಲಿ ಬೆಳೆದ ಶಕೀಲಾ ಮಲಯಾಳಂ ಚಿತ್ರರಂಗಕ್ಕೆ ಅಡಿಯಿಟ್ಟ ಹಿಂದೆ ಸಾಕಷ್ಟು ಚಕಿತಗೊಳಿಸಿ ಹಾಗೆಯೇ ನೋವುಂಟು ಮಾಡುವ ಸಂಗತಿಗಳಿವೆ.

"ನನ್ನಲ್ಲಿ ಅಪರಾಧಿ ಮನೋಭಾವವಿಲ್ಲ...ಆದರೆ ನೋವು ಮಾತ್ರ ದಂಡಿಯಾಗಿದೆ" ಎಂಬ ಅಡಿಬರಹದೊಂದಿಗೆ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಈ ಆತ್ಮಕಥೆ ಈಗ ಅಲ್ಲಿ ಸಂಚಲನ ಮೂಡಿಸಿದೆ. ಈಗ ಈ ಕೃತಿಯನ್ನು ಕನ್ನಡಕ್ಕೆ ಕೆಕೆ ಗಂಗಾಧರ್ ತಂದಿದ್ದಾರೆ.[ಶಕೀಲಾ ಆತ್ಮಕಥೆಯ ಕೆಲವು ಪುಟಗಳು]
ನನ್ನ ಹೆಸರು ಶೃಂಗಾರದೇವತೆಗೆ ಹೋಲಿಕೆಯಾಗಿ ಹೇಗೆ ಬದಲಾಯಿತೋ ಯಾರಿಗೂ ಗೊತ್ತಿಲ್ಲ. ನನ್ನಂತಹ ಅದೆಷ್ಟೋ ಶಕೀಲಾಗಳು ಹೇಗೆ ಹುಟ್ಟುತ್ತಾರೋ, ಹೇಗೆ ರೂಪುಪಡೆದುಕೊಳ್ಳುತ್ತಾರೋ ಎಂಬುದನ್ನು ಎಲ್ಲರಿಗೂ ಗೊತ್ತಾಗಬೇಕು ಎಂದು ಶಕೀಲಾ ಹೇಳಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ 2 ನಲ್ಲಿ ಕೆಲ ವಾರಗಳ ಕಾಲ ಸ್ಪರ್ಧಿಯಾಗಿದ್ದ ಶಕೀಲಾ ಅವರು ಎಲ್ಲರ ಮನ ಗೆದ್ದಿದ್ದರು. ಎಲ್ಲರ ಪ್ರೀತಿಯ ಅಕ್ಕನಾಗಿ ಮನೆಯಿಂದ ಹೊರಬಂದರು.

ಕಾರ್ಯಕ್ರಮ ವಿವರ:
ನಟಿ ಶಕೀಲಾ ಆತ್ಮಕಥೆ ಕನ್ನಡ ಅನುವಾದ ಕೃತಿ ಬಿಡುಗಡೆ
ಸ್ಥಳ: ಕರ್ನಾಟಕ ಪುಸ್ತಕೋತ್ಸವ 2014, ಫ್ರೀಡಂ ಪಾರ್ಕ್, ಬೆಂಗಳೂರು
ದಿನ/ದಿನಾಂಕ: ಶನಿವಾರ, ಆ.23, 2014
ಸಮಯ : ಸಂಜೆ 6.00
ಉಪಸ್ಥಿತಿ: ಶಕೀಲಾ, ನಟಿ
* ಜೋಗಿ, ಲೇಖಕ, ಉದಯವಾಣಿ ಪುರವಣಿ ಸಂಪಾದಕ
* ಅಂಜಲಿ ರಾಮಣ್ಣ, ಲೇಖಕಿ, ವಕೀಲೆ
* ಕೆ.ಕೆ ಗಂಗಾಧರ್, ಲೇಖಕ, ಅನುವಾದಕ
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications