Rashmika Mandanna: ಕಿರುತೆರೆಗೆ 'ಶ್ರೀವಲ್ಲಿ' ಭರ್ಜರಿ ಎಂಟ್ರಿ, ಮಿಸ್ ಮಾಡದೇ ನೋಡಿ
ಬೆಂಗಳೂರು, ಆಗಸ್ಟ್ 02: ನಟನೆ, ಸೌಂದರ್ಯ, ನಗು ಮತ್ತು ಹಾರ್ಟ್ ಸಂಕೇತಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ, ಇಷ್ಟವಾಗುವ ನಟಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಕಿರುತೆರೆಗೆ ಕಾಲಿಡುತ್ತಿದ್ದಾರೆ. ದೊಡ್ಡ ಪರದೆಯಲ್ಲಿ ಕಂಗೊಳ್ಳಿಸಿದ್ದ ಮತ್ತು ರಂಜಿಸಿದ್ದ ನಟಿ ರಶ್ಮಿಕಾ ಮಂದಣ್ಣ ಇದೀಗ ಕಿರುತೆರೆಯಲ್ಲಿ ಕಾಣಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸರ್‌ಪ್ರೈಸ್ ನೀಡಲಿದ್ದಾರೆ.
'ಪುಷ್ಪ 2, ಛಾವಾ' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇರುವ ನಟಿ ರಶ್ಮಿಕಾ ಮಂದಣ್ಣ ಅವರು, ವೇದಿಕೆ ಮೇಲೆ ಬಂದರೆ ಸಾಕು ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ. ಇದೀಗ ತಮ್ಮಿಷ್ಟದ ನಟಿ 'ಆಹಾಸ್ ಇಂಡಿಯನ್ ಐಡಲ್ 3' ಗೆ ಆಗಮಿಸಲಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಖುಷಿ ಹೆಚ್ಚಾಗಿದೆ.

ವಿಜಯ್ ದೇವರಕೊಂಡ ಬಳಿಕ ರಶ್ಮಿಕಾ ಎಂಟ್ರಿ
ಹೌದು, ತೆಲುಗಿನ 'ಆಹಾಸ್ ಇಂಡಿಯನ್ ಐಡಲ್ 3' ಟಿವಿ ಶೋನಲ್ಲಿ ಅತಿಥಿ ತೀರ್ಪುಗಾರರಾಗಿ ನಟಿ ರಶ್ಮಿಕಾ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಈ ಹಿಂದೆ ಇದೇ ಶೋನಲ್ಲಿ ನಟ ವಿಜಯ್ ದೇವಕೊಂಡ ಸಹ ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದರು.
ತೆಲುಗು ಭಾಷೆಯಲ್ಲಿ ಈ ಆಹಾಸ್ ಇಂಡಿಯನ್ ಐಡಲ್ 3 ಟಿವಿ ಶೋ ಅಪಾರ ಫ್ಯಾನ್ಸ್ ಇದ್ದಾರೆ. ನೀವು ಸಹ ನಿಮ್ಮಿಷ್ಟದ ಶೋನಲ್ಲಿ ರಶ್ಮಿಕಾರನ್ನು ಇದೇ ಶುಕ್ರವಾರ ಮತ್ತು ಶನಿವಾರ (ಆಗಸ್ಟ್ 2 &3) ನಲ್ಲಿ ವೀಕ್ಷಿಸಬಹುದು. ಇದು ಈ ಆವೃತ್ತಿಯ 16 ಮತ್ತು 17 ನೇ ಸಂಚಿಕೆ ಎಂದು ತಿಳಿದು ಬಂದಿದೆ. ಇದರಲ್ಲಿ ನಟಿ ರಶ್ಮಿಕಾ ವಿಶೇಷ ತೀರ್ಪುಗಾರರಾಗಿದ್ದಾರೆ. ಈ ಕುರಿತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿವೆ.

ಶೋ ಅಂದ ಹೆಚ್ಚಿಸಲಿದ್ದಾರೆ 'ಶ್ರೀವಲ್ಲಿ'
ತೆಲುಗಿನ 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಜೋಡಿಯು ಒಬ್ಬರಾದ ಬಳಿಕ ಮತ್ತೊಬ್ಬರು ವಿಶೇಷ ಪಾತ್ರದಲ್ಲಿ ಶೋ ಬರುತ್ತಿರುವುದಕ್ಕೆ ಸ್ಪರ್ಧಿಗಳಲ್ಲಿ ಉತ್ಸಾಹ ಹೆಚ್ಚಾಗಿವೆ. ಸ್ಟಾರ್ ನಟಿಯನ್ನು ನೋಡಲು ಅವರು ಉತ್ಸುಕರಾಗಿದ್ದಾರೆ. ಈ ವಾರ ರಶ್ಮಿಕಾ ಶೋನ ಅಂದ ಹೆಚ್ಚಿಸಲಿದ್ದಾರೆ.
ಪುಷ್ಪಾ ಸರಣಿ ಸಿನಿಮಾಗಳಲ್ಲಿ ಶ್ರಿವಲ್ಲಿ ಪಾತ್ರದಲ್ಲಿ ಸಖತ್ ಪಾತ್ರ ದಲ್ಲಿ ರಶ್ಮಿಕಾ ಮಿಂಚಿದ್ದಾರೆ. ಬಾಲಿವುಡ್ ನಲ್ಲಿ ಅನಿಮಲ್‌ನಂತಹ ಹಿಟ್ ಸಿನಿಮಾ ನೀಡಿರುವ ರಶ್ಮಿಕಾ ಅವರ ಪುಷ್ಪಾ 2, ಹಿಂದಿಯ 'ಛಾವಾ' ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ಆಗಲಿವೆ. ಇದರೊಂದಿಗೆ ನಟಿ ರಶ್ಮಿಕಾ 'ದಿ ಗರ್ಲ್‌ಫ್ರೆಂಡ್, ರೈನ್‌ಬೋ, ಸಿಕಂದರ್' ಇನ್ನಿತರ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.












Click it and Unblock the Notifications